ಬೆಂಗಳೂರು : “ನನ್ನ ತಂದೆ ಹಾಗೂ ಹೀರೋ ಮೋಟೋಕಾರ್ಪ್ನ ಸ್ಥಾಪಕ ಚೇರ್ಮನ್ ಆದ ಡಾ. ಬ್ರಿಜ್ಮೋಹನ್ ಲಾಲ್ ಮುಂಜಾಲ್ ಅವರು ವಿಶ್ವವ್ಯಾಪಿಯಾಗಿ ಕೋಟ್ಯಂತರ ಜನರಿಗೆ ಪ್ರೇರಣೆ ಒದಗಿಸಿದ್ದರು. ಅವರ ದೂರದೃಷ್ಟಿಯು, ಭಾರತೀಯ ಆಟೋಮೋಟಿವ್ ಉದ್ದಿಮೆ ಹಾಗೂ ಭಾರತೀಯ ಉದ್ದಿಮೆಯ ಚಿತ್ರಣವನ್ನೇ ಪರಿವರ್ತಿಸಿ, ಸೃಜನಶೀಲತೆ, ಆವುಷ್ಕಾರ, ಧೈರ್ಯ ಹಾಗೂ ವಿಶ್ವಾಸದ ಪರಂಪರೆಯನ್ನು ಬಿಟ್ಟುಹೋಯಿತು. ಅವರಿಗೆ, ಲಾಭಕ್ಕಿಂತಲೂ ವ್ಯಾಪಾರ ಹೆಚ್ಚಾಗಿತ್ತು-ಅದು, ಜನರ ಕುರಿತಾಗಿತ್ತು, ಅಂದರೆ, ವ್ಯಕ್ತಿ ಮತ್ತು ಸಮುದಾಯ ಇಬ್ಬರ ಕುರಿತಾಗಿತ್ತು.
ಅವರ ಶತಮಾನೋತ್ಸವದ ಒಂದು ವರ್ಷದ ಪೂರ್ಣಗೊಳ್ಳುವಿಕೆಯನ್ನು ನಾವು ಆಚರಿಸುತ್ತಿರುವಂತಹ ಸಂದರ್ಭದಲ್ಲಿ, ಅವರ ಪರಂಪರೆಯ ಗೌರವಾರ್ಥವಾಗಿ ಸೃಷ್ಟಿಸಲಾಗಿರುವ ಇಂಜಿನಿಯರಿಂಗ್ ಅದ್ಭುತವಾದ “ದಿ ಸೆಂಟೆನಿಯಲ್(‘The Centennial’)” ಅನ್ನು ಪರಿಚಯಿಸುತ್ತಿರುವುದಕ್ಕೆ ನನಗೆ ಅತೀವ ಉತ್ಸಾಹ ಮತ್ತು ಹೆಮ್ಮೆ ಆಗುತ್ತಿದೆ. ’ದಿ ಸೆಂಟೆನಿಯಲ್’ ಕೇವಲ ಒಂದು ಮೈಲಿಗಲ್ಲಿನ ಮೋಟಾರುಸೈಕಲ್ ಅಲ್ಲ, ಬದಲಿಗೆ ಅದು, ಉಕ್ಕು ಮತ್ತು ಇಂಗಾಲ ಫೈಬರ್ನಲ್ಲಿ ಬರೆಯಲಾದ ಒಂದು ಸ್ಮರಣೆಯಾಗಿದೆ. ಈ ಅದ್ಭುತವಾದ ಯಂತ್ರದ ವಿನ್ಯಾಸ, ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ಎಲ್ಲವೂ ನಮ್ಮ ಪ್ರೇರಣೆ ಒದಗಿಸುವ ಸ್ಥಾಪಕರ ಅಳಿಸಲಾಗದ ಗುರುತನ್ನು ಪ್ರತಿಫಲಿಸುತ್ತದೆ.
ಅವರ ಒಳಗೊಳ್ಳುವ ದೂರದೃಷ್ಟಿಯು, ಹೀರೋ ಸಮುದಾಯದಲ್ಲಿ ಪ್ರತಿಯೊಬ್ಬರನ್ನೂ ಆಲಂಗಿಸಿತ್ತು-ನಮ್ಮ ಗ್ರಾಹಕರು, ಉದ್ಯೋಗಿಗಳು, ಡೀಲರ್ಗಳು, ಸಹಭಾಗಿಗಳು, ಸರಬರಾಜುದಾರರು ಹಾಗೂ ಇತರ ಭಾಗೀದಾರರು, ಈ 100 ದಿನಗಳ ಅವಧಿಯಲ್ಲಿ, ನಾವು ಇದನೆಲ್ಲಾ ಪ್ರಾರಂಭಿಸಿದ ಮನುಷ್ಯನನ್ನು ಆಚರಿಸುತ್ತಿದ್ದೇವೆ. ಡಾ. ಬ್ರಿಜ್ಮೋಹನ್ ಲಾಲ್ ಮುಂಜಾಲ್ ಅವರ 101ನೆ ಜನ್ಮವಾರ್ಷಿಕೋತ್ಸವದಂದು, ಅವರ ಗೌರವಾರ್ಥ ನಮ್ಮೊಡನೆ ಸೇರಿಕೊಳ್ಳಲು ನಾನು ಪ್ರತಿಯೊಬ್ಬರನ್ನೂ ಆಹ್ವಾನಿಸುತ್ತಿದ್ದೇನೆ.” ಡಾ. ಪವನ್ ಮುಂಜಾಲ್ ಎಕ್ಸಿಕ್ಯೂಟಿವ್ ಚೇರ್ಮನ್ ಹೀರೋ ಮೋಟೋಕಾರ್ಪ್.
ಸಂಗ್ರಹಕಾರರ ಆವೃತ್ತಿಯ ಮೋಟಾರುಸೈಕಲ್ ಆದ “ದಿ ಸೆಂಟೆನಿಯಲ್” ನೊಂದಿಗೆ, ಸ್ಕೂಟರ್ಗಳು ಹಾಗೂ ಮೋಟಾರುಸೈಕಲ್ಗಳ ಜಗತ್ತಿನ ಅತಿದೊಡ್ಡ ಉತ್ಪಾದಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್ , ತನ್ನ ದಾರ್ಶನಿಕ ಸ್ಥಾಪಕ ಚೇರ್ಮನ್ ಡಾ. ಬ್ರಿಜ್ಮೋಹನ್ ಲಾಲ್ ಮುಂಜಾಲ್ ಅವರಿಗೆ ನಮನ ಸಲ್ಲಿಸುತ್ತಿದೆ.
ಭಾರತದ ಹೀರೋ ಸೆಂಟರ್ ಫಾರ್ ಇನೋವೇಶನ್ ಅಂಡ್ ಟೆಕ್ನಾಲಜಿ(CIT)’ ಮತ್ತು ಜರ್ಮನಿಯ ಹೀರೋ ಟೆಕ್ ಸೆಂಟರ್(TCG)ನ ಜಾಗತಿಕ ನಿಪುಣರು “ದಿ ಸೆಂಟೆನಿಯಲ್”ಅನ್ನು ಪರಿಕಲ್ಪಿಸಿ, ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ್ದ್ದಾರೆ. ಈ ಮಾಸ್ಟರ್ಪೀಸ್, ಆವಿಷ್ಕಾರ ಮತ್ತು ಅತ್ಯುತ್ಕೃಷ್ಟತೆಗೆ ಸಂಸ್ಥೆಯ ಬದ್ಧತೆಯನ್ನು ಪ್ರತಿಫಲಿಸುತ್ತದೆ, ಕೇವಲ 100 ಅತ್ಯಂತ ಸೂಕ್ಷ್ಮವಾಗಿ ರಚಿಸಲಾದ ಯೂನಿಟ್ಗಳೊಂದಿಗೆ, ಇದು ಪ್ರೀಮಿಯಮ್ ಕಾರ್ಯಕ್ಷಮತೆ ಹಾಗೂ ಕಲಾಕೃತಿಯ ಆಕರವಾಗಿದೆ.
ಡಾ. ಬ್ರಿಜ್ಮೋಹನ್ ಲಾಲ್ ಮುಂಜಾಲ್ ಅವರ 101ನೆ ಜನ್ಮವಾರ್ಷಿಕೋತ್ಸವದ ಗೌರವಾರ್ಥವಾಗಿ ಸಂಸ್ಥೆಯು ಈ ಬೈಕ್ಗಳನ್ನು ತನ್ನ ಉದ್ಯೋಗಿಗಳು, ಸಹಯೋಗಿಗಳು, ವ್ಯಾಪಾರ ಭಾಗೀದಾರರು ಮತ್ತು ಇತರ ಬಾಗೀದಾರರಿಗೆ ಹರಾಜು ಹಾಕಲಿದೆ. ಇದರಿಂದ ಬರುವ ಕೊಡುಗೆಗಳನ್ನು, ಸಮಾಜದಲ್ಲಿ ಇನ್ನೂ ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ಬಳಸಿಕೊಳ್ಳಲಾಗುತ್ತದೆ. ಇದು, ಸಮುದಾಯಕ್ಕೆ ಹಿಂದಿರುಗಿ ನೀಡಬೇಕೆನ್ನುವ ಸ್ಥಾಪಕರ ನಿರಂತರ ಮೌಲ್ಯವನ್ನು ಪ್ರತಿಫಲಿಸುತ್ತದೆ.
’ದಿ ಸೆಂಟೆನಿಯಲ್”ನ ಡೆಲಿವರಿ, ಸೆಪ್ಟೆಂಬರ್ 2024ರಿಂದ ಆರಂಭವಾಗಲಿದೆ.
ಹೆಚ್ಚುವರಿಯಾಗಿ, ಒಳಗೊಳ್ಳುವಿಕೆ ಹಾಗೂ ದೀರ್ಘಸ್ಥಾಯಿತ್ವಕ್ಕೆ ತನ್ನ ಬದ್ಧತೆಯೊಂದಿಗೆ ಮುನ್ನಡೆಯುವ ಸಂಸ್ಥೆಯು, ತನ್ನ ಜಾಗತಿಕ ಮಾರುಕಟ್ಟೆಗಳೂ ಒಳಗೊಂಡಂತೆ, ತನ್ನ ಘಟಕಗಳು ಹಾಗೂ ಡೀಲರ್ ಕಾರ್ಯಜಾಲದಾದ್ಯಂತ 100 ದಿನಗಳ ಗ್ರಾಹಕ ಮತ್ತು ಉದ್ಯೋಗಿ ತೊಡಗಿಕೊಳ್ಳುವಿಕೆಯನ್ನು ಆಚರಿಸಲಿದೆ. ಈ ಅವಧಿಯಲ್ಲಿ, ಯಾವುದೇ ಹೀರೋ ಮೋಟಾರುಸೈಕಲ್ ಅಥವಾ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ತಮ್ಮ ಖರೀದಿಯ ಮೇಲೆ 100% ಕ್ಯಾಶ್ಬ್ಯಾಕ್ ಪಡೆದುಕೊಳ್ಳುವ ವಿಶಿಷ್ಟ ಅವಕಾಶ ಇರುತ್ತದೆ. ಈ ಕೊಡುಗೆಯು 100 ವಾಹನಗಳ ಸೀಮಿತ ಸಂಖ್ಯೆಗೆ ಲಭ್ಯವಿರುತ್ತದೆ. ಹೆಚ್ಚಿನ ವಿವರಗಳು ಸಂಸ್ಥೆಯ ವೆಬ್ಸೈಟ್ ಹಾಗು ಸಮೂಹ ಮಾಧ್ಯಮ ವೇದಿಕೆಗಳಲ್ಲಿ ಲಭ್ಯವಿದೆ.
ಹೀರೋ ಮೋಟೋಕಾರ್ಪ್, “ಮೈ ಹೀರೋ, ಮೈ ಸ್ಟೋರಿ” ಪ್ರಚಾರದಲ್ಲಿ ಪಾಲ್ಗೊಳ್ಳುವುದಕ್ಕೂ ತನ್ನ ಗ್ರಾಹಕರನ್ನು ಆಹ್ವಾನಿಸಲಿದ್ದು, ಇದರಲ್ಲಿ ಅವರು ಬ್ರ್ಯಾಂಡ್ನೊಂದಿಗೆ ತಮ್ಮ ವಿಶೇಷ ಅನುಭವ ಹಾಗೂ ಪಯಣವನ್ನು ತೋರಿಸುವ ಕಥಾನಕಗಳನ್ನು ಹಂಚಿಕೊಳ್ಳಬಹುದು. ವಿವಿಧ ಹಿನ್ನೆಲೆಗಳಿಂದ ಬಂದ ತಜ್ಞರ ಪ್ರತಿಷ್ಠಿತ ಪ್ಯಾನೆಲ್ ಈ ಸಲ್ಲಿಕೆಗಳನ್ನು ಪರಿಶೀಲಿಸಿ, ಅಗ್ರಮಾನ್ಯ ಎಂಟ್ರಿಗಳಿಗೆ ಪ್ರತಿಷ್ಠಿತ “ದಿ ಸೆಂಟೆನಿಯಲ್” ನೀಡಲಾಗುತ್ತದೆ.
ದಿ ಸೆಂಟೆನಿಯಲ್(The Centennial)
’ದಿ ಸೆಂಟೆನಿಯಲ್’ ತನ್ನ ಅದ್ವಿತೀಯವಾದ ರಚನೆ, ಇಂಗಾಲ ಫೈಬರ್ ಹಾಗೂ ಮಿಲ್ ಮಾಡಿದ ಅಲ್ಯುಮಿನಿಯಮ್ ಬಳಕೆ ಹಾಗೂ ಸೂಕ್ಷ್ಮ ಇಂಜಿನಿಯರಿಂಗ್ನೊಂದಿಗೆ ಪ್ರತ್ಯೇಕವಾಗಿ ನಿಲ್ಲುತ್ತದೆ.
ಇದರ ವಿಶಿಷ್ಟವಾದ ಅಂಶಗಳು, ವರ್ಧಿತ ಚಾಲನಾ ಅನುಭವಕ್ಕಾಗಿ ಹಗುರತೂಕದ ಅಲ್ಯುಮಿನಿಯಮ್ ಸ್ವಿನ್ಗರ್ಮ್, ಮತ್ತು ತೆಳುವಾದ ಸೌಂದರ್ಯ ಹಾಗೂ ರಚನಾತ್ಮಕ ದೃಢತೆಗಾಗಿ ಹೊಸದಾಗಿ ವಿನ್ಯಾಸಗೊಂಡಿರುವ ಇಂಗಾಲ ಫೈಬರ್ನ ಬಾಡಿ ಪ್ಯಾನೆಲ್ಗಳನ್ನು ಒಳಗೊಂಡಿದೆ. ಹ್ಯಾಂಡಲ್ಬಾರ್ಗಳು, ಹ್ಯಾಂಡಲ್ಬಾರ್ ಮೌಂಟ್ಸ್, ಟ್ರಿಪಲ್ ಕ್ಲಾಂಪ್ಸ್, ಮತ್ತು ರೇರ್-ಸೆಟ್ ಫುಟ್ ಪೆಗ್ಸ್ ಒಳಗೊಂಡಂತೆ, ’ದಿ ಸೆಂಟೆನಿಯಲ್”ನ ಗುಣವಿಶೇಷತೆಗಳನ್ನು ವಿಶೇಷವಾಗಿ ಅಭಿವೃದ್ಧಿಪಡಿಸಿ, ಯಾಂತ್ರೀಕೃತಗೊಳಿಸಿ ಆನೋಡೈಜ್ಡ್ ಮಾಡಲಾಗಿದೆ.
ಮೆಚ್ಚಿಕೊಳ್ಳುವಂತಹ ಕಾರ್ಯಕ್ಷಮತೆ ಹಾಗೂ ಚುರುಕುತನ ಒದಗಿಸುವ ಈ ಬೈಕ್, ಗ್ಯಾಸ್-ಚಾರೆಜ್ ಮಾಡಲಾದ, ಸಂಪೂರ್ಣವಾಗಿ ಸರಿಪಡಿಸಿಕೊಳ್ಳಬಹುದಾದ ವಿಲ್ಬರ್ಸ್(Wilbers)ಅವರ ಮಾನೋಶಾಕ್ ಮತ್ತು ಡ್ಯಾಂಪಿಂಗ್ ಸರಿಪಡಿಸುವಿಕೆ ಇರುವ 43-ಮಿ.ಮೀ ತಲೆಕೆಳಗಾದ ಫ್ರಂಟ್ ಸಸ್ಪೆನ್ಶನ್ನೊಂದಿಗೆ ಸಜ್ಜುಗೊಂಡಿದೆ.
ಅಗ್ರಮಾನ್ಯವಾದ ಕಾರ್ಬನ್ ಫೈಬರ್ನಿಂದ ಮತ್ತು Akrapovic ಅವರ ಟೈಟಾನಿಯಮ್ ಎಕ್ಸಾಸ್ಟ್ ಸಿಸ್ಟಮ್ನಿಂದ ಹೊರಬರುವ ವಿಶಿಷ್ಟವಾದ, ಡೀಪ್ ಎಕ್ಸಾಸ್ಟ್ ನೋಟ್, ಗರಿಷ್ಟ ಕಾರ್ಯಕ್ಷಮತೆಗಾಗಿಯೇ ವಿಶೇಷವಾಗಿ ಟ್ಯೂನ್ ಮಾಡಲಾಗಿದ್ದು ಬೈಕ್ನೊಂದಿಗೆ ಅಡಚಣೆಯಿಲ್ಲದೆ ಸಂಯೋಜಿತಗೊಳ್ಳುತ್ತದೆ.
ಕಾರ್ಬನ್ ಫೈಬರ್ ಸೀಟ್ ಕೌಲ್ ಇರುವ ಒಂಟಿ ಸೀಟ್ ಮತ್ತು ಸೈಡ್ ಕವರ್ಗಳ ಮೇಲಿರುವ ಮಿಲ್ಡ್ ಅಲ್ಯುಮಿನಿಯಮ್ ವಿಶೇಷ ಆವೃತ್ತಿಯ ಸಂಖ್ಯೆಯಿರುವ ಬ್ಯಾಡ್ಜಿಂಗ್, ಬೈಕ್ನ ವೈಶಿಷ್ಟ್ಯತೆ ಹಾಗೂ ವಿಭಿನ್ನತೆಗೆ ಸೇರ್ಪಡೆಯಾಗಿದೆ. ಡೈಮಂಡ್ ಕಟ್ ಅಲಾಯ್ ವ್ಹೀಲ್ಸ್ ಹಾಗೂ ಇಂಜಿನ್ ಮತ್ತು ಫ್ರೇಮ್ನ ಪೈಂಟ್ ಸ್ಕೀಮ್ಗೆ ನೀಡಲಾಗಿರುವ ಗಮನ ಎದ್ದುಕಾಣುತ್ತದೆ ಮತ್ತು ಇವೆಲ್ಲವೂ ಮೋಟಾರುಸೈಕಲ್ನ ದರ್ಶನ ನೋಟವನ್ನು ವರ್ಧಿಸುತ್ತದೆ.
158 ಕಿಲೋ ಕಡಿಮೆ ಕರ್ಬ್ ತೂಕದೊಂದಿಗೆ ’ದಿ ಸೆಂಟೆನಿಯಲ್’ ಅತ್ಯಂತ ಹಗುರವಾಗಿದ್ದು, ಅತ್ಯುತ್ಕೃಷ್ಟ ಥ್ರಾಟಲ್ ಪ್ರತಿಕ್ರಿಯೆ ಮತ್ತು ಸುಧಾರಿತ ಹ್ಯಾಂಡ್ಲಿಂಗ್ ಮತ್ತು ಬ್ರೇಕಿಂಗ್ ಕಾರ್ಯಕ್ಷಮತೆ ಒದಗಿಸುತ್ತದೆ.