ಬೆಂಗಳೂರಿನ ಯಶವಂತಪುರ ಯಾರ್ಡ್ನಲ್ಲಿ ರೈಲ್ವೆ ಕಾಮಗಾರಿ ನಡೆಯುತ್ತಿರುವ ಹಿನ್ನಲೆ ಯಶವಂತಪುರ ಜಂಕ್ಷನ್ನಿಂದ ಹೊರಡುವ ಕೆಲವು ರೈಲುಗಳು ರದ್ದಾಗಿದ್ದು, ಇನ್ನು ಕೆಲವು ರೈಲುಗಳ ಮಾರ್ಗ ಬದಲಾವಣೆಯಾಗಿದೆ ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗೀಯ ರೈಲ್ವೆ ತಿಳಿಸಿದೆ.
ಯಶವಂತಪುರ ಯಾರ್ಡ್ನಲ್ಲಿ ಸಿಗ್ನಲಿಂಗ್ ವ್ಯವಸ್ಥೆ ನಿರ್ವಹಣೆ ಕೆಲಸಗಳು ನಡೆಯುತ್ತಿದ್ದು, ಯಶವಂತಪುರ ಜಂಕ್ಷನ್ನಿಂದ ಹೊರಡುವ ಮತ್ತು ಯಶವಂತಪುರಕ್ಕೆ ಬರುವ ರೈಲುಗಳನ್ನು ಜೂನ್ 14 ಮತ್ತು 15 ರಂದು ರದ್ದುಗೊಳಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗೀಯ ರೈಲ್ವೆ ಮನವಿ ಮಾಡಿದೆ.
ಸಂಪೂರ್ಣ ರದ್ದಾಗಿರುವ ರೈಲುಗಳು:
*ಕೆ ಎಸ್ ಆರ್ ಬೆಂಗಳೂರು – ತುಮಕೂರು – ಕೆ ಎಸ್ ಆರ್ ಬೆಂಗಳೂರು ಮೆಮು (ರೈಲು ಸಂಖ್ಯೆ- 06575 / 06576 )
* ಚಾಮರಾಜನಗರ – ಯಶವಂತಪುರ – ಚಾಮರಾಜನಗರ ಎಕ್ಸ್ಪ್ರೆಸ್ಗಳನ್ನು ರದ್ದುಗೊಳಿಸಲಾಗಿದೆ. (ರೈಲು ಸಂಖ್ಯೆ-16239 / 16240)
ಭಾಗಶಃ ರದ್ದಾಗಿರುವ ರೈಲುಗಳು:
* ಯಶವಂತಪುರ – ವಾಸ್ಕೋ-ಡಿ-ಗಾಮಾ ಎಕ್ಸ್ಪ್ರೆಸ್ (ರೈಲು ಸಂಖ್ಯೆ – 17309) ತುಮಕೂರಿನಿಂದ ಹೊರಡುತ್ತದೆ.
* ವಾಸ್ಕೋ-ಡಿ-ಗಾಮಾ – ಯವಂತಪುರ ಎಕ್ಸ್ಪ್ರೆಸ್ (ರೈಲು ಸಂಖ್ಯೆ – 17310 ) ತುಮಕೂರಿನಲ್ಲಿ ಕೊನೆಗೊಳ್ಳುತ್ತದೆ.
*ಯಶವಂತಪುರ -ಹೊಸೂರು ಮೆಮು ಎಕ್ಸ್ಪ್ರೆಸ್ ವಿಶೇಷ ಮತ್ತು ಯಶವಂತಪುರ – ಸೇಲಂ ಎಕ್ಸ್ಪ್ರೆಸ್ ಬಾಣಸವಾಡಿಯಿಂದ ಹೊರಡುತ್ತದೆ.
*ಸೇಲಂ – ಯಶವಂತಪುರ ಎಕ್ಸ್ಪ್ರೆಸ್ ಬಾಣಸವಾಡಿಯಲ್ಲಿ ಕೊನೆಗೊಳ್ಳುತ್ತದೆ.
* ದೇವನಹಳ್ಳಿ – ಯಶವಂತಪುರ ಮೆಮು ಎಕ್ಸ್ಪ್ರೆಸ್ ವಿಶೇಷವು ಯಲಹಂಕದಲ್ಲಿ ಕೊನೆಗೊಳ್ಳುತ್ತದೆ.
* ಯಶವಂತಪುರ – ಮಚಲಿಪಟ್ಟಣಂ ಎಕ್ಸ್ಪ್ರೆಸ್ ಶ್ರೀ ಸತ್ಯಸಾಯಿ ಪ್ರಶಾಂತಿನಿಲಯದಿಂದ ಆರಂಭವಾಗುತ್ತದೆ.
* ಮಚಲಿಪಟ್ಟಣಂ – ಯಶವಂತಪುರ ಎಕ್ಸ್ಪ್ರೆಸ್ ಶ್ರೀ ಸತ್ಯ ಸಾಯಿ ಪ್ರಶಾಂತಿನಿಲಯದಲ್ಲಿ ಕೊನೆಗೊಳ್ಳುತ್ತದೆ.
* ತುಮಕೂರು-ಚಾಮರಾಜನಗರ ಪ್ಯಾಸೆಂಜರ್ ವಿಶೇಷ ರೈಲು ಕೆಎಸ್ಆರ್ ಬೆಂಗಳೂರಿನಿಂದ ಹೊರಡುತ್ತದೆ.
* ಚಾಮರಾಜನಗರ-ತುಮಕೂರು ಪ್ಯಾಸೆಂಜರ್ ವಿಶೇಷ ರೈಲು ಕೆ ಎಸ್ ಆರ್ ಬೆಂಗಳೂರಿನಲ್ಲಿ ಕೊನೆಗೊಳ್ಳುತ್ತದೆ.
* ಮೈಸೂರು – ಯಶವಂತಪುರ ಎಕ್ಸ್ಪ್ರೆಸ್ ಚಿಕ್ಕಬಾಣವಾರದಲ್ಲಿ ಕೊನೆಗೊಳ್ಳುತ್ತದೆ.
*ಯಶವಂತಪುರ-ಮೈಸೂರು ಎಕ್ಸ್ಪ್ರೆಸ್ ಚಿಕ್ಕಬಾಣಾವರದಿಂದ ಪ್ರಾರಂಭವಾಗುತ್ತದೆ
ವೇಳೆ ಬದಲಾದ ರೈಲು:
ತಾಳಗುಪ್ಪ ಎಕ್ಸ್ಪ್ರೆಸ್ಅರ್ಧ ಗಂಟೆ ತಡ ವಾಗಿದ್ದು ಜೂನ್ 14 ಮತ್ತು 15 ರಂದು ಮಧಾಹ್ನ 3 ಗಂಟೆಗೆ ಕೆಎಸ್ಆರ್ ಬೆಂಗಳೂರಿನಿಂದ ಪ್ರಾರಂಭವಾಗಬೇಕಾದ ರೈಲು ಸಂಖ್ಯೆ – 20651 ಕೆಎಸ್ಆರ್ ಬೆಂಗಳೂರು – ತಾಳಗುಪ್ಪ ಎಕ್ಸ್ಪ್ರೆಸ್ 3.30 ಗಂಟೆಗೆ ಹೊರಡುತ್ತದೆ.