ಅಫ್ಘಾನಿಸ್ತಾನದಲ್ಲಿ ಆಗಸ್ಟ್ 2021ರಲ್ಲಿ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವಾರು ನಿರ್ಬಂಧಗಳನ್ನು ಹೇರುವ ಮೂಲಕ ಮಹಿಳೆಯರ ಸ್ವಾತಂತ್ರ ಕಸಿದುಕೊಂಡು ಮನೆಯೊಳಗೆ ಕುರಿಸುವ ಪ್ರಯತ್ನಗಳು ನಡೆಯುತ್ತಿದೆ. ೬ನೇ ತರಗತಿಯ ನಂತರ ಹೆಚ್ಚಿನ ಶಿಕ್ಷಣವನ್ನು ಹೆಣ್ಣು ಮಕ್ಕಳು ಪಡೆಯಬಾರದು, ಯುವತಿಯರು ವಿಶ್ವವಿದ್ಯಾಲಯಗಳಲ್ಲಿ ಓದಬಾರದು ಎಂಬ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಉದ್ಯಾನವನ, ಫನ್ಫೇ ರ್ ಮತ್ತು ಜಿಮ್ಗಳ ಪ್ರವೇಶವನ್ನು ಕೂಡಾ ನಿಷೇಧಿಸಲಾಗಿತ್ತು. ಇದೀಗ ಮಹಿಳಾ ಬ್ಯೂಟಿ ಪಾರ್ಲರ್ಗಳನ್ನು ನಿಷೇಧಿಸುವ ಮೂಲಕ ಮಹಿಳೆಯರಿಗೆ ಸಾರ್ವಜನಿಕ ಜೀವನದ ಜೊತೆ ಇದ್ದ ಮತ್ತೊಂದು ಸಂಪರ್ಕವನ್ನೂ ಕಡಿಯಲಾಗಿದೆ.
ದೇಶದಾದ್ಯಂತ ಇರುವ ಬ್ಯೂಟಿ ಪಾರ್ಲ ರ್ಗಳನ್ನು ಒಂದು ತಿಂಗಳೊಳಗೆ ಮುಚ್ಚುವಂತೆ ಅಫ್ಗಾನಿಸ್ತಾನದ ತಾಲಿಬಾನ್ ಅಧಿಕಾರಿಗಳು ಆದೇಶಹೊರಡಿಸಿದ್ದಾರೆ ಎಂದು ಉಪಸಚಿವಾಲಯ ಮಂಗಳವಾರ ದೃಢಪಡಿಸಿದೆ.
ತಮ್ಮ ಬಳಿ ಇರುವ ಎಲ್ಲಾ ಉತ್ಪನ್ನಗಳನ್ನು ಖಾಲಿ ಮಾಡಿಕೊಳ್ಳುಲು ಪಾರ್ಲರ್ನವರಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಇದರಿಂದ ಆ ಮಹಿಳೆಯರಿಗೆ ನಷ್ಟ ಆಗುವುದಿಲ್ಲ. ಎಲ್ಲಾ ಪಾರ್ಲರ್ಗಳು ಮುಚ್ಚಿದ ನಂತರ ಮಾಧ್ಯಮದೊಂದಿಗೆ ಇದರ ಕಾರಣ ಹಂಚಿಕೊಳ್ಳುತ್ತೇವೆ ಎಂದು ಸಚಿವಾಲಯದ ವಕ್ತಾರ ಮೊಹಮ್ಮದ್ ಸಾದೇಕ್ ಅಕಿಫ್ ಮುಹಾಜಿರ್ ಹೇಳಿದ್ದಾರೆ.
ಬ್ಯೂಟಿ ಪಾರ್ಲರ್ಗಳನ್ನು ಒಂದು ತಿಂಗಳೊಳಗೆ ಮುಚ್ಚಬೇಕು. ಮುಚ್ಚಿದಂತೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಾಲಿಬಾನ್ ಸರ್ಕಾರ ಆದೇಶದಲ್ಲಿ ತಿಳಿಸಿದೆ.
ಅಮೆರಿಕ ನೇತೃತ್ವದ ಪಡೆಗಳು ದೇಶವನ್ನು ಆಕ್ರಮಿಸಿಕೊಂಡ 20 ವರ್ಷ ಗಳಲ್ಲಿ ಕಾಬೂಲ್ ಮತ್ತು ಇತರ ನಗರಗಳಲ್ಲಿ ಬ್ಯೂಟಿ ಪಾಲರ್ಗಳು ಅಣಬೆಗಳಂತೆ ಹುಟ್ಟಿಕೊಂಡಿದ್ದವು. ಮಹಿಳೆಯರಿಗೆ ಪುರುಷರಿಂದ ದೂರವಿರುವ ಮತ್ತು ಸಾರ್ವಜನಿಕವಾಗಿ ಬೆರೆಯಲು ಇದೊಂದು ಸುರಕ್ಷಿತ ಸ್ಥಳವಾಗಿತ್ತು ಆದರೆ ತಾಲಿಬಾನ್ ಆದೇಶದಿಂದ ಮಹಿಳೆಯರು ಮತ್ತೊಂದು ಸ್ವಾತಂತ್ರದಿಂದ ವಂಚಿತರಾಗಿದ್ದಾರೆ.