ಕೆಲವರು ಎಷ್ಟು ತಮಾಷೆಯಾಗಿ ಮಾತಾಡುತ್ತಾರೆಂದರೆ “ಸಂವಿಧಾನದಿಂದ ಜಾತ್ಯತೀತ ಮತ್ತು ಸಮಾಜವಾದ ” ಎಂಬ ಶಬ್ದಗಳನ್ನು ತೆಗೆದರೆ ಏನೋ ಮಹಾ ಅನಾಹುತವಾಗಿಬಿಡುತ್ತದೆ ಎನ್ನುವಂತೆ..
ಅವರಿಗೆ ಕೇಳುವುದೇನೆಂದರೆ – ದೇಶದ ರಾಜಕಾರಣದಲ್ಲೀಗ ನೀವು ಹೇಳುವ ಆ ಜಾತ್ಯತೀತ ನೀತಿ ಮತ್ತು ಸಮಾಜವಾದ ಇವೆಲ್ಲ ಎಲ್ಲಿವೆ ? ಅವು ಸಂವಿಧಾನದ ಪುಟಗಳಲ್ಲಿದ್ದರೆ ಸಾಕೇ? ಯಾವ ರಾಜಕೀಯ ಪಕ್ಷ ಇಂದು ನಿಜವಾದ ಜಾತ್ಯತೀತ ನಿಲುವನ್ನು ಅನುಸರಿಸುತ್ತಿದೆ? ಇನ್ನು ಕೆಲ ಢೋಂಗಿ ಸಮಾಜವಾದಿಗಳು ಅಲ್ಲಲ್ಲಿ ಕಾಣಿಸುತ್ತಾರೆ ಹೊರತು ಅಸಲಿ ಸಮಾಜವಾದಿಗಳು ಎಲ್ಲಿದ್ದಾರೆ? ಅವರನ್ನು ಜನರೇ” ಸ- ಮಜಾವಾದಿಗಳು” ಎಂದು ವ್ಯಂಗ್ಯವಾಗಿ ಕರೆಯುತ್ತಾರಲ್ಲವೆ?
ಮೊದಲು ಜನರು ಯೋಗ್ಯ ವ್ಯಕ್ತಿಗಳಿಗೆ ಮತ ಹಾಕಿ ಆರಿಸಿ ತರುವ ಕೆಲಸ ಮಾಡಬೇಕು. ಬಿಟ್ಟಿ ಭಾಗ್ಯಗಳ ಆಸೆಗಾಗಿ ಅಯೋಗ್ಯರನ್ನು ಆರಿಸಿತಂದು ಅಂತಹ ನಾಲಾಯಕರಿಂದ ಒಳ್ಳೆಯ ಸರಕಾರ ನಿರೀಕ್ಷಿಸುವುದರಲ್ಲೇನು ಅರ್ಥವಿದೆ? ಅಧಿಕಾರಕ್ಕೆ ಬಂದವರು ಎಲ್ಲದಕ್ಕೂ ಜಾತಿಗಳನ್ನೇ ಆಧಾರವಾಗಿಟ್ಟುಕೊಂಡಾಗ ಅದನ್ನು ಯಾರಾದರೂ ಪ್ರಜೆಗಳು ಪ್ರತಿಭಟಿಸಿದ್ದುಂಟೇ? ನಕಲಿ ಸಮಾಜವಾದಿಗಳು ಮಜಾಶೀರ ವೈಭವೋಪೇತ ಜೀವನ ನಡೆಸುವುದನ್ನು ಯಾರಾದರೂ ವಿರೋಧಿಸಿ ಉಪವಾಸ ಸತ್ಯಾಗ್ರಹ ಮಾಡಿದ್ದುಂಟೇ? ಎಲ್ಲವನ್ನೂ ಮೂಕವಾಗಿ , ಮೌನವಾಗಿ ಒಪ್ಪಿಕೊಳ್ಳುವ ಕುರಿಹಿಂಡು ಇರುವಾಗ ಅವರಿಗೇನಂತೆ? ಅವರು ತಮ್ಮ ಮನಸ್ಸಿಗೆ ಬಂದಂತೆ ಮಾಡುತ್ತಲೇ ಇರುತ್ತಾರೆ. ನಾವು ನೋಡುತ್ತಲೇ ಇರುತ್ತೇವೆ. ಮೌನಂ ಸಮ್ಮತಿ ಲಕ್ಷಣಂ ಎಂಬಂತೆ.
ಯಾವ ಶಬ್ದವೂ ಸಂವಿಧಾನವೆಂಬ ಪುಸ್ತಕದ ಪುಟಗಳಲ್ಲಿ ಚೆಂದಕ್ಕೆ ಇದ್ದರೆ ಸಾಲದು. ಅವು ಸಮಾಜದಲ್ಲಿ , ರಾಜಕೀಯದಲ್ಲಿ ಪ್ರಚಲಿತವಿರಬೇಕು. ಇರುವಂತೆ ನಾವು ನೋಡಿಕೊಳ್ಳಬೇಕು. ಕೇವಲ ಮೋದಿ ವಿರುದ್ಧ ಮಾತನಾಡಬೇಕೆಂಬ ಉದ್ದೇಶದಿಂದಲೇ ಟೀಕಿಸುವುದು ಅಪ್ರಬುದ್ಧತೆಯ ಲಕ್ಷಣ. ರಾಜಕಾರಣಿಗಳಲ್ಲ ನಿಜವಾದ ಜಾತ್ಯತೀತ ಮನೋಭಾವ ಮೂಡಿದರೆ ಮತ್ತು ಅದನ್ನು ಕಾರ್ಯರೂಪಕ್ಕೆ ತಂದರೆ ಮಾತ್ರ ಸಂವಿಧಾನಕ್ಕೆ ಗೌರವ ನೀಡಿದಂತೆ .ಅದು ಭಾಷಣಕ್ಕೇ ಬರೆಹಕ್ಕೆ ಸೀಮಿತವಾಗಿದ್ದರೆ ಸಾಲದು.