ಜರ್ಮನಿಯ ಜೂಲ್ ನಲ್ಲಿ ನಡೆಯುತ್ತಿರುವ ಐಎಸ್ ಎಸ್ ಎಫ್ ಜ್ಯೂನಿಯರ್ 10 ಮೀಟರ್ ಏರ್ ರೈಫಲ್ ಮಿಕ್ಸ್ಡ್ ವಿಭಾಗದಲ್ಲಿ ಭಾರತದ ಶೂಟರ್ ಧನುಷ್ ಶ್ರೀಕಾಂತ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಭಾರತಕ್ಕೆ ಶೂಟಿಂಗ್ನಲ್ಲಿ ಭಾರತಕ್ಕೆ ದಕ್ಕಿದ ಮೂರನೇ ಚಿನ್ನದ ಪದಕ ಇದಾಗಿದ್ದು, ಸ್ಪರ್ಧೆಯ ಮೂರನೇ ದಿನ 6 ಪದಕಗಳಿಂದ ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಗಿಟ್ಟಿಸಿಕೊಂಡಿದೆ.
ಶೂಟಿಂಗ್ ಫೈನಲ್ನಲ್ಲಿ ಧನುಷ್ 24 ಶಾಟ್ಗಳಲ್ಲಿ 249.4 ಅಂಕಗಳನ್ನು ಗಳಿಸಿದರು. ಸ್ವೀಡನ್ನ ಪಾಂಟಸ್ ಕಾಲಿನ್ ಅವರನ್ನು 1.3 ಪಾಯಿಂಟ್ಗಳಿಂ ಮಣಿಸಿ ಚಿನ್ನವನ್ನುಧನುಷ್ ತಮ್ಮದಾಗಿಸಿಕೊಂಡರು .
ಇದುವರೆಗೆ ಎರಡು ಚಿನ್ನ ಮತ್ತು ಒಂದು ಬೆಳ್ಳಿ ಪದಕಗಳನ್ನು ಹೊಂದಿರುವ ಅಮೆರಿಕಾವನ್ನು ಹಿಂದಿಕ್ಕಿದ ಭಾರತವು ಮೂರು ಚಿನ್ನ, ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇಂದು ಮಹಿಳೆಯರ 10 ಮೀಟರ್ ರೈಫಲ್ ಫೈನಲ್ ನಡೆಯಲಿದ್ದು ಅದರಲ್ಲೂ ಭಾರತ ಚಿನ್ನದ ಪದಕ ಗೆಲ್ಲುವ ನಿರೀಕ್ಷೆ ಇದೆ.
ಜ್ಯೂನಿಯರ್ 10 ಮೀಟರ್ ಏರ್ ರೈಫಲ್ ಮಿಕ್ಸ್ಡ್ ವಿಭಾಗದಲ್ಲಿ ಭಾರತದ ಶೂಟರ್ ಗಳಾದ ಗೌತಮಿ ಭನೋಟ್ ಹಾಗೂ ಅಭಿನವ್ ಶಾ ಜೋಡಿಯು ಚಿನ್ನದ ಪದಕವನ್ನು ಗೆದ್ದಿದ್ದರು. ಫೈನಲ್ ಸುತ್ತಿನಲ್ಲಿ ಫ್ರಾನ್ಸ್ ನ ಓಷಾನ್ ಮುಲ್ಲರ್ ಮತ್ತು ರೊಮೇನ್ ಆಫ್ರೆರ್ ಜೋಡಿಯಿಂದ ಆರಂಭದಲ್ಲಿ ಪ್ರಬಲ ಪೈಪೋಟಿ ಎದುರಿಸಿದರೂ ಅಂತಿಮವಾಗಿ 17-7 ಅಂಕ ಗಳಿಸಿದ ಗೌತಮಿ ಹಾಗೂ ಭನೋಟ್ ಜೋಡಿಯು ಸ್ವರ್ಣ ಪದಕ ತಮ್ಮದಾಗಿಸಿಕೊಂಡಿತು.
ಸ್ಕೀಟ್ ವಿಭಾಗದಲ್ಲಿ ಭಾರತಕ್ಕೆ ಕಂಚು:
ಸ್ಕೀಟ್ ಮಿಶ್ರ ಟೀಮ್ ಇವೆಂಟ್ನಲ್ಲಿ ಎರಡು ಭಾರತೀಯ ತಂಡಗಳಿದ್ದವು ರಿತುರಾಜ್ ಬುಂದೇಲಾ ಮತ್ತು ರೈಜಾ ಧಿಲ್ಲೋನ್ ಅರ್ಹತಾ ಸುತ್ತಿನಲ್ಲಿ 134 ಅಂಕಗಳೊಂದಿಗೆ ಏಳನೇ ಸ್ಥಾನಗಳಿಸಿದರು. ಎರಡನೇ ಜೋಡಿ ಹರ್ಮೆಹರ್ ಲಾಲಿ ಮತ್ತು ಸಂಜನಾ ಸೂದ್ 150 ರಲ್ಲಿ 136 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದುಕೊಂಡರು