ಮುಂಬರಲಿರುವ ಏಷ್ಯಾಕಪ್ ಮತ್ತು ಐಸಿಸಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗಳ ಡಿಜಿಟಲ್ ಪ್ರಸಾರದ ಹಕ್ಕು ಹೊಂದಿರುವ ಡಿಸ್ನಿ ಹಾಟ್ಸ್ಟಾರ್ ಈಗ ಆ ಪಂದ್ಯಗಳನ್ನು ತನ್ನ ಪ್ಲಾಟ್ಫಾರ್ಮ್ನಲ್ಲಿ ಉಚಿತವಾಗಿ ಪ್ರಸಾರ ಮಾಡಲು ನಿರ್ಧರಿಸಿದೆ.
ಭಾರತದಲ್ಲಿ ಸಾಧ್ಯವಾದಷ್ಟು ಹೆಚ್ಚು ಜನರಿಗೆ ಕ್ರಿಕೆಟ್ ಪಂದ್ಯಗಳನ್ನು ನೋಡುವ ಅವಕಾಶ ಸಿಗಲಿ ಎಂಬ ಕಾರಣಕ್ಕೆ ಸ್ಟ್ರೀಮಿಂಗ್ ಅನ್ನು ಉಚಿತವಾಗಿ ನೀಡಲು ನಿರ್ಧರಿಸಿರುವುದಾಗಿ ಡಿಸ್ನಿ ಹಾಟ್ಸ್ಟಾರ್ ಸಂಸ್ಥೆ ತಿಳಿಸಿದೆ.
ಈ ಹಿಂದೆ ಐಪಿಎಲ್ ಪಂದ್ಯಗಳ ಡಿಜಿಟಲ್ ಪ್ರಸಾರದ ಹಕ್ಕು ಪಡೆದಿದ್ದ ಡಿಸ್ನಿ ಹಾಟ್ಸ್ಟಾರ್ಗೆ ಹೆಚ್ಚಿನ ವೀಕ್ಷಕರು ಸಿಕ್ಕಿರಲಿಲ್ಲ. ಹಣ ಪಾವತಿ ಮಾಡಿ ಕ್ರಿಕೆಟ್ ನೋಡಬೇಕಿತ್ತು ಇದರಿಂದಾಗಿ ವೀಕ್ಷಕರ ಸಂಖ್ಯೆ ಕಡಿಮೆ ಆಗಿತ್ತು.
2023ರ ಐಪಿಎಲ್ ಟೂರ್ನಿಯ ಡಿಜಿಟಲ್ ಪ್ರಸಾರದ ಹಕ್ಕು ಪಡೆದಿದ್ದ ಜಿಯೋಸಿನಿಮಾ ವೀಕ್ಷಣೆಯಲ್ಲಿ ಹೊಸ ವಿಶ್ವದಾಖಲೆ ಬರೆದಿತ್ತು. ಮೊದಲ ಬಾರಿಗೆ ಐಪಿಎಲ್ ಪಂದ್ಯಗಳನ್ನು ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ಉಚಿತವಾಗಿ ಪ್ರಸಾರ ಮಾಡಲಾಗಿತ್ತು . ಜಿಯೋಸಿನಿಮಾವು ಐಪಿಎಲ್ ಪಂದ್ಯಗಳ ಪ್ರಸಾರವನ್ನು ಉಚಿತವಾಗಿ ನೀಡಿದ್ದರಿಂದ ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ಸುಮಾರು 45 ಕೋಟಿಯಷ್ಟು ಜನರು ಐಪಿಎಲ್ ವೀಕ್ಷಿಸಿದ್ದರು. ಫೈನಲ್ ಪಂದ್ಯದಲ್ಲಿ 3 ಕೋಟಿಗೂ ಹೆಚ್ಚು ಮಂದಿ ಲೈವ್ ವೀಕ್ಷಣೆ ಮಾಡಿ ದಾಖಲೆ ಸೃಷ್ಟಿಯಾಗಿದೆ.