ಸ್ಯಾಂಡಲ್ವುಡ್ ನಟಿ ರಾಧಿಕಾ ಪಂಡಿತ್ ತಮ್ಮ ಅದ್ಭುತ ನಟನೆಯ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಸದಾ ನಗುತ್ತಿರುವ ರಾಧಿಕಾ ತಮ್ಮ ಸುತ್ತಲಿನವರು ಖುಷಿಯಿಂದ ಇರುವಂತೆ ನೋಡಿಕೊಳ್ತಾರೆ.
ರಾಧಿಕಾ ಪಂಡಿತ್ ಮಕ್ಕಳಾದ ಮೇಲೆ ನಟನೆಯಿಂದ ದೂರ ಉಳಿದಿದ್ದಾರೆ. ತಮ್ಮ ಸಂಸಾರ, ಮಕ್ಕಳನ್ನು ನೋಡಿಕೊಂಡು ಖುಷಿ ಪಡ್ತಾರೆ. ಎಂಜಾಯ್ ಮಾಡ್ತಾರೆ. ಅಭಿಮಾನಿಗಳ ನೆಚ್ಚಿನ ನಟಿ ರಾಧಿಕಾ ಪಂಡಿತ್ ತಮ್ಮ ಮುದ್ದಾದ ಮಕ್ಕಳಾದ ಐರಾ, ಯಥರ್ವ್ ಜೊತೆ ಗಿಡಗಳನ್ನು ನೆಟ್ಟಿದ್ದಾರೆ. ಗಿಡ ನೆಟ್ಟು ನೋಡಿ, ನಿಮ್ಮ ಹೃದಯ ಬೆಳೆಯುತ್ತೆ ಎಂದು ಬರೆದುಕೊಂಡಿದ್ದಾರೆ.
ಯಥರ್ವ್ ಮತ್ತು ಐರಾ ಅಮ್ಮನನ್ನು ನೋಡಿಕೊಂಡು, ಪಾಟ್ ಗಳಿಗೆ ಮಣ್ಣು ತುಂಬಿ ಗಿಡ ನೆಡುವ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಮಕ್ಕಳಿಗೆ ಪರಿಸರ ಸಂರಕ್ಷಣೆಯ ಪಾಠ ಹೇಳಿಕೊಟ್ಟಿದ್ದಾರೆ.
ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಫೋಟೋಗಳನ್ನು ಆಗಾಗ ಶೇರ್ ಮಾಡ್ತಾ ಇರ್ತಾರೆ. ಅಭಿಮಾನಿಗಳು ಸಹ ಅವನ್ನು ಮೆಚ್ಚುತ್ತಾರೆ. ರಾಧಿಕಾ ಪಂಡಿತ್ ಅವರು ಈ ಸರಳತನ ಜನರಿಗೆ ಮೆಚ್ಚುಗೆ ಆಗಿದೆ.