ಪ್ರತಿಯೊಬ್ಬ ಹೆಣ್ಣು ತಾನೂ ಸದಾ ಸುಂದರವಾಗಿ ಕಾಣಬಯಸುತ್ತಾಳೆ.ಅದರಲ್ಲೂ ತನ್ನ ಮದುವೆಯ ದಿನದಂದು ಜಗತ್ತಿನ ಅತೀ ಸುಂದರ ಮದುಮಗಳಾಗಿ ಕಾಣಬಯಸುತ್ತಾಳೆ. ಆದರಿಂದ ವೃತ್ತಿಪರ ಮೇಕಪ್ ಕಲಾವಿದರ ಕೈ ಚಳಕವಿಲ್ಲದೆ ವಧುವಿನ ಅಲಂಕರಾವು ಅಪೂರ್ಣವಾದಂತೆ. ಮೇಕಪ್ ಕಲಾವಿದರು ಮದುಮಗಳ ವಿಶೇಷ ದಿನಕ್ಕಾಗಿ ಅವಳನ್ನು ಗೊಂಬೆಯಂತೆ ತಯಾರು ಮಾಡಬಹುದು. ಪ್ರತಿ ವಧು ತಾನು ಇದೇ ರೀತಿ ಕಾಣಲು ಬಯಸುವ ವಧುವಿನ ಆಶಯದ ಚಿತ್ರವನ್ನು ಹೊಂದಿರುತ್ತಾಳೆ. ಆಕೆಯ ಆಶಯಕ್ಕೆ ತಕ್ಕಂತೆ ಆಕೆಯನ್ನು ತಯಾರುಮಾಡುವ ಸಾಮರ್ಥ್ಯ ಮೇಕಪ್ ಕಲಾವಿದರಿಂದ ಮಾತ್ರ ಸಾಧ್ಯ.
ನಗರದಲ್ಲಿ ಅತ್ಯುತ್ತಮ ಮೇಕಪ್ ಕಲಾವಿದರನ್ನು ಹುಡುಕುವುದು ಕೊಂಚ ಕಷ್ಟದ ಕೆಲಸ. ಎಕೆಂದರೆ ಪಕ್ಕ ವೃತ್ತಿಪರ ಮೇಕಪ್ ಕಲಾವಿದರಿಂದ ಮೇಕಪ್ ಮಾಡಿಸಿಕೊಂಡರೆ ತ್ವಚೆಗೆ ಹಾನಿಯಾಗುವ ಸಾಧ್ಯತೆಗಳು ಕಡಿಮೆ ಅನ್ನುವ ಕಾರಣಕ್ಕಾಗಿ.
ನಾವು ಬಯಸುವ ಸರಿಯಾದ ರೀತಿಯ ಮೇಕಪ್ ಕಲಾವಿದರಿಂದ ಆಯ್ಕೆ ಮಾಡಲು ನಮಗೆ ಸಾಕಷ್ಟು ಆಯ್ಕೆಗಳಿವೆ.
ಎಚ್ ಡಿ ಮೇಕಪ್: ಇದು ಬ್ರಷ್ ಗಳು ಮತ್ತು ಎಚ್ಡಿ ಫೌಂಡೇಶನ್ಗಳನ್ನು ಬಳಸಿಕೊಂಡು ಮಾಡುವ ನಿಯಮಿತ ವಧುವಿನ ಮೇಕಪ್ ಆಗಿದ್ದು, ಇದರಿಂದ ವಧುವಿನ ಚರ್ಮವು ಕ್ಯಾಮೆರಾದಲ್ಲಿ ದೋಷರಹಿತವಾಗಿ ಕಾಣುತ್ತದೆ.
ಏರ್ ಬ್ರಷ್: ಇದು ಏರ್ ಗನ್ ನೊಂದಿಗೆ ಹಗುರವಾದ ಮೇಕಪ್ ಅಪ್ಲಿಕೇಶನ್ ಆಗಿದೆ. ಏರ್ ಬ್ರಷ್ ಅನ್ನು ಸಾಮಾನ್ಯವಾಗಿ ತುಂಬಾ ಸಮಸ್ಯಾತ್ಮಕ ಚರ್ಮಕ್ಕೆ ಆಯ್ಕೆ ಮಾಡಲಾಗುತ್ತದೆ. ಗುಳ್ಳೆಗಳನ್ನು ಹೊಂದಿರುವ ಚರ್ಮ, ಎಣ್ಣೆಯುಕ್ತ ಚರ್ಮದ ಟೋನ್ ಗಳು ಮತ್ತು ಬೇಸಿಗೆಯ ತಿಂಗಳುಗಳಲ್ಲಿ ಇದು ಹೆಚ್ಚು ಕಾಲ ಉಳಿಯುವಂತೆ ಮಾಡಲು ಈ ವಿಧಾನವನ್ನು ಅನುಸರಿಸುತ್ತಾರೆ.
ನಮ್ಮ ಪ್ರದೇಶದಲ್ಲಿ ಪರಿಪೂರ್ಣ ವಧುವಿನ ಮೇಕಪ್ ಕಲಾವಿದನನ್ನು ಆಯ್ಕೆಗೆ ಇಂದು ಸಾಕಷ್ಟು ಜಾಲಾತಾಣಗಳಿವೆ ಅವುಗಳನ್ನು ಡೌನ್ಲೊಡ್ ಮಾಡಿಕೊಂಡು ಯಾವುದೇ ಪ್ರದೇಶದಲ್ಲಿ ಮೇಕಪ್ ಕಲಾವಿದನನ್ನು ಹುಡುಕಬಹದು. ಪ್ರತಿ ವಧು ಮತ್ತು ಬಜೆಟ್ ಗಾಗಿ ತಮ್ಮ ಪರಿಸರದ ಮತ್ತು ಸುತ್ತಮುತ್ತಲಿನ ಮೇಕಪ್ ಕಲಾವಿದರನ್ನು ಹೊಂದಿದೆ. ತಮ್ಮಗೆ ಸರಿಹೊಂದುವ ಮೇಕಪ್ ಆರ್ಟಿಸ್ಟ್ ಆಯ್ಕೆ ಮಾಡಬಹುದು.
ಫ್ರೀಲ್ಯಾನ್ಸರ್ಗಳು ಮತ್ತು ಸೆಲೆಬ್ರಿಟಿ ಮೇಕಪ್ ಕಲಾವಿದರು ದೇಶ ಮತ್ತು ವಿದೇಶಗಳಲ್ಲಿ ವೃತ್ತಿಪರರನ್ನು ಹೊಂದಿರುತ್ತಾರೆ. ಜಾಲಾತಾಣದಲ್ಲಿರುವ ಇವರನ್ನು ಪೋನ್ ಮೂಲಕ ನೇರವಾಗಿ ಸಂಪರ್ಕಿಸಬಹುದು.
ಪ್ರತಿ ಸಮಾರಂಭಕ್ಕೂ ನಮ್ಮ ಸುತ್ತಮುತ್ತ ಕಡಿಮೆ ಬಜೆಟ್ನ ಅತ್ಯುತ್ತಮ ಮೇಕಪ್ ಕಲಾವಿದರು, ವೃತ್ತಿಪರ ಮೇಕಪ್ ಕಲಾವಿದರು ಉತ್ತಮ ಸೇವೆ ನೀಡುತ್ತಿರುತ್ತಾರೆ. ಅಧಿಕ ವ್ಯಾಪ್ತಿಯಲ್ಲಿ ವಧುಗಳನ್ನು ಗ್ಲಾಮ್ ಮಾಡಲು ಸಹಾಯ ಮಾಡುವ ಅನೇಕ ಪ್ರಮಾಣೀಕೃತ ಮೇಕಪ್ ಕಲಾವಿದರಿದ್ದಾರೆ.
ವಧುವಿನ ಮೇಕಪ್ನ ವೆಚ್ಚವು ಅವರು ನೀಡುವ ಸೇವೆಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುತ್ತದೆ. ವಿವಿಧ ಬಜೆಟ್ ಗಳಲ್ಲಿ ಮದುವೆ ಮೇಕಪ್ ಕಲಾವಿದರ ಪಟ್ಟಿ ಲಭ್ಯವಿರುತ್ತದೆ. ಆದ್ದರಿಂದ, ಇದು ಸಂಪೂರ್ಣವಾಗಿ ನಮ್ಮ ಬಜೆಟ್ ಮೇಲೆ ಅವಲಂಬಿತವಾಗಿದೆ.