ಕೂದಲಿನ ಆರೈಕೆ ಮಾಡಿದಷ್ಟು ಕೂದಲು ಚೆನ್ನಾಗಿ ಬೆಳೆಯುತ್ತಾ ಇರುತ್ತದೆ. ಕೆಲವೊಮ್ಮೆ ನಾವು ಕೂದಲನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡಲು ಕಂಡೀಷನರ್ ಅನ್ನು ಉಪಯೋಗಿಸುತ್ತೇವೆ. ತುಂಬಾ ಜನರು ಮಾರುಕಟ್ಟೆಯಲ್ಲಿ ಸಿಗುವ ಕಂಡೀಷನರ್ ಬಳಕೆ ಮಾಡುತ್ತಾರೆ. ಆದರೆ ಇದರಲ್ಲಿ ಹೆಚ್ಚು ಕೆಮಿಕಲ್ ಇರುತ್ತದೆ. ಅಲ್ಲದೆ ರಾಸಾಯನಿಕಗಳ ಅಡ್ಡಪರಿಣಾಮಗಳೂ ಬೀರುತ್ತವೆ
ಇದು ಕೂದಲನ್ನು ಹಾಳು ಮಾಡುತ್ತದೆ.
ಕೂದಲು ತುದಿ ಒಡೆಯಲು ಮತ್ತು ಕೂದಲು ಉದುರಲು ಪ್ರಾರಂಭಿಸಿದ್ದಾಗ ಇದನ್ನು ತಡೆಯಲು ನಾವು ಮನೆಯಲ್ಲಿ ಕಂಡೀಷನರ್ ತಯಾರಿಸಿಕೊಳ್ಳಬಹುದು. ಕೂದಲಿಗೆ ಮನೆಯಲ್ಲಿ ಮಾಡಿದ ಕಂಡೀಷನರ್ ಬಳಕೆ ಮಾಡುವುದರಿಂದ ಕೂದಲು ಹೊಳಪು ಬರಿತವಾಗಿ ಮತ್ತು ಉದ್ದವಾಗಿ ಬೆಳೆಯುತ್ತಾ ಹೋಗುತ್ತದೆ
ಈ ರೀತಿ ಕಂಡೀಷನರ್ ಅನ್ನು ಮನೆಯಲ್ಲಿ ತಯಾರಿಸಿ ಕೂದಲಿಗೆ ಹಚ್ಚಿಕೊಳ್ಳುವುದರಿಂದ ಅನೇಕ ರೀತಿಯ ಪ್ರಯೋಜನಗಳು ಸಿಗುತ್ತವೆ.
ಮನೆಯಲ್ಲಿ ಸಿಗುವ ನೈಸರ್ಗಿಕ ಪದಾರ್ಥಗಳಿಂದ ಕಂಡೀಷನರ್ ತಯಾರಿಸಬಹುದಾಗಿದೆ. ಈ ಸೌಂದರ್ಯ ಉತ್ಪನ್ನಗಳು ದೊಡ್ಡ ಧನಾತ್ಮಕ ಪರಿಣಾಮ ಬೀರುತ್ತವೆ. ಹೋಂ ಮೇಡ್ ಕಂಡೀಷನರ್ ಗೆ ಬಳಸುವ ತೆಂಗಿನ ಎಣ್ಣೆ, ಆಲಿವ್ ಎಣ್ಣೆ, ಅರ್ಗಾನ್ ಎಣ್ಣೆ ಮತ್ತು ಆವಕಾಡೊ ಎಣ್ಣೆ ಗಳಿಂದ ತೇವಾಂಶ ಮತ್ತು ಪೋಷಣೆ ನೀಡುತ್ತದೆ
ಆವಕಾಡೊ, ಬಾಳೆಹಣ್ಣು, ಪಪ್ಪಾಯಿ, ನಿಂಬೆ, ಕಿತ್ತಳೆ ದೇಹಕ್ಕೆ ಜಲಸಂಚಯನ ಮತ್ತು ಕಂಡೀಷನಿಂಗ್ ಸಹಾ ಮಾಡುತ್ತದೆ. ಮೊಸರು, ಹಾಲು ಮತ್ತು ಹುಳಿ ಕ್ರೀಮ್ ಕೂದಲಿಗೆ ತೇವಾಂಶ, ಹೊಳಪು ಮತ್ತು ಮೃದುತ್ವ ನೀಡುತ್ತದೆ. ಜೇನುತುಪ್ಪ, ಅಲೋವೆರಾ ಜೆಲ್, ನೆತ್ತಿಯ ಆರೋಗ್ಯ ಕಾಪಾಡುತ್ತದೆ.
ತೆಂಗಿನ ಎಣ್ಣೆ ಮತ್ತು ಜೇನುತುಪ್ಪದ ಕಂಡಿಷನರ್ ಗೆ ತೆಂಗಿನೆಣ್ಣೆ ಮತ್ತು ಜೇನುತುಪ್ಪ ಚೆನ್ನಾಗಿ ಮಿಕ್ಸ್ ಮಾಡಿ. ಮಿಶ್ರಣವನ್ನು ಒದ್ದೆಯಾದ ಕೂದಲಿಗೆ ಬೇರುಗಳಿಂದ ಕೂದಲಿನ ಉದ್ದದವರೆಗೆ ಹಚ್ಚಿರಿ. 30 ನಿಮಿಷ ಬಿಟ್ಟು ಉಗುರುಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು.
ಅಲೋವೆರಾ ಜೆಲ್ ಮತ್ತು ಆಲಿವ್ ಎಣ್ಣೆ ಬಟ್ಟಲಲ್ಲಿ ಮಿಕ್ಸ್ ಮಾಡಿ. ಅದನ್ನು ಒದ್ದೆಯಾದ ಕೂದಲಿನ ಮೇಲೆ ಮೂಲದಿಂದ ಉದ್ದಕ್ಕೆ ಹಚ್ಚಬೇಕು. 30 ನಿಮಿಷ ಬಿಟ್ಟು ಉಗುರುಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆದು ಕೊಳ್ಳಬೇಕು. ಈ ರೀತಿಯಾಗಿ ಮನೆಯಲ್ಲಿ ಕಂಡಿಷನರ್ ಅನ್ನು ಉಪಯೋಗಿಸಬಹುದು