ಕೆಲವೊಮ್ಮೆ ರೈಲ್ವೆ ಪ್ಲಾಟ್ಫಾರ್ಮ್ನಲ್ಲಿ ಜನಜಂಗುಳಿ ಹೆಚ್ಚಾಗಿದ್ದರಿಂದ ಟಿಕೆಟ್ ಖರೀಸಲು ಸಾಧ್ಯವಾಗದೇ ರೈಲು ತಪ್ಪಿ ಹೋಗುತ್ತದೆ ಎಂಬ ಭಯದಿಂದ ಟಿಕೆಟ್ ಇಲ್ಲದೇ ರೈಲು ಹತ್ತಿಬಿಡುತ್ತಾರೆ. ಆಗ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುವುದರಿಂದ ನೀವು ದಂಡ ತೆರಬೇಕಾಗಬಹುದು ಆದರಿಂದ ರೈಲು ಹತ್ತುವ ಮುನ್ನ ಟಿಕೆಟ್ ಅನ್ನು ನಿಮ್ಮ ಮೊಬೈಲ್ನಿಂದಲೇ ಆನ್ಲೈನ್ ಮೂಲಕ ಖರೀಸಿದರೆ ಈ ಸಮಸ್ಯೆಯೇ ಇರುವುದಿಲ್ಲ.
ರೈಲು ಹತ್ತಲು ಇನ್ನೇನು ಕೆಲವೇ ನಿಮಿಷಗಳು ಇವೆ ಎನ್ನುವಾಗ ಟಿಕೆಟ್ ಬುಕ್ ಮಾಡಲು ಆಗದೇ ಇದ್ದರೆ ಯುಟಿಎಸ್ ಅಪ್ ಮೂಲಕ ಟಿಕೆಟ್ ಅನ್ನು ಬುಕ್ ಮಾಡಬಹುದು. ಕಾಯ್ದಿರಿಸದೇ ಇದ್ದರೂ ರೈಲು ಟಿಕೆಟ್ ಬುಕಿಂಗ್ ಸೌಲಭ್ಯವನ್ನು ಮೊಬೈಲ್ನಲ್ಲಿ ಆನ್ಲೈನ್ ಮೂಲಕ ರೈಲ್ವೆ ಯುಟಿಎಸ್ ಅಪ್ಲಿಕೇಶನ್ನಲ್ಲಿ ಒದಗಿಸಲಾಗಿದೆ.
ಮೊಬೈಲ್ ಅಪ್ಲಿಕೇಶನ್ ಯುಟಿಎಸ್ ಆಂಡ್ರಾಯ್ಡ್, ಐಒಎಸ್ ಮತ್ತು ವಿಂಡೋಸ್ ಆವೃತ್ತಿಗಳೊಂದಿಗೆ ಸ್ಮಾರ್ಟ್ಫೋನ್ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಅದೇ ಸಮಯದಲ್ಲಿ ಟಿಕೆಟ್ ಪಾವತಿಯನ್ನು ಆನ್ಲೈನ್ನಲ್ಲಿ ಮಾತ್ರ ಮಾಡಬಹುದು. ರೈಲ್ವೆ ಇಲಾಖೆ ಒದಗಿಸುವ ಈ ಸೌಲಭ್ಯದೊಂದಿಗೆ ಕಾಯ್ದಿರಿಸದ ಟಿಕೆಟ್ಗಳು ಮತ್ತು ಪ್ಲಾಟ್ಫಾರ್ಮ್ ಟಿಕೆಟ್ಗಳನ್ನು ಬುಕ್ ಮಾಡಬಹುದು.
ಯುಟಿಎಸ್ ನಿಂದ ಅನ್ರಿಸರ್ವಡ್ (ಕಾಯ್ದಿರಿಸದ) ಟಿಕೆಟ್ ಅನ್ನು ಬುಕ್ ಮಾಡುವುದು ಹೇಗೆ ?
*ಮೊದಲು ಯುಟಿಎಸ್ ಆಪ್ ಗೆ ಹೋಗಿ. ಸಾಮಾನ್ಯ ಬುಕಿಂಗ್ ಆಯ್ಕೆಯನ್ನು ಆರಿಸಿ.
*ನಂತರ ನೀವು ತಲುಪಬೇಕಾದ ನಿಲ್ದಾಣದ ಹೆಸರು/ಕೋಡ್ ಅನ್ನು ನಮೂದಿಸಿ.
*ಪ್ರಯಾಣಿಕ, ಮೇಲ್ ಅಥವಾ ಎಕ್ಸ್ಪ್ರೆಸ್ನಂತಹ ಟಿಕೆಟ್ ಪ್ರಕಾರವನ್ನು ಆಯ್ಕೆ ಮಾಡಿಕೊಳ್ಳಿ.
*ವಾಲೆಟ್ ಅಥವಾ ಇತರ ಆನ್ಲೈನ್ ಪಾವತಿ ವಿಧಾನಗಳಿಂದ ಪಾವತಿ ವಿಧಾನವನ್ನು ಆಯ್ಕೆ ಮಾಡಿ ಪಾವತಿಸಿ.