ನಮ್ಮ ಆರೋಗ್ಯವನ್ನು ನಿಯಂತ್ರಣದಲ್ಲಿ ಇಡಲು ನಾವು ಮನೆಯಲ್ಲಿ ಸಿಗುವಂತ ಕೆಲವು ಪದಾರ್ಥಗಳನ್ನು ಉಪಯೋಗಿಸಿಕೊಳ್ಳುತ್ತೇವೆ. ಅಂತಹ ಪದಾರ್ಥಗಳಲ್ಲಿ ಸೂರ್ಯಕಾಂತಿ ಹೂವಿನ ಬೀಜ ಕೂಡ ಒಂದು. ವಿಶ್ವದ ಸುಂದರವಾದ ಹೂವುಗಳಲ್ಲಿ ಒಂದಾದ ಸೂರ್ಯಕಾಂತಿ ಹೂವಿನ ಬೀಜಗಳು ಆರೋಗ್ಯದ ದೃಷ್ಟಿಯಿಂದಲೂ ತುಂಬಾ ಪ್ರಯೋಜನಕಾರಿ ಆಗಿದೆ. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಸೂರ್ಯಕಾಂತಿ ಹೂವಿನ ಬೀಜಗಳಲ್ಲಿರುವ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಒಂದೊಂದಾಗಿ ನೋಡೋಣಾ.
ಆಹಾರ ತಜ್ಞರ ಪ್ರಕಾರ, ಸೂರ್ಯಕಾಂತಿ ಬೀಜಗಳಲ್ಲಿ ಉತ್ಕರ್ಷಣ ನಿರೋಧಕ, ಉರಿಯೂತದ ಗುಣಲಕ್ಷಣಗಳ ವಿರುದ್ಧ ಹೋರಾಡುವ ಶಕ್ತಿ ಕೂಡ ಅಡಗಿದೆ. ಇದಲ್ಲದೆ, ಸೂರ್ಯಕಾಂತಿ ಬೀಜಗಳಲ್ಲಿ ಫ್ಲೇವನಾಯ್ಡ್ಗಳು, ಪಾಲಿಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ಗಳು ಕೂಡ ಸಮೃದ್ಧವಾಗಿವೆ. ಇದು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಸೂರ್ಯಕಾಂತಿ ಬೀಜಗಳು ಒಮೆಗಾ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ, ಇದು ರಕ್ತನಾಳಗಳಿಗೆ ಪ್ರಯೋಜನಕಾರಿಯಾಗಿದೆ. ಇದು ಅಧಿಕ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಭಿಪ್ರಾಯಪಡಲಾಗಿದೆ.
ಸೂರ್ಯಕಾಂತಿ ಬೀಜಗಳ ಸೇವನೆಯು ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸ್ತನ ಕ್ಯಾನ್ಸರ್ ವಿರುದ್ಧ ರಕ್ಷಣೆಯನ್ನು ನೀಡುತ್ತದೆ. ವಾಸ್ತವವಾಗಿ, ಸೂರ್ಯಕಾಂತಿ ಬೀಜಗಳಲ್ಲಿ ಲಿಗ್ನಾನ್ ಕಂಡು ಬರುತ್ತದೆ. ಲಿಗ್ನಾನ್ ಒಂದು ರೀತಿಯ ಪಾಲಿಫಿನಾಲ್ ಆಗಿದ್ದು ಅದು ದೇಹದಲ್ಲಿ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸೂರ್ಯಕಾಂತಿ ಬೀಜವನ್ನು ತಮ್ಮ ಪ್ರತಿನಿತ್ಯದ ಆಹಾರದಲ್ಲಿ ಉಪಯೋಗಿಸಿಕೊಳ್ಳಬೇಕು.
ಇದು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ.ಸೂರ್ಯಕಾಂತಿ ಬೀಜಗಳಲ್ಲಿ ಕಂಡು ಬರುವ ಕ್ಯಾಲ್ಸಿಯಂ ಮತ್ತು ಸತುವುಗಳಂತಹ ಪೋಷಕಾಂಶಗಳು ಮೆದುಳಿನ ಬೆಳವಣಿಗೆಗೆ ಪ್ರಯೋಜನಕಾರಿಯಾಗಿದೆ. ಇದು ಮಾನಸಿಕ ಆರೋಗ್ಯಕ್ಕೂ ಕೂಡ ತುಂಬಾ ಪ್ರಯೋಜನಕಾರಿ ಎಂದು ಇದರ ಬಗ್ಗೆ ಅಧ್ಯಯನ ನಡೆಸಿದ ತಂಡವು ನಮಗೆ ತಿಳಿಸುತ್ತದೆ.