ಇಂದಿನ ಉದ್ಯೋಗ ಕ್ರಮ, ಜೀವನಶೈಲಿಯಲ್ಲಿ ರಾತ್ರಿ ಹೊತ್ತು ತಡವಾಗಿ ಆಹಾರ ಸೇವಿಸುವುದು, ತಡವಾಗಿ ಮಲಗುವುದು ಹಲವರಿಗೆ ಸಾಮಾನ್ಯವಾಗಿ ಬಿಟ್ಟಿದೆ ಊಟದ ಸಮಯವನ್ನು ಯಾರು ಗಮನಿಸುವುದೇ ಇಲ್ಲ ಉದ್ಯೋಗಕ್ಕೆ ಹೆಚ್ಚು ಗಮನ ನೀಡಿ ಅದನ್ನೆಲ್ಲ ಮುಗಿಸಿಕೊಂಡು ಬಂದು ಸಮಯ ಸಿಕ್ಕಾಗ ಊಟ ಮಾಡುತ್ತಾರೆ ಇದರಿಂದ ಆರೋಗ್ಯಕ್ಕೆ ಎಷ್ಟು ಮಾರಕ ಎಂಬುದನ್ನು ವೈದ್ಯರ ಬಳಿಯ ತೋಟದ್ನರ ಬಳಿ ಕೇಳಿದಾಗ ಗೊತ್ತಾಗುವುದು.
ನಗರ ಪ್ರದೇಶಗಳಲ್ಲಿ ಕಚೇರಿಗಳಲ್ಲಿ ರಾತ್ರಿ ಶಿಫ್ಟ್ ನಲ್ಲಿ ಕೆಲಸ ಮಾಡುವವರು, ಕಿರಾಣಿ ಅಂಗಡಿಗಳಲ್ಲಿ, ಮಾಲ್ ಗಳಲ್ಲಿ, ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರು, ಟ್ರಕ್ ಡ್ರೈವರ್ ಗಳು, ಕಾಲ್ ಸೆಂಟರ್ ಉದ್ಯೋಗಿಗಳು ರಾತ್ರಿ ಹೊತ್ತಿನಲ್ಲಿ ಆಹಾರ ಸೇವಿಸುವುದು ಸರ್ವೇಸಾಮಾನ್ಯ. ಇಂತವರಿಗೆ ಊಟ-ತಿಂಡಿ, ನಿದ್ದೆ ಸರಿಯಾದ ಸಮಯಕ್ಕೆ ಸಾಕಷ್ಟು ಸಿಗುವುದಿಲ್ಲ. ಇದು ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮನುಷ್ಯ ಆಹಾರ ಸೇವಿಸುವ ಕ್ರಮ ಸರಿಯಾಗಿಲ್ಲದಿದ್ದರೆ ಸಕ್ಕರೆ ಕಾಯಿಲೆಯಂತಹ ಸಮಸ್ಯೆಗಳಿಂದ ಕಾಣಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ.
ಬೆಳಿಗ್ಗೆಯಿಂದ ಸಂಜೆಯ ತನಕ ಇಂತಹ ಆಹಾರವನ್ನು ತಿಂದರೂ ಕೂಡ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ ಆದರೆ ರಾತ್ರಿ ಸಮಯದಲ್ಲಿ ಹೆಚ್ಚು ಆಹಾರವನ್ನು ತಿಂದರೆ ಯಾವುದೇ ರೀತಿಯಲ್ಲಿ ಜೀರ್ಣಕ್ರಿಯೆ ಸರಿಯಾಗಿ ಆಗಲು ಸಾಧ್ಯವಿಲ್ಲ. ಹಗಲು ಹೊತ್ತಿಗಿಂತ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಲ್ಲಿ ಅಧಿಕ ತೂಕ ಅಥವಾ ಬೊಜ್ಜು ಹೆಚ್ಚಾಗಿ ಕಂಡುಬರುತ್ತದೆ ಎಂದು ಇತ್ತೀಚಿನ ಅಧ್ಯಯನಗಳು ತೋರಿಸಿವೆ. ರಾತ್ರಿಯ ಸಮಯದಲ್ಲಿ ತಿನ್ನುವ ಜನರು ಮೆಟಾಬಾಲಿಕ್ ಸಿಂಡ್ರೋಮ್ ಎಂಬ ರೋಗ ಸ್ಥಿತಿಯ ಜೊತೆಗೆ ಇನ್ಸುಲಿನ್ ಪ್ರತಿರೋಧ, ಅಧಿಕ ಸಕ್ಕರೆ ಕಾಯಿಲೆ, ಅಸಹಜ ಕೊಲೆಸ್ಟ್ರಾಲ್ ಮೊದಲಾದ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ರಾತ್ರಿ ಸಮಯದಲ್ಲಿ ದೀರ್ಘಕಾಲದವರೆಗೆ ಕೆಲಸ ಮಾಡುವುವರಿಗೆ ಬೊಜ್ಜು, ಖಿನ್ನತೆ, ನಿದ್ರಾ ಭಂಗ ಅಥವಾ ಕೆಲವು ರೀತಿಯ ಕ್ಯಾನ್ಸರ್ ಸಹ ಬರುವ ಸಾಧ್ಯತೆಯಿದೆ ಎಂದು ಹೇಳುತ್ತಾರೆ.
