ಮಂಗಳೂರು: ದೇಶದಲ್ಲಿ ಚುನಾವಣೆಗಳು ಮುಕ್ತಾಯವಾಗಿ ಜೂನ್ ನಾಲ್ಕರಂದು ಮತ ಎಣಿಕೆಯಾಗಿ, ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಬೆಂಬಲಿಗರು ತಮ್ಮ ಹರ್ಷೋದ್ಗಾರವನ್ನು ವ್ಯಕ್ತಪಡಿಸುವುದು ಸಹಜ. ಈ ಸಂದರ್ಭದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುವುದು ರೂಢಿಯಾಗಿದೆ.
ಆದರೆ, ಪಟಾಕಿಯಲ್ಲಿರುವ ಸಿಡಿಮದ್ದುಗಳು, ಕಾರ್ಬನ್ ಮಾನಾಕ್ಸೈಡ್ ಮತ್ತು ಸಲ್ಫರ್ ಡೈ ಆಕ್ಸೈಡ್ ನಂತಹ ಅನೇಕ ವಿಷರಾಸಾಯನಿಕಗಳನ್ನು ಹೊರಸೂಸುತ್ತವೆ. ಇವು ಮಾನವರಿಗೆ ಹಾನಿಕಾರಕವಷ್ಟೇ ಅಲ್ಲ, ಪರಿಸರ ಹಾಗೂ ಶಬ್ದ ಮಾಲಿನ್ಯಕ್ಕೂ ಕಾರಣವಾಗುತ್ತವೆ. ಹಾಗಾಗಿ ಈ ಸಂದರ್ಭಗಳಲ್ಲಿ ನಾವು ಪಟಾಕಿ ಸಿಡಿಸದೇ ಸಂಭ್ರಮಿಸುವುದು ಉತ್ತಮ ವಿಧಾನ.
ಈ ಸಂಬಂಧದಲ್ಲಿ, ಪಟಾಕಿಯನ್ನು ಸಿಡಿಸುವುದರಿಂದ ಉಂಟಾಗುವ ಪರಿಸರ ಮತ್ತು ಶಬ್ದ ಮಾಲಿನ್ಯವನ್ನು ತಡೆಗಟ್ಟುವುದು ಅಗತ್ಯವೆಂದು, ನ್ಯಾಯಮೂರ್ತಿ ಶ್ರೀ ಬೋಪಣ್ಣನವರನ್ನು ಒಳಗೊಂಡ ಸುಪ್ರೀಮ್ ಕೋರ್ಟಿನ ನ್ಯಾಯಪೀಠ, ನವೆಂಬರ್ , ೨೦೨೩ ರಲ್ಲಿ ತೀರ್ಪು ನೀಡಿದೆ.
ಈ ಹಿನ್ನೆಲೆಯಲ್ಲಿ, ಈ ಬಾರಿಯ ಚುನಾವಣಾ ಫಲಿತಾಂಶದ ಸಂಭ್ರಮವನ್ನು, ಸಂಬಂಧಪಟ್ಟವರು ಪಟಾಕಿಗಳನ್ನು ಸಿಡಿಸದೇ ಆಚರಿಸುವಂತೆ ಮಾಡಲು, ತಾವು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಪರಿಸರಕ್ಕಾಗಿ ನಾವು ಪರಿಸರ ಕಾರ್ಯಕರ್ತರ ಸಂಘಟನೆ ಮನವಿ ಮಾಡಿಕೊಂಡಿದೆ.
ಜೂನ್ ಐದು “ವಿಶ್ವ ಪರಿಸರ” ದಿನವಾದ್ದರಿಂದ ಅಭ್ಯರ್ಥಿಗಳು, ಚುನಾವಣೆಯ ತಮ್ಮ ಗೆಲುವನ್ನು , ಅವರ ಕ್ಷೇತ್ರದಲ್ಲಿ ಯೋಗ್ಯ ಮರವಾಗಬಲ್ಲ ಐದು ಸಸಿಗಳನ್ನು ನೆಟ್ಟು ಪೋಷಿಸುವುದರ ಮೂಲಕ ತಮ್ಮ ಸಂಭ್ರಮ ಹಂಚಿಕೊಳ್ಳಲಿ ಹಾಗೂ ಪರಿಸರ ಸಂರಕ್ಷಣೆಗೆ ಕೂಡ ನಾಂದಿ ಹಾಡಬಹುದು ಎಂದು ಪರಿಸರ ಕಾರ್ಯಕರ್ತರ ಸಂಘಟನೆಯ ಪ್ರಕಟನೆ ತಿಳಿಸಿದೆ.
Good idea