ಬೆಂಗಳೂರು: 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯವಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ 5ನೇ ಬಾರಿಗೆ ಟ್ರೋಫಿ ಗಳಿಸಿದೆ. ಈ ಫೈನಲ್ ಪಂದ್ಯ ವೀಕ್ಷಿಸಲು ಬರೋಬ್ಬರಿ 75 ಸಾವಿರ ಜನ ಸ್ಟೇಡಿಯಂಗೆ ಬಂದಿದ್ದಾರೆ. ಇದೇ ಸಮಯದಲ್ಲಿ ಫುಡ್ ಡೆಲಿವೆರಿ ಸ್ವಿಗ್ಗಿ ಮಾಡಿರುವ ಟ್ವೀಟ್ ಈಗ ವೈರಲ್ ಆಗುತ್ತಿದೆ.
ಪಂದ್ಯದ ವೇಳೆ ನಿಮಿಷಕ್ಕೆ 212 ಬಿರಿಯಾನಿಗಳು ಸೇರಿ ಒಟ್ಟು 12 ಮಿಲಿಯನ್ ಬಿರಿಯಾನಿಗಳು ಫೈನಲ್ ಪಂದ್ಯದ ವೇಳೆ ಆರ್ಡರ್ ಆಗಿವೆ ಎಂದು ಸ್ವಿಗ್ಗಿ ಟ್ವೀಟ್ ಮಾಡಿದೆ.
ಇದರಲ್ಲೇನಿದೆ ಅಂತೀರ? ಇಷ್ಟು ಮಾತ್ರ ಅಲ್ಲ ಇದರರೊಂದಿಗೆ ಮಾಡಿರುವ ಮತ್ತೊಂದು ಟ್ವೀಟ್ ವೈರಲ್ ಆಗಿದೆ.
ಸ್ವಿಗ್ಗಿ ಇನ್ಸ್ಟಾಮಾರ್ಟ್ ನಲ್ಲಿ ಐಪಿಎಲ್ ವೇಳೆ ಬರೋಬ್ಬರಿ 2423 ಕಾಂಡೋಮ್ಗಳು ಆರ್ಡರ್ ಆಗಿವೆ ಎಂದು ಸಂಸ್ಥೆ ಟ್ವೀಟ್ ಮಾಡಿದೆ. ಇಂದು ರಾತ್ರಿ 22 ಕ್ಕೂ ಹೆಚ್ಚು ಆಟಗಾರರು ಆಡುತ್ತಿರುವಂತೆ ತೋರುತ್ತಿದೆ ಎಂದು ಕಾಂಡೋಮ್ ಕಂಪೆನಿಯೊಂದನ್ನು ಟ್ಯಾಗ್ ಮಾಡಿ ಸ್ವಿಗ್ಗಿ ಟ್ವೀಟ್ ಮಾಡಿದ್ದು, ಈ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.
ಈ ಟ್ವೀಟ್ ಅನ್ನು 793.3 ಲಕ್ಷ ಜನರಿಗೆ ತಲುಪಿದ್ದು, 8,878 ಸಾವಿರ ಮಂದಿ ಲೈಕ್ ಮಾಡಿದ್ದಾರೆ.