ಈಗ ಮ್ಯಾಂಗೋ ಸೀಸನ್. ಎಲ್ಲಿ ನೋಡಿದರು ಮಾವು ಸುವಾಸನೆ. ಈ ಬಾರಿ ಬೆಲೆ ಕೂಡ ಅಷ್ಟೇನೂ ದುಬಾರಿ ಅನಿಸುತ್ತಿಲ್ಲ. ಹಾಗೆಂದು ಸಿಕ್ಕಸಿಕ್ಕ ಕಡೆ ಮಾವಿನ ಹಣ್ಣನ್ನು ತೆಗೆದುಕೊಂಡು ತಿನ್ನಲು ಹೋದರೆ ನಿಮ್ಮ ಆರೋಗ್ಯಕ್ಕೆ ಮಾರಕ ಆಗುವುದಂತು ಸತ್ಯ. ಮಾವಿನ ಹಣ್ಣಿನ ವಿಚಾರದಲ್ಲಿ ಹೀಗೆ ಯಾಕೆ ಹೇಳುತ್ತಿದ್ದಾರೆ ಅಂದುಕೊಳ್ಳಬಹುದು. ಆದರೆ ಅದಕ್ಕೆ ಕಾರಣವಿದೆ.
ರಾಸಾಯನಿಕದಿಂದ ತುಂಬಿದ ಮಾವಿನ ಹಣ್ಣುಗಳು ಎಲ್ಲಾ ಕಡೆ ಸಿಗುತ್ತಿವೆ. ಇಂತಹ ಹಣ್ಣುಗಳಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳನ್ನು ಲೆಕ್ಕ ಹಾಕಲು ಕೂಡ ಸಾಧ್ಯವಿಲ್ಲ
ದುಡ್ಡಿನ ಆಸೆಗೆ ಮಾವಿನ ಹಣ್ಣನ್ನು ವ್ಯಾಪಾರ ಮಾಡುವ ಜನರು ಅವುಗಳಿಗೆ ರಾಸಾಯನಿಕಗಳನ್ನು ಸಿಂಪಡಿಸಿ ಬಲವಂತವಾಗಿ ಹಣ್ಣು ಮಾಡಿರುತ್ತಾರೆ. ಇಂತಹ ಮಾವಿನ ಹಣ್ಣುಗಳು ರಾಸಾಯನಿಕದ ಮುಸುಕು ಹಾಕಿಕೊಂಡು ಮಾರುಕಟ್ಟೆಯಲ್ಲಿ ಕಣ್ಣಿಗೆ ಇಷ್ಟವಾಗುವಂತೆ ಮಿಂಚುತ್ತಿರುತ್ತವೆ. ನಿಮಗೂ ಕೂಡ ಇಂತಹ ಮಾವಿನ ಹಣ್ಣುಗಳನ್ನೇ ತಿನ್ನಬೇಕು ಎನಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇವುಗಳು ಆರೋಗ್ಯಕ್ಕೆ ಬಹಳ ಕಂಠಕ. ಯಾರು ರಾಸಾಯನಿಕದಿಂದ ಹಣ್ಣಾದ ಮಾವಿನ ಹಣ್ಣುಗಳನ್ನು ತಿನ್ನುತ್ತಾರೆ ಅಂತಹವರಿಗೆ ಸಾಕಷ್ಟು ಬಗೆಯ ಆರೋಗ್ಯದ ಅಡ್ಡ ಪರಿಣಾಮಗಳು ಕಂಡು ಬರುತ್ತವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ವಾಕರಿಕೆ, ವಾಂತಿ, ಭೇದಿ, ರಕ್ತದಿಂದ ಕೂಡಿದ ಭೇದಿ, ಅತಿಯಾದ ಆಯಾಸ, ಎದೆಯಲ್ಲಿ ಗ್ಯಾಸ್ಟ್ರಿಕ್ ತರಹದ ಅನುಭವ, ತಲೆನೋವು ಇತ್ಯಾದಿ ಸಮಸ್ಯೆಗಳನ್ನು ಈ ಕೆಮಿಕಲ್ ಮಿಶ್ರಿತ ಮಾವಿನ ಹಣ್ಣಿನ್ನು ತಿನ್ನುವುದರಿಂದ ಅನುಭವಿಸಬೇಕಾಗುತ್ತದೆ.
ಚರ್ಮದ ಮೇಲೆ ಅಲ್ಸರ್ ಕಾಣಿಸುವುದು, ಕಣ್ಣುಗಳಿಗೆ ಹಾನಿ, ಗಂಟಲಿನ ಸಮಸ್ಯೆ, ಆಹಾರ ವನ್ನು ತಿನ್ನಲು ಕಷ್ಟವಾಗುವುದು, ಕಣ್ಣುಗಳಲ್ಲಿ ಉರಿ ಈ ತೊಂದರೆ ಗಳನ್ನು ಸಹ ಅನುಭವಿಸಬೇಕಾಗುತ್ತದೆ.
ರಾಸಾಯನಿಕ ತುಂಬಿದ ಮಾವಿನ ಹಣ್ಣುಗಳನ್ನು ತಿನ್ನು ವುದರಿಂದ ರಕ್ತದಲ್ಲಿ ಆಮ್ಲಜನಕದ ಕೊರತೆ ಉಂಟಾ ಗುತ್ತದೆ ಎಂದು ಹೇಳುತ್ತಾರೆ. ಸಾಕಷ್ಟು ಜನರಿಗೆ ಇದ್ದಕ್ಕಿ ದ್ದಂತೆ ರಕ್ತದಲ್ಲಿ ಆಮ್ಲಜನಕದ ಕುಸಿತ ಕಾಣುತ್ತದೆ.
ಕೆಲವರಿಗೆ ತಲೆ ಸುತ್ತು ಬರುವುದು, ನಿದ್ರೆ ಮಂಪರು ಬಂದಂತೆ ಆಗುವುದು, ಕಾಲುಗಳಲ್ಲಿ ಜೋಮು, ಪಾರ್ಶ್ವ ವಾಯು, ರಕ್ತದ ಒತ್ತಡದಲ್ಲಿ ಕುಸಿತ ಇತ್ಯಾದಿ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ.
ಮಾವಿನ ಕಾಯಿಯನ್ನು ಹಣ್ಣು ಮಾಡಲು ಬಳಸುವ ರಾಸಾಯನಿಕಗಳು: ಕ್ಯಾಲ್ಸಿಯಂ ಕಾರ್ಬೈಡ್ ಸಾಮಾನ್ಯವಾಗಿ ಮಾವಿನ ಕಾಯಿ ಯನ್ನು ಹಣ್ಣಿನ ರೂಪಕ್ಕೆ ತಿರುಗಿಸಲು ಬಳಸ ಲಾಗುವ ರಾಸಾಯನಿಕ ಅಂಶ. ಇದರ ಜೊತೆಗೆ ಇನ್ನು ಕೆಲವು ರಾಸಾ ಯನಿಕ ಅಂಶಗಳನ್ನು ಬಳಸಲಾಗುತ್ತದೆ.
ಈ ರಾಸಾಯನಿಕ ಅಂಶಗಳು ಅಸಿಟೈಲಿನ್ ಅಂಶಗಳನ್ನು ಉತ್ಪತ್ತಿ ಮಾಡುತ್ತವೆ. ಮಾವಿನಕಾಯಿ ಬಹಳ ಬೇಗನೆ ಹಣ್ಣಾಗಲು ಸಹಾಯ ಮಾಡುವ ರಾಸಾಯನಿಕ ಅಂಶ ಇದಾಗಿದೆ.
ಆದರೆ ಇದರಿಂದ ಮಾವಿನಹಣ್ಣಿನಲ್ಲಿ ನೈಸರ್ಗಿಕವಾಗಿ ಕಂಡು ಬರುವ ಖನಿಜಾಂಶಗಳು ಮತ್ತು ಪೌಷ್ಟಿಕ ಸತ್ವ ಗಳು ನಾಶವಾಗು ತ್ತವೆ. ಬದಲಿಗೆ ಆರ್ಸಿನಿಕ್ ಮತ್ತು ಫಾಸ್ಫರಸ್ ಎಂಬ ವಿಷಕಾರಿ ಅಂಶಗಳು ಮಾವಿನ ಹಣ್ಣಿನಲ್ಲಿ ತುಂಬಿಕೊಳ್ಳುತ್ತವೆ.
ಸೀಸನ್ ಅಲ್ಲದ ಸಮಯದಲ್ಲಿ ಬರುವ ಹಣ್ಣುಗಳನ್ನು ಎಂದಿಗೂ ಖರೀದಿಸಬೇಡಿ. ಏಕೆಂದರೆ ಅವುಗಳನ್ನು ರಾಸಾಯನಿಕದಿಂದಲೇ ಹಣ್ಣು ಮಾಡಲಾಗಿರುತ್ತದೆ. ಹಾಗಾಗಿ ಮಾವಿನ ಹಣ್ಣನ್ನು ಕೂಡ ಸೀಸನ್ ಇರುವಾಗ ಖರೀದಿಸಿದರೆ ಒಳ್ಳೆಯದು. ಸೀಸನ್ ಅಲ್ಲಿಯು ಮೋಸ ಆಗುವ ಸಾಧ್ಯತೆ ಅಧಿಕ ಇರುವುದರಿಂದ ಆದಷ್ಟು ನಮಗೆ ಹತ್ತಿರದವರು ಬೆಳೆದಿರುವ ಮಾವಿನ ತೋಟದಿಂದ ಇದನ್ನು ತೆಗೆದು ತಂದು ಉಪಯೋಗಿಸಲು ಒಳ್ಳೆಯದು.