ಒಬ್ಬ ವ್ಯಕ್ತಿ ಮೇಲೆ ಪ್ರೀತಿ ಹುಟ್ಟೋಕೆ ಯಾವುದೇ ಫ್ಲಾಶ್ ಬ್ಯಾಕ್ ಅಥವಾ ಆ ವ್ಯಕ್ತಿಯ ಬ್ಯಾಕ್ ಗ್ರೌಂಡ್ ನೋಡೋದಿಲ್ಲ. ಇದೇ ರೀತಿ ಒಬ್ಬ ವ್ಯಕ್ತಿಯನ್ನು ಪ್ರೀತಿಯಿಂದ ದೂರ ಹೋಗುವಾಗಲು ಕೂಡ ಯಾವುದೇ ಯೋಚನೆ ಇಲ್ಲದೆ ತಟ್ಟನೆ ನಿರ್ಧಾರ ಮಾಡಿಬಿಡುತ್ತೇವೆ. ಆದರೆ ಕೆಲವೊಮ್ಮೆ ಇಂತಹ ನಿರ್ಧಾರಗಳು ನಮ್ಮ ಜೀವನದಲ್ಲಿ ಅತಿ ಹೆಚ್ಚು ಪರಿಣಾಮ ಬೀರಬಹುದು. ಕೆಲವೊಮ್ಮೆ ನಮ್ಮ ಪ್ರೀತಿಯನ್ನು ಎಂದಿಗೂ ಬಿಟ್ಟು ಕೊಡಬಾರದು ಅನ್ನೋದು ಯಾಕೆ ಗೊತ್ತಾ?
• ಇದಕ್ಕಿಂತ ಒಳ್ಳೆಯ ಪ್ರೀತಿಪಾತ್ರರು ಮತ್ತೆ ಸಿಗದಿರಬಹುದು.
• ನೀವು ಒಂದು ಉತ್ತಮ ಸಂಬಂಧವನ್ನು ಕಳೆದುಕೊಳ್ಳುತ್ತೀರಿ.
• ಸಂಬಂಧದಲ್ಲಿ ನಂಬಿಕೆ ಕಳೆದುಕೊಳ್ಳುತ್ತೀರಿ.
• ತಪ್ಪಿತಸ್ಥ ಭಾವನೆ ನಿಮ್ಮನ್ನು ಕಾಡಬಹುದು.
• ನೀವು ಈ ಪ್ರೀತಿಯಿಂದ ಉತ್ತಮ ವ್ಯಕ್ತಿಯಾಗಿರಬಹುದು.
• ಮುಂದೆ ನಿಮಗೆ ಒಂಟಿತನ ಕಾಡಬಹುದು.
• ಆ ವ್ಯಕ್ತಿಯನ್ನು ಮರೆಯೋದು ಕಷ್ಟವಾಗಬಹುದು, ವಾಸ್ತವ ಅರಗಿಸಿಕೊಳ್ಳಲು ಕಷ್ಟ ಆಗಬಹುದು.
• ಬೇರೆ ಸಂಬಂಧಗಳ ಬಗ್ಗೆ ನಿಮಗೆ ನಂಬಿಕೆ ಬರದಿರಬಹುದು.