ಹಗಲು ಹೊತ್ತಿನಲ್ಲಿ ಎಷ್ಟು ಬೇಕು ಅಷ್ಟು ಆಹಾರ ಸೇವಿಸಿ ಕೆಲಸ ಮಾಡಿ ರಾತ್ರಿ ಬೇಗನೆ ಊಟ ಮಾಡಿ ಸಾಕಷ್ಟು ನಿದ್ದೆ ಮಾಡುವುದು ಪ್ರಕೃತಿಗೆ ಪೂರಕವಾದ ಕ್ರಿಯೆ. ಇದಕ್ಕೆ ವಿರುದ್ಧವಾಗಿ ಮನುಷ್ಯನ ಜೀವನಕ್ರಮ, ಕೆಲಸವಾದಾಗ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಊಟ-ತಿಂಡಿ, ನಿದ್ದೆ ಸರಿಯಾಗಿ ಆಗಲು ಸಾಧ್ಯವೇ ಇಲ್ಲ. ಹಸಿವೆಯಾದಾಗ ತಿನ್ನದಿದ್ದರೆ ಸಹ ಮನುಷ್ಯನ ಜೈವಿಕ ಕ್ರಿಯೆಗಳಿಗೆ ಪರಿಣಾಮ ಬೀರುತ್ತದೆ. ಅದಕ್ಕಾಗಿ ಆದಷ್ಟು ಹೊಗಳಿನ ಸಮಯದಲ್ಲಿ ಆಹಾರವನ್ನು ಹೆಚ್ಚಾಗಿ ತಿನ್ನುವುದು ಉತ್ತಮ.
ಹಾಗೆಂದು ತಡರಾತ್ರಿಯಲ್ಲಿ ತಿನ್ನುವವರಿಗೆ ಆರೋಗ್ಯದ ತೊಂದರೆಗಳು ಹೆಚ್ಚು ಎಂದು ಹೇಳುವುದು ಸಂಪೂರ್ಣವಾಗಿ ಸರಿಯೂ ಅಲ್ಲ. ವ್ಯಾಯಾಮದ ಕೊರತೆ, ಅತಿಯಾದ ನಿದ್ದೆ, ಊಟವನ್ನು ಬಿಟ್ಟುಬಿಡುವುದು ಅಥವಾ ಆರೋಗ್ಯಕರವಾಗಿ ತಿನ್ನದಿರುವುದು ಸಹ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು, ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು ಬರಲು ಕಾರಣವಾಗುತ್ತದೆ.
ಕೊನೆಯದಾಗಿ ಹೇಳುವುದಾದರೆ ಸೂರ್ಯಾಸ್ತವಾದ ಮೇಲೆ ಅಧಿಕ ಪ್ರಮಾಣ ಮದ ಆಹಾರ ತಿನ್ನದೆ, ಕಡಿಮೆ ಮಾಡಿಕೊಂಡು ಆದಷ್ಟು ನೀರನ್ನು ಹೆಚ್ಚಾಗಿ ಕುಡಿದುಕೊಂಡು ಬೇಗ ನಿದ್ದೆ ಮಾಡಿ ಬೇಗ ಏಳುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.