ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಪಕ್ಷ ಪ್ರಚಂಡ ಬಹುಮತದಿಂದ ಗದ್ದುಗೆ ಏರಲಿದೆ. ರಾಜ್ಯ ರಾಜಕಾರಣದಲ್ಲಿ ಪುರುಷ ಅಭ್ಯರ್ಥಿಗಳೇ ಸದ್ದು ಮಾಡಿದ್ದರೂ ಕೂಡಾ, ತಾವೂ ಏನೂ ಕಮ್ಮಿ ಇಲ್ಲ ಎಂಬಂತೆ ಮಹಿಳಾ ನಾಯಕಿಯರೂ ಕೂಡಾ ತಮ್ಮ ಪ್ರಭಾವವನ್ನು ಬೀರಿದ್ದಾರೆ. ಅನೇಕ ಮಹಿಳೆಯರು ಈ ಬಾರಿ ಕಣದಲ್ಲಿದ್ದುದ್ದಲ್ಲದೇ, ಕೆಲವು ಕ್ಷೇತ್ರಗಳಲ್ಲಿ ಪುರುಷ ಅಭ್ಯರ್ಥಿಗಳಿಗೆ ತೀವ್ರ ಪೈಪೋಟಿ ನೀಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಗೆದ್ದ ಮಹಿಳೆಯರ ಕಂಪ್ಲೀಟ್ ಲಿಸ್ಟ್ ಇಲ್ಲಿದೆ.
ಲಕ್ಷ್ಮೀ ಹೆಬ್ಬಾಳ್ಕರ್- ಬೆಳಗಾವಿ ಗ್ರಾಮೀಣ- ಕಾಂಗ್ರೆಸ್
ಭಾಗೀರಥಿ ಮುರಳ್ಯ-ಸುಳ್ಯ- ಬಿಜೆಪಿ
ಶಶಿಕಲಾ ಜೊಲ್ಲೆ- ನಿಪ್ಪಾಣಿ- ಬಿಜೆಪಿ
ಪ್ರಿಯಾ ಕೃಷ್ಣ-ಗೋವಿಂದರಾಜ ನಗರ- ಕಾಂಗ್ರೆಸ್
ನಯನಾ ಮೋಟಮ್ಮ- ಮೂಡಿಗೆರೆ- ಕಾಂಗ್ರೆಸ್
ಖನೀಜ್ ಫಾತಿಮಾ-ಕಲಬುರ್ಗಿ ಉತ್ತರ- ಕಾಂಗ್ರೆಸ್
ರೂಪಕಲಾ ಎಂ- ಕೆಜಿಎಫ್- ಕಾಂಗ್ರೆಸ್
ಕರೆಮ್ಮ-ದೇವದುರ್ಗ- ಜೆಡಿಎಸ್
ಮಂಜುಳಾ ಎಸ್- ಮಹಾದೇವಪುರ-ಬಿಜೆಪಿ
ಶಾರದಾ ಪೂರ್ಯ ನಾಯ್ಕ್- ಶಿವಮೊಗ್ಗ-ಜೆಡಿಎಸ್
ಲತಾ ಮಲ್ಲಿಕಾರ್ಜುನ್- ಹರಪ್ಪನಹಳ್ಳಿ-ಪಕ್ಷೇತರ