ಮನುಷ್ಯ ಪ್ರಪಂಚದಿಂದ ದೂರವಾಗುವಾಗ ಆತನ ಪ್ರತಿಯೊಂದು ದೇಹದ ಅಂಗಾಂಗ ಕೂಡ ನಿಷ್ಕ್ರಿಯಗೊಳ್ಳುತ್ತದೆ. ಆದರೆ ಮೆದುಳು ಮಾತ್ರ ಹಾಗಲ್ಲ ಅದಕ್ಕೆ ಜೀವವಿರುತ್ತದೆ. ಈಗಿನ ಆಧುನಿಕ ಪ್ರಪಂಚದಲ್ಲಿ ಅಭಿವೃದ್ಧಿಗೊಂಡ ವೈದ್ಯಕೀಯ ಉಪಕರಣಗಳಿಂದ ಒಬ್ಬ ವ್ಯಕ್ತಿ ಸಾಯುವ ಸಂದರ್ಭದಲ್ಲಿ ಆತನ ದೇಹದಿಂದ ಆತ್ಮ ಹೇಗೆ ದೂರವಾಗುತ್ತದೆ ಎಂಬುದನ್ನು ಸಹ ರೆಕಾರ್ಡ್ ಮಾಡುವ ಸೌಲಭ್ಯವನ್ನು ನಾವು ಹೊಂದಿದ್ದೇವೆ.
ಇದು ಅಲ್ಲದೆ, ಕೆಲವರು ಸತ್ತ ಆತ್ಮಗಳ ಜೊತೆ ಮಾತನ್ನು ಸಹ ಆಡಿದ್ದಾರೆ. ಇಷ್ಟೊಂದು ಮುಂದುವರೆದಿರುವ ಈ ಜಗತ್ತಿನಲ್ಲಿ ವ್ಯಕ್ತಿಯು ಸಾಯುವ ಸಂದರ್ಭದಲ್ಲಿ ಆತನ ಮೆದುಳು ಹೇಗೆಲ್ಲಾ ಕೆಲಸ ಮಾಡುತ್ತೆ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಪ್ರಯೋಗವನ್ನು ಮಾಡಲಾಗಿದೆ. ಹುಟ್ಟಿದಾ ಗಿನಿಂದ ಸಾಯುವವರೆಗೂ ನಿರಂತರವಾಗಿ ಕೆಲಸ ಮಾಡುವ ಮೆದುಳು ವ್ಯಕ್ತಿ ಸಾಯುವ ಸಂದರ್ಭದಲ್ಲಿ ಏನೆಲ್ಲಾ ಆಲೋಚನೆ ಮಾಡುತ್ತದೆ ಎಂಬುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ಸಂಶೋಧನೆ ಪ್ರಕಾರ ನಮ್ಮ ಜೊತೆ ಇದ್ದಂತಹ ಯಾರಾದರೂ ವ್ಯಕ್ತಿ ಈ ಜಗತ್ತಿನಿಂದ ದೂರವಾಗುವ ಸಂದರ್ಭದಲ್ಲಿ ಅವರ ಮೆದುಳು ನಮ್ಮ ಜೊತೆ ಕಳೆದ ಆನಂದಮಯ ಕ್ಷಣಗಳನ್ನು ಅಥವಾ ಅವರ ಜೀವನದಲ್ಲಿ ಸಿಕ್ಕಂತಹ ಸುಂದರ ಸಂದರ್ಭಗಳನ್ನು ಮೆಲೆಕು ಹಾಕುತ್ತದೆ ಎಂದು ಸಂಶೋಧನೆ ಯನ್ನು ಆಯೋಜಿಸಿದ ಖ್ಯಾತ ನರರೋಗ ತಜ್ಞರಾದ ಡಾ. ಅಜ್ಮಲ್ ಹೇಳಿಕೊಂಡಿದ್ದಾರೆ. ಸಂಶೋಧನೆಯಲ್ಲಿ ಎಪಿಲೆಪ್ಸಿ ಗೆ ಗುರಿಯಾಗಿದ್ದ 87 ವರ್ಷದ ಒಬ್ಬ ವ್ಯಕ್ತಿಯನ್ನು ಈ ಪ್ರಕ್ರಿಯೆಗೆ ಬಳಸಿಕೊಳ್ಳಲಾಗಿತ್ತು. ಆತ ಸಾಯುತ್ತಿರುವ ಸಂದರ್ಭದಲ್ಲಿ ಮೆದುಳಿನಲ್ಲಿ ಏನಾಗುತ್ತದೆ ಎಂಬುದನ್ನು ಕಂಡುಹಿಡಿಯುವ ಸಲುವಾಗಿ ಅಧ್ಯಯನ ಕೈಗೊಳ್ಳಲಾಗಿತ್ತು.
ಯಾವ ವ್ಯಕ್ತಿ ಕನಸು ಕಾಣುವಾಗ ಮತ್ತು ಧ್ಯಾನ ಮಾಡುವಾಗ ಕಂಡುಬರುವ Rhythmic Wave Patterns ತರಹ ಆ ವ್ಯಕ್ತಿ ಪ್ರಾಣ ಬಿಡುತ್ತಿರುವಾಗ ಕೂಡ ಕಂಡುಬಂದಿತ್ತು ಎಂಬುದು ಸಂಶೋಧಕರು ಹೇಳಿದ್ದಾರೆ. ಇದಕ್ಕಾಗಿ ಸಂಶೋಧಕರು electroence phalography (EEG) ಬಳಸಿಕೊಂಡಿದ್ದರು. ಕೊನೆಯ ಸಂದರ್ಭದಲ್ಲಿ ವ್ಯಕ್ತಿಗೆ ಹಾರ್ಟ್ ಅಟ್ಯಾಕ್ ಆಗಿ ವ್ಯಕ್ತಿ ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ವೈದ್ಯರಿಗೆ ಆ ವ್ಯಕ್ತಿಯ ಮೆದುಳು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದು ಕೊಳ್ಳಬೇಕಾಗಿತ್ತು.ಹಾಗಾಗಿ ಮೊದಲ ಬಾರಿಗೆ ವ್ಯಕ್ತಿ ಸಾಯುವ ಸಂದರ್ಭದ ಆಸುಪಾಸಿನ 900 ಸೆಕೆಂಡ್ ಗಳು ಸಂಪೂರ್ಣವಾಗಿ ರೆಕಾರ್ಡ್ ಮಾಡಲಾಗಿತ್ತು.ಅದರಲ್ಲೂ ವಿಶೇಷವಾಗಿ ಹೃದಯ ತನ್ನ ಬಡಿತ ನಿಲ್ಲಿ ಸುವ 30 ಸೆಕೆಂಡ್ ಆಸುಪಾಸಿನಲ್ಲಿ ಮೆದುಳು ಹೇಗೆ ಕೆಲಸ ಮಾಡುತ್ತದೆ ಎಂಬುದು ಅಚ್ಚರಿಯ ವಿಷಯವಾಗಿತ್ತು.
ಸಂಶೋಧಕರು ಹೇಳುವಂತೆ ಹೃದಯ ಬಡಿದುಕೊಳ್ಳುತ್ತಿದ್ದಾಗ ಮತ್ತು ತನ್ನ ಕೆಲಸ ನಿಲ್ಲಿಸಿದಾಗ ನರಮಂಡಲದಲ್ಲಿ ಆಲ್ಫಾ, ಬೀಟಾ, ಗಾಮ, ಡೆಲ್ಟಾ, ತೀಟ ಈ ರೀತಿಯ ಮೆದುಳಿನ ಅಲೆಗಳು ಕಂಡುಬಂದವು. ಇವು ಸಾಧಾರಣವಾಗಿ ಒಬ್ಬ ವ್ಯಕ್ತಿ ಬದುಕಿದ್ದಾಗ ಕಂಡುಬರುವ ಅಲೆಗಳಂತೆ ಇದ್ದವು. ವ್ಯಕ್ತಿ ಸಾಯುವ ಮುಂಚೆ ಮೆದುಳಿನ ಕಾರ್ಯ ಚಟುವಟಿಕೆ ಬದುಕಿ ಸಹಜವಾಗಿ ಓಡಾಡಿಕೊಂಡಿರುವ ವ್ಯಕ್ತಿಯಲ್ಲಿ ಗಾಮ ಮೆದುಳಿನ ಅಲೆಗಳು ಕಾಣಿಸುತ್ತವೆ. ಯಾವ ಸಂದ ರ್ಭದಲ್ಲಿ ಅಂದರೆ ವ್ಯಕ್ತಿ ಯಾವುದಾದರೂ ವಿಚಾರದ ಮೇಲೆ ಗಮನ ಇರಿಸಿದಾಗ, ಕನಸು ಕಾಣುವಾಗ, ಧ್ಯಾನ ಮಾಡುವಾಗ, ನೆನಪು ಮಾಡಿಕೊಳ್ಳುವಾಗ, ವಿಷಯ ವನ್ನು ಸಂಸ್ಕರಿಸುವಾಗ, ಹಿಂದಿನ ನೆನಪನ್ನು ಮೆಲುಕು ಹಾಕುವಾಗ ಈ ರೀತಿಯ ಮೆದುಳಿನ ಅಲೆಗಳು ಉಂಟಾಗುತ್ತವೆ.
ಇದೇ ತರಹ ವ್ಯಕ್ತಿ ಸಾಯುವ ಸಂದರ್ಭದಲ್ಲಿಯೂ ಕೂಡ ಮಿದುಳಿನ ಅಲೆಗಳು ಕಂಡು ಬಂದಿದ್ದವು ಎಂಬುದು ಡಾಕ್ಟರ್ ಮಾತಾಗಿತ್ತು. ಇವುಗಳಿಂದ ಒಬ್ಬ ವ್ಯಕ್ತಿಯ ಮೆದುಳಿನ ಕಾರ್ಯ ಚಟುವಟಿಕೆ ಸಾಯುವ ಸಂದರ್ಭದಲ್ಲಿ ಹೇಗಿರುತ್ತದೆ ಎಂಬುದನ್ನು ತಿಳಿದು ಕೊಳ್ಳಲು ನಮಗೆ ಅನುಕೂಲ ಮಾಡಿಕೊಡುತ್ತದೆ. ಮತ್ತು ಅಂಗಾಂಗವನ್ನು ದಾನ ಮಾಡುವ ಸಂದರ್ಭದಲ್ಲಿ ಎದ್ದೇಳುವ ಗೊಂದಲಗಳಿಗೆ ತೆರೆ ಎಳೆಯುತ್ತದೆ ಎಂದು ಡಾಕ್ಟರ್ ಹೇಳುತ್ತಾರೆ.
ಮನುಷ್ಯರ ಮೇಲೆ ಈ ಪ್ರಯೋಗ ಮಾಡುವ ಮೊದಲು ಇಲಿಗಳ ಮೇಲೆ ಕೂಡ ಇದೇ ಪ್ರಯೋಗವನ್ನು ಮಾಡಲಾಗಿತ್ತು. ಆಗಲು ಸಹ ಯಾವುದೇ ವ್ಯತ್ಯಾಸ ವಿಲ್ಲದೆ ಒಂದೇ ತರಹದ ಮೆದುಳಿನ ಅಲೆಗಳು ಕಂಡು ಬಂದು ಆಶ್ಚರ್ಯ ಮೂಡಿಸಿದ್ದವು. ಹಾಗಾಗಿ ಅದೇ ಸಂಶೋಧನೆಯನ್ನು ಮನುಷ್ಯರ ಮೇಲೆ ಕೂಡ ಪ್ರಯೋಗ ಮಾಡಿ ಅಧ್ಯಯನಕಾರರು ಯಶಸ್ಸು ಕಂಡಿದ್ದು ಅಚ್ಚರಿ ಮೂಡಿಸಿದರು ಸತ್ಯವಾಗಿದೆ.