ವರುಣ ಕ್ಷೇತ್ರದ ಚುನಾವಣಾ ಸ್ಪರ್ಧೆ ರಂಗ ಏರುತ್ತಿದ್ದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ವಿ ಸೋಮಣ್ಣ ನಡುವೆ ಫೈಟ್ ಜೋರಾಗಿದೆ. ವರುಣದಲ್ಲಿ ಲಿಂಗಾಯತರು ಬಿಜೆಪಿ ಪರ ಒಲವು ತೋರುತ್ತಿರುವುದರಿಂದ ಸಿದ್ದುಗೆ ಟಕ್ಕರ್ ಕೊಡಲು ವಿ. ಸೋಮಣ್ಣ ಸಾಕಷ್ಟು ರಣವ್ಯೂಹ ಹೆಣೆದಿದ್ದರು.
ಇಂದು ವರುಣ ಕ್ಷೇತ್ರ ಕಲರ್ ಫುಲ್ ಆಗಿದ್ದು ಸಿದ್ದರಾಮಯ್ಯ ಪರ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಮೋಹಕ ತಾರೆ ರಮ್ಯಾ, ದುನಿಯಾ ವಿಜಿ ಅವರು ಕಾಂಗ್ರೆಸ್ ಪರವಾಗಿ ಪ್ರಚಾರಕ್ಕೆ ಇಳಿದಿದ್ದಾರೆ.
ವರುಣದಲ್ಲಿ ಬೆಳಿಗ್ಗೆ 9 ಗಂಟೆಯಿಂದ ರೋಡ್ ಷೋ ಆರಂಭವಾಗಿದ್ದು 12 ಗ್ರಾಮಗಳಲ್ಲಿ ಮತ ಭೇಟಿ ನಡೆಸಲಿದ್ದಾರೆ. ಈಗಾಗಲೇ ಒಂದು ರೌಂಡ್ ಸಿದ್ದರಾಮಯ್ಯ ಪ್ರಚಾರ ಮುಗಿಸಿದ್ದು, ಇದೀಗ ಮತ್ತೆ ಸಿದ್ದರಾಮಯ್ಯನವರು ಸ್ಟಾರ್ ನಟ ನಟಿಯರ ಜೊತೆ ಪ್ರಚಾರ ನಡೆಸುತ್ತಿದ್ದಾರೆ.