ಬೇಸಿಗೆ ಸಮಯದಲ್ಲಿ ದೇಶದ್ಯಾಂತ ಮಾರುಕಟ್ಟೆಗಳೆಲ್ಲಾ ಮಾವಿನದೇ ದರ್ಬಾರು. ಸಮರ್ ಸಿಸನ್ನ ತಂಪು ಪಾನೀಯಗಳಲ್ಲಿ ಮ್ಯಾಂಗೋ ಲಸ್ಸಿಯು ಕೂಡ ಒಂದಾಗಿದ್ದು, ಮೊಸರಿನ ಜೊತೆಗೆ ಸಿಹಿ ಮಾವನ್ನು ಸೇರಿಸಿ ಲಸ್ಸಿ ತಯಾರಿಸಿ ಕುಡಿಯುವಾಗ ಸಿಗುವ ಮಜಾವೇ ಬೇರೆಯಾಗಿರುತ್ತದೆ.
ಲಸ್ಸಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
ಮಾವಿನಹಣ್ಣು
ಸಕ್ಕರೆ
ಎಲಕ್ಕಿ ಪುಡಿ
ಮೊಸರು
ಐಸ್ ಕ್ಯೂಬ್ಸ್
ಮಾಡುವ ವಿಧಾನ:
ಮೊದಲು ಮೂರರಿಂದ ನಾಲ್ಕು ಸಿಹಿ ಮಾವಿನ ಹಣ್ಣನ್ನು ಕತ್ತರಿಸಿ ಮಿಕ್ಸಿ ಹಾಕಿ ಬ್ಲೆಂಡ ಮಾಡಿಕೊಳ್ಳಿ ನಂತರ ಅದಕ್ಕೆ ಸಕ್ಕರೆ, ಎಲಕ್ಕಿಪುಡಿ, ಎರಡು ಕಪ್ ಮೊಸರು,, ಐಸ್ ಕ್ಯೂಬ್ಸ್ ,ನೀರು ಅಥವಾ ಹಾಲು ಅವಶ್ಯಕ ಎನಿಸದರೆ ಕ್ರೀಮ್ ಸೇರಿಸಿ ಮತ್ತೆ ಚೆನ್ನಾಗಿ ಬ್ಲೇಂಡ್ ಮಾಡಿದರೆ ಮ್ಯಾಂಗೋ ಲಸ್ಸಿ ಸವಿಯಲು ಸಿದ್ಧ.