ಟಾಪ್ ಸುದ್ದಿಗಳು ಯಾವುವು ಗೊತ್ತಾ? ಇಲ್ಲಿದೆ ನೋಡಿ ಈ ದಿನದ ರೌಂಡ್ ಅಪ್
ಡೇರ್ ಡೆವಿಲ್ ಮುಸ್ತಫಾ’ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಸಿಎಂ ಸಿದ್ದರಾಮಯ್ಯ
ಪ್ರಸಿದ್ಧ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾಗೆ ತೆರಿಗೆ ವಿನಾಯತಿ ಘೋಷಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.
ಚಿತ್ರದ ತಂಡವು ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದು ತೆರಿಗೆ ವಿನಾಯತಿಗೆ ಮನವಿ ಮಾಡಿತ್ತು. ಕೋಮುಸಾಮರಸ್ಯ ಮತ್ತು ಭಾವೈಕ್ಯತೆಯ ಸಂದೇಶ ಸಾರುವ ಸಿನಿಮಾವನ್ನು ಇನ್ನಷ್ಟು ಜನರು ಮತ್ತು ಶಾಲಾ ಮಕ್ಕಳು ನೋಡಲು ಸಹಕಾರಿಯಾಗುವಂತೆ ಮಾಡಲು ತೆರಿಗೆ ವಿನಾಯತಿ ಕಲ್ಪಿಸಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಇದೀಗ ಸಿಎಂ ಸಿದ್ದರಾಮಯ್ಯ ಅವರು ಸಹಮತ ಸೂಚಿಸಿದ್ದಾರೆ.
ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ ಈ ಚಿತ್ರವನ್ನು ಶಶಾಂಕ್ ಸೋಗಾಲ್ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.
ಅಂದಹಾಗೇ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾವನ್ನು ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳೇ ನಿರ್ಮಿಸಿದ್ದಾರೆ. ನಟರಾಕ್ಷಸ ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ಅರ್ಪಿಸಿದ್ದು, ಕೆ ಆರ್ ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ಚಿತ್ರವನ್ನು ವಿತರಿಸಿದೆ. ರಾಹುಲ್ ರಾಯ್ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್ ಶ್ಯಾಮ್ ಸಂಗೀತವಿದೆ.
ʼನೈತಿಕ ಪೊಲೀಸ್’ಗಿರಿ ತಡೆಗೆ ಆ್ಯಂಟಿ ಕಮ್ಯುನಲ್ ವಿಂಗ್ ಕಾರ್ಯಾರಂಭ
ನೈತಿಕ ಪೊಲೀಸ್ ಗಿರಿಗೆ ಕಡಿವಾಣ ಹಾಕಲು ಮಂಗಳೂರಿನಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಕಾರ್ಯಾರಂಭವಾಗಿದೆ.
ಸಿಸಿಬಿ ವಿಭಾಗದ ಎಸಿಪಿ ನೇತೃತ್ವದಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ ಕೆಲಸ ಮಾಡಲಿದ್ದು, ಸಿಎಸ್ ವಿ ಇನ್ಸ್ ಪೆಕ್ಟರ್ ಸೇರಿದಂತೆ ಐವರು ಸಿಬ್ಬಂದಿಯೊಂದಿಗೆ ಆ್ಯಂಟಿ ಕಮ್ಯೂನಲ್ ವಿಂಗ್ ಕಾರ್ಯಾರಂಭಿಸಿದೆ. ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದ್ದಾರೆ.
ಯಾವುದೇ ರೀತಿಯ ದ್ವೇಷ ಭಾಷಣ ಇತರ ಕೋಮು ಸೂಕ್ಷ್ಮ ವಿಚಾರ, ಕೋಮು ಸೂಕ್ಷ್ಮ ಕೊಲೆ, ದನ ಕಳವು, ನೈತಿಕ ಪೊಲೀಸ್ ಗಿರಿ ಮೇಲೆ ಈ ವಿಂಗ್ ನಿಗಾ ಇಡಲಿದೆ.
ಯಾವುದೇ ವಿಚಾರದ ಬಗ್ಗೆ ಎಸಿಪಿ ಸಿಸಿಬಿ ಕಮಿಷನರ್ ಗೆ ಮಾಹಿತಿ ನೀಡಲಿದ್ದಾರೆ. ಕಳೆದ ಎರಡು ದಿನಗಳಿಂದ ಈ ವಿಂಗ್ ಕಾರ್ಯಾಚರಣೆ ಮಾಡುತ್ತಾ ಇದ್ದು, ತಂಡದಲ್ಲಿ ಐದರಿಂದ ಆರು ಪೊಲೀಸ್ ಸಿಬ್ಬಂದಿಗಳ ನೇಮಕ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕೋಮು ಆಧಾರಿತ ನೈತಿಕ ಪೊಲೀಸ್ ಗಿರಿಯನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿ ಆಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಈ ಹಿಂದೆ ಸ್ವತಃ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದರು. ಮಂಗಳೂರು ಭೇಟಿ ವೇಳೆ ಮಾತನಾಡಿದ್ದ ಪರಮೇಶ್ವರ್, ಮಂಗಳೂರು ಕಮೀಷನೇಟರ್ ವ್ಯಾಪ್ತಿಯಲ್ಲಿ ನೂತನ ಪಡೆಯಾದ ಆ್ಯಂಟಿ ಕಮ್ಯೂನಲ್ ವಿಂಗ್ ಸ್ಥಾಪಿಸುವ ಅಗತ್ಯವಿದೆ ಎಂದಿದ್ದರು.
ಪಾಕ್ ನಲ್ಲಿ ಆರ್ಥಿಕ ಬಿಕ್ಕಟ್ಟು- ಶೇರ್ ಮಾರಾಟ ಮಾಡಿ ದೇಶ ತೊರೆಯಲು ಶೆಲ್ ಪೆಟ್ರೋಲಿಯಂ ನಿರ್ಧಾರ
ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ದೈತ್ಯ ಶೆಲ್ ಪೆಟ್ರೋಲಿಯಂ ತನ್ನ ಷೇರುಗಳನ್ನು ಮಾರಾಟ ಮಾಡಿ, ಪಾಕ್ ಮಾರುಕಟ್ಟೆಯಿಂದ ಹೊರ ಬರಲು ನಿರ್ಧಿರಿಸಿದೆ.
ಶೆಲ್ ಪೆಟ್ರೋಲಿಯಂ ಕಂಪನಿ ಲಿಮಿಟೆಡ್ ನ ನಿರ್ದೇಶಕರ ಮಂಡಳಿ ಜೊತೆಗಿನ ತನ್ನ ಸಭೆಯಲ್ಲಿ ಶೆಲ್ ಪಾಕಿಸ್ತಾನ್ ಲಿಮಿಟೆಡ್ ನಲ್ಲಿ ತನ್ನ ಪಾಲನ್ನು ಮಾರಾಟ ಮಾಡುವ ಉದ್ದೇಶವನ್ನು ಪ್ರಕಟಿಸಿದೆ.
ಶೆಲ್ ಪಾಕಿಸ್ತಾನ್ ಲಿಮಿಟೆಡ್ ಯುನೈಟೆಡ್ ಕಿಂಗ್ಡಂನ ಶೆಲ್ ಪೆಟ್ರೋಲಿಯಂ ಕಂಪನಿ ಲಿಮಿಟೆಡ್ನ ಅಂಗಸಂಸ್ಥೆಯಾಗಿದೆ.
ಶೆಲ್ ಪಾಕಿಸ್ತಾನ್ ವಕ್ತಾರರ ಪ್ರಕಾರ, ಜಾಗತಿಕ ಪೆಟ್ರೋಲಿಯಂ ದೈತ್ಯ ಷೇರುಗಳ ಮಾರಾಟದ ಘೋಷಣೆಯು ಕಂಪನಿಯ ವ್ಯವಹಾರ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು.
2023ರ ಜೂನ್ 14ರಂದು ನಡೆದ ಶೆಲ್ ಪಾಕಿಸ್ತಾನ್ ಲಿಮಿಟೆಡ್ (ಎಸ್ಪಿಎಲ್) ನ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಕೈಗೊಂಡ ನಿರ್ಧಾರವನ್ನು ಶೆಲ್ ಪೆಟ್ರೋಲಿಯಂ ಪಾಕಿಸ್ತಾನ್ ಸ್ಟಾಕ್ ಎಕ್ಸ್ಚೇಂಜ್ (ಪಿಎಸ್ಎಕ್ಸ್) ಗೆ ಕಳುಹಿಸಲಾದ ನೋಟಿಸ್ನಲ್ಲಿ ಅನುಮೋದಿಸಿದೆ.
ಪಾಕಿಸ್ತಾನದಲ್ಲಿನ ಆರ್ಥಿಕ ಬಿಕ್ಕಟ್ಟಿನಿಂದ ಮೇ ತಿಂಗಳ ತ ತೀವ್ರ ನಷ್ಟಗೊಳಗಾಗಿದೆ ಎಂದಿದೆ.
ಮೇ ತಿಂಗಳಲ್ಲಿ, ಶೆಲ್ ಪಾಕಿಸ್ತಾನ್ ಲಿಮಿಟೆಡ್ 2023 ರ ಮೊದಲ ತ್ರೈಮಾಸಿಕದಲ್ಲಿ ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟಿನಿಂದ ತೀವ್ರ ನಷ್ಟಗೊಳಗಾಗಿದೆ ಎಂದು ವರದಿ ಮಾಡಿದೆ
ಅಡುಗೆ ಎಣ್ಣೆಯ ಮೇಲಿನ ಆಮದು ಸುಂಕ ಕಡಿತಕ್ಕೆ ಮುಂದಾದ ಕೇಂದ್ರ
ಅಡುಗೆ ಎಣ್ಣೆಯ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಭಾರತವು ಸಂಸ್ಕರಿಸಿದ ಸೋಯಾಯಿಲ್ ಮತ್ತು ಸೂರ್ಯಕಾಂತಿ ಎಣ್ಣೆ ಮೇಲಿನ ಆಮದು ಸುಂಕವನ್ನು ಶೇ. 17.5 ರಿಂದ ಶೇ. 12.5ಕ್ಕೆ ಇಳಿಸಿದೆ.
ಭಾರತ ಕಚ್ಚಾ ಮತ್ತು ಸಂಸ್ಕರಿಸಿದ ತೈಲವನ್ನು ಅರ್ಜೆಂಟೀನಾ, ಬ್ರೆಜಿಲ್, ಉಕ್ರೇನ್ ಮತ್ತು ರಷ್ಯಾದಿಂದ ಈ ಎರಡು ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಚ್ಚಾ ಪಾಮ್ ಎಣ್ಣೆ, ಸೂರ್ಯಕಾಂತಿ ಹಾಗೂ ಸೋಯಾ ಎಣ್ಣೆ ದರಗಳು ಇಳಿಕೆಯಾಗಿವೆ.
ಸಾರ್ವಜನಿಕ ಪ್ರದೇಶಗಳಲ್ಲಿ ನಮಾಜ್ ಮಾಡುವಂತಿಲ್ಲ: ಇಟಲಿ ಸರ್ಕಾರ
ಇಟಲಿ ಸರ್ಕಾರವು ದೇಶದ ಅಧಿಕೃತ ಭಾಷೆಯನ್ನು ಮಾತ್ರ ಮಾತನಾಡಬೇಕು ಎಂದು ಈ ಹಿಂದೆ ಆದೇಶಿಸಿತ್ತು. ಇದೀಗ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದಂತೆ ಮಸೀದಿಗಳನ್ನು ಹೊರತುಪಡಿಸಿ, ದೇಶದ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವಂತಿಲ್ಲ ಎಂದು ಹೊಸ ಮಸೂದೆ ಜಾರಿಗೆ ತಂದಿದೆ.
ಇಟಲಿಯ ಮಾಧ್ಯಮದ ಪ್ರಕಾರ, ಜಾರ್ಜಿಯಾ ಮೇಲೋನಿಯ ನೇತೃತ್ವದ ಸರ್ಕಾರ ಪ್ರಮುಖ ತಿದ್ದುಪಡಿಯನ್ನು ಮಾಡಿದೆ. ಈ ಸಾರ್ವಜನಿಕ ಪ್ರದೇಶನಿಕ ಪ್ರದೇಶಗಳಲ್ಲಿ ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ನಮಾಜ್ ಮಾಡುವುದು ಅಥವಾ ಮಸೀದಿಯಾಗೊ ಪರಿವರ್ತಿಸುವುದನ್ನು ನಿಷೇಧಿಸಲಾಗಿದೆ.
ಈ ಕ್ರಮವನ್ನು ಈ ಕೂಡಲೇ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ.