ಸ್ತನ ಕ್ಯಾನ್ಸರ್ ಎಂದರೆ ಬರೀ ಮಹಿಳೆಯರಿಗೆ ಮಾತ್ರ ಬರುವಂತ ಕಾಯಿಲೆಯೆಂದು ನಂಬಲಾಗಿದೆ. ಆದರೆ ಇತ್ತೀಚಿನ ಕಾಲದಲ್ಲಿ ಇದು ಪುರುಷರಲ್ಲಿಯೂ ಕಾಣಿಸಿಕೊಳ್ಳುತ್ತಿದ್ದು ಇದರ ಜಾಗೃತಿಯನ್ನು ಮಾಡಬೇಕಿದೆ.
ಪುರುಷರಲ್ಲಿ ಸ್ತನ ಕ್ಯಾನ್ಸರ್ ಬರುವುದಿಲ್ಲ ಎಂಬುದು ನಮ್ಮ ತಪ್ಪು ಕಲ್ಪನೆಯಾಗಿತ್ತು ಅಷ್ಟೆ. ಮಹಿಳೆಯರು ಮಾತ್ರವಲ್ಲದೆ, ಪುರುಷರು ಸ್ತನ ಕ್ಯಾನ್ಸರ್ಗೆ ಗುರಿಯಾಗುತ್ತಿರುವುದನ್ನು ನಾವು ಕೇಳುತ್ತಿದ್ದೇವೆ. ಆದರೆ ಇದು ವಿರಳವಾಗಿ ಸಂಭವಿಸುತ್ತದೆ.
ಬಿಹಾರದ ಒಬ್ಬ ಯುವಕನಿಗೆ ಮಹಿಳೆಯರಂತೆ ಸ್ತನ ಕ್ಯಾನ್ಸರ್ ಬಂದಿತ್ತು. ಇದನ್ನು ಕಂಡು ಮನೆಯವರಿಗೆ ಆಶ್ಚರ್ಯವಾಯಿತು. ಕ್ಯಾನ್ಸರ್ ಎಂಬ ಹೆಸರು ಕೇಳಿದರೆ ಯಾರಿಗಾದರೂ ನಡುಕ ಹುಟ್ಟೇ ಹುಟ್ಟುತ್ತದೆ. ಆದರೆ ಈ ಮಾರಣಾಂತಿಕ ರೋಗವನ್ನು ಜಯಿಸಿದವರು ಅನೇಕರು ಈ ಭೂಮಿ ಮೇಲೆ ಇದ್ದಾರೆ.
ಪಾಟ್ನಾದ ಶ್ಯಾಮ್ ಸುಂದರ್ ಕೇಸರಿಯ ಕಥೆಯೂ ಇದೇ ಆಗಿದೆ. ಸರ್ಕಾರಿ ಕೆಲಸ ಮಾಡುತ್ತಿರುವ ಶ್ಯಾಮ್ ಸುಂದರ್ ಅವರಿಗೆ ಒಂದು ದಿನ ಬ್ರೆಸ್ಟ್ ಕ್ಯಾನ್ಸರ್ ಇರುವುದು ಗೊತ್ತಾಯಿತು. ಅದನ್ನು ಕೇಳಿ ಆತ ಬೆಚ್ಚಿಬಿದ್ದನು. ಈ ಖಾಯಿಲೆಯಿಂದಾಗಿ ಅವರ ಸ್ವಲ್ಪ ಎದೆಯ ಭಾಗವನ್ನು ಕತ್ತರಿಸಿದ್ದಾರಂತೆ.
2022ರ ಆರಂಭದಲ್ಲಿ ಎದೆಯ ಬಳಿ ಇದ್ದ ಗಡ್ಡೆ ತಪಾಸಣೆ ಮಾಡಿಸಿದಾಗ ತನಗೆ ಸ್ತನ ಕ್ಯಾನ್ಸರ್ ಇದೆ ಎಂದು ವೈದ್ಯರು ಹೇಳಿದರು, ಆದರೆ ಇದು ಮೊದಲು ನನಗೆ ಅರ್ಥವಾಗಲಿಲ್ಲ ಎಂದು ಶ್ಯಾಮ್ ಸುಂದರ್ ಹೇಳಿದ್ದಾರೆ. ಮಹಿಳೆಯರಲ್ಲಿ ಹೀಗಾಗುತ್ತದೆ ಎಂದು ಕೇಳಿದ್ದೆ. ಆ ನಂತರ ಪಾಟ್ನಾದ ಮೇದಾಂತದಲ್ಲಿ ಚಿಕಿತ್ಸೆ ಮುಂದುವರೆಯಿತು. ಎರಡು ಬಾರಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಅನುಕ್ರಮದಲ್ಲಿ ಎದೆಯ ಎಡಭಾಗವನ್ನು ಕತ್ತರಿಸಲಾಯಿತು. ಅದರ ನಂತರವೂ ಹಲವಾರು ತಿಂಗಳುಗಳವರೆಗೆ ಚಿಕಿತ್ಸೆ ಮುಂದುವರೆಯಿತು. ಈಗ ನಾನು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ ಎಂದು ಹೇಳಿದರು.
ಕ್ಯಾನ್ಸರ್ ತಜ್ಞ ಡಾ.ಸಂದೀಪ್ ಕುಮಾರ್ ಪ್ರಕಾರ, ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ, ಆದರೆ ಇದು ಪುರುಷರ ಮೇಲೂ ಕೆಲವೂಮ್ಮೆ ಪರಿಣಾಮ ಬೀರುತ್ತದೆ. ಇದರ ಚಿಕಿತ್ಸೆಯನ್ನು ಮೊದಲ ಅಥವಾ ಎರಡನೇ ಹಂತಗಳಲ್ಲಿ ಪ್ರಾರಂಭಿಸಿದರೆ, ಶೇಕಡಾ 90 ರಷ್ಟು ರೋಗಿಗಳನ್ನು ಉಳಿಸಬಹುದು. ಸ್ತನ ಕ್ಯಾನ್ಸರ್ ಆರಂಭಿಕ ಲಕ್ಷಣಗಳನ್ನು ಜನರು ಹೆಚ್ಚಾಗಿ ಚಿಂತಿಸದೆ, ಸಾಮಾನ್ಯವಾಗಿ ಅದನ್ನು ನಿರ್ಲಕ್ಷಿಸುತ್ತಾರೆ. ಎಂದು ಅವರು ಹೇಳುತ್ತಾರೆ. ಇದರಿಂದಾಗಿ ಪರಿಸ್ಥಿತಿ ತುಂಬಾ ಹದಗೆಟ್ಟು ಕೊನೆಯ ಹಂತ ತಲುಪುತ್ತದೆ.
ಹಾಗಾಗಿ ಮಹಿಳೆಯರು ಮಾತ್ರವಲ್ಲ, ಪುರುಷರೂ ಸಮಯಪಾಲನೆ ಮಾಡಬೇಕು. ಇದರಿಂದ ಸಕಾಲದಲ್ಲಿ ಚಿಕಿತ್ಸೆ ಪಡೆಯಬೇಕು. ಎದೆಯ ಭಾಗದಲ್ಲಿ ಎಲ್ಲಿಯಾದರೂ ನೋವುರಹಿತವಾದ ಉಂಡೆಯಂತೆ ಕಾಣಿಸಿದರೆ ಮತ್ತು ಗಡ್ಡೆಯು ಬೆಳೆಯುತ್ತಲೇ ಇದ್ದರೆ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ತುಂಬಾ ಉತ್ತಮ.