ಗೂಗಲ್ ಪೋಷಕರಿಗೆ ಸಹಾಯವಾಗಲಿ ಅಂತ ಸಾಕಷ್ಟು ಪೇರೆಂಟಿಂಗ್ ಕಂಟ್ರೋಲ್ ಫೀಚರ್ ಗಳನ್ನು ನೀಡುತ್ತಿದೆ. 13 ವರ್ಷದೊಳಗಿರುವ ಮಕ್ಕಳ ಮೊಬೈಲ್ ಗಳಲ್ಲಿ ಪೋಷಕರು ಗೂಗಲ್ ಅಕೌಂಟ್ ಕ್ರಿಯೇಟ್ ಮಾಡಬಹುದು. ಮತ್ತು ಈ ಮೊಬೈಲ್ ಅನ್ನು ಫ್ಯಾಮಿಲಿ ಲಿಂಕ್ ಆಪ್ ಮೂಲಕ ಕಂಟ್ರೋಲ್ ಕೂಡ ಮಾಡಬಹುದು.
ಈ ಮೂಲಕ ಪೋಷಕರು ಮಕ್ಕಳು ತಮ್ಮ ಮೊಬೈಲ್ ಗಳಲ್ಲಿ ಏನು ನೋಡುತ್ತಾರೆ, ಏನು ಡೌನ್ ಲೋಡ್ ಮಾಡುತ್ತಾರೆ ಅನ್ನುವುದರ ಬಗ್ಗೆ ಕಂಟ್ರೋಲ್ ಮಾಡಬಹುದಾಗಿದೆ.
ಏನು ಲಾಭ ಇದರಿಂದ? ಇಲ್ಲಿದೆ ನೋಡಿ ಮಾಹಿತಿ
• ಗೂಗಲ್ ಪ್ಲೇ ಫ್ಯಾಮಿಲಿ ಆಪ್: ಈ ಫೀಚರ್ ಮೂಲಕ ಪೋಷಕರು ಮಕ್ಕಳ ಮೊಬೈಲ್ ಆಕ್ಸಸ್ ಮಾಡಬಹುದು. ಈ ಮೂಲಕ ಮಕ್ಕಳು ಡೌನ್ ಲೋಡ್ ಮಾಡುವ ಆಪ್, ಗೇಮ್ಸ್, ಫಿಲಂ, ಟಿವಿ ಶೋಗಳ ಮೇಲೆ ನಿಗಾ ಇರಿಸಬಹುದು.
• ಕಂಟೆಂಟ್ ಫಿಲ್ಟರಿಂಗ್: ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವ ಅಪ್ಲಿಕೇಶನ್ಗಳು, ಗೇಮ್, ಫಿಲಂ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಮಕ್ಕಳ ವಯಸ್ಸು, ಬುದ್ದಿಗೆ ಅನುಸಾರವಾಗಿ ಫಿಲ್ಟರ್ ಮಾಡಬಹುದಾಗಿದೆ.
• ಆಪ್ ಅಪ್ರೂವಲ್: ಮಕ್ಕಳು ಯಾವುದೇ ಆಪ್ ಡೌನ್ ಲೋಡ್ ಮಾಡಿಕೊಳ್ಳುವ ಮುನ್ನ ಪೋಷಕರಿಗೆ ಅಪ್ರೂವಲ್ ಕೊಡಬಹುದು ಅಥವಾ ನಿರಾಕರಿಸಬಹುದು.
• ಖರೀದಿ: ಮಕ್ಕಳು ಆನ್ ಲೈನ್ ಮೂಲಕ ಬೇಡದಿರುವ ಆಪ್, ಗೇಮ್ಸ್ ಗಳನ್ನು ಖರೀದಿಸುವುದನ್ನು ನಿಯಂತ್ರಿಸಬಹುದು.
• ಪಾಸ್ ವರ್ಡ್ ಪ್ರೊಟೆಕ್ಟ್: ಗೂಗಲ್ ಪ್ಲೇ ಅಕೌಂಟ್, ಪಾಸ್ ವರ್ಡ್ ಗಳನ್ನು ಕೊಡುವ ಮೂಲಕ ಮತ್ತೊಂದು ಹಂತದಲ್ಲಿ ನಿಯಂತ್ರಿಸಬಹುದು.