ಇಂದಿಗೂ ಎಲ್ಲರ ಮನೆ ಮಾತಾಗಿರುವ ʼಕಾಂತಾರʼ ಚಿತ್ರ ಬಿಡುಗಡೆಗೊಂಡು ಇಂದಿಗೆ ಒಂದು ವರ್ಷ ಪೂರೈಸಿದೆ. ಕಳೆದ ವರ್ಷ ಕಳೆದ ವರ್ಷ ಇದೇ ಸಿನಿಮಾ ತೆರೆ ಮೇಲೆ ಅಪ್ಪಳಿಸಿ ಇಡೀ ವಿಶ್ವದ ಸಿನಿ ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿತ್ತು.
ಇದೀಗ ಕಾಂತಾರ ಚಿತ್ರ ಬಿಡುಗಡೆಗೊಳಿಸಿ ಇಂದಿಗೆ ಒಂದು ವರ್ಷ ಪೂರೈಸಿದೆ. ಈ ಅದ್ಭುತ ಯಶಸ್ಸಿಗೆ ಕಾರಣಕರ್ತರಾಗಿರುವ ಪ್ರೇಕ್ಷಕರಿಗೆ ಚಿತ್ರತಂಡ ಧನ್ಯವಾದ ತಿಳಿಸಿದೆ. ಇದರ ಸಂಭ್ರಮಾಚರಣೆಯ ಸಲುವಾಗಿ ಚಿತ್ರತಂಡ ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡಿದೆ.
ಇಡೀ ಸಿನಿಮಾದ ಮೇಕಿಂಗ್ ನಿಂದ ಹಿಡಿದು ಯಶಸ್ಸಿನವರೆಗೆ ನಡೆದ ಅದ್ಭುತ ಕ್ಷಣಗಳನ್ನು ವಿಡಿಯೋಮ ಮೂಲಕ ಹಂಚಿಕೊಂಡಿದೆ.
ಚಿತ್ರದ ಪ್ರಮುಖ ಡೈಲಾಗ್ ಆಗಿರುವ “ಬೆಳಕು, ಬೆಳಕಲ್ಲಿ ಕಣ್ಣ ಮುಂದೆ ಇರುವುದೆಲ್ಲ ಕಾಣಿಸುತ್ತದೆ. ಆದರೆ ಇದು ಬೆಳಕೆಲ್ಲಾ ದರ್ಶನ” ಎಂದು ಧ್ವನಿಯ ಮೂಲಕ ಪ್ರಾರಂಭಗೊಳ್ಳುವ ಈ ವಿಡಿಯೋ, ನಂತರದಲ್ಲಿ ದೈವಾರಾಧನೆ, ಭೂತಕೋಲ, ರಿಷಭ್ ಶೆಟ್ಟಿ ಅವರ ಮಾತು, ಸಿನಿಮಾದ ಮೇಕಿಂಗ್, ಪ್ರೀಮಿಯರ್ ಶೋನ ಕೆಲವು ತುಣುಕುಗಳು, ಅಭಿಮಾನಿಗಳ ಅಭಿಪ್ರಾಯ ಹೀಗೆ ಎಲ್ಲಾ ಪ್ರಮುಖ ದೃಶ್ಯಗಳನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.