ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ನಟ, ಡಾಕ್ಟರ್ ರಾಜಕುಮಾರ್ ಕುಟುಂಬದ ಕುಡಿ ಯುವ ರಾಜಕುಮಾರ ‘ಯುವ’ ಸಿನಿಮಾದ ಮೂಲಕ ಗಮನ ಸೆಳೆದಿದ್ದಾರೆ.
ಸದ್ಯಕ್ಕೆ ಯುವ ಸಿನಿಮಾದ ಚಿತ್ರೀಕರಣ ಮಂಗಳೂರಿನಲ್ಲಿ ನಡೆಯುತ್ತಿದೆ. ಮಂಗಳೂರಿನ ವಿವಿಧ ಸ್ಥಳಗಳಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು ಯುವರಾಜ್ ಕುಮಾರ್, ಸಪ್ತಮಿಗೌಡ ಸೇರಿದಂತೆ ಹಲವು ನಟ ನಟಿಯರು ತೊಡಗಿಸಿಕೊಂಡಿದ್ದಾರೆ.
ಮಂಗಳೂರಿನಲ್ಲಿ ಶೂಟಿಂಗ್ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಸಿದ ಯುವರಾಜ್ ಕುಮಾರ್, ಮಂಗಳೂರು ಹೊರಗಿನ ನೋಡಲು ಮಾಡರ್ನ್ ಆಗಿ ಕಾಣುತ್ತದೆ. ಆದರೆ ಇಲ್ಲಿ ಹಲವು ಸಂಸ್ಕೃತಿಗಳಿವೆ. ಈ ನಗರ ನಮ್ಮ ಸಿನಿಮಾದ ಹಲವು ದೃಶ್ಯಗಳಿಗೆ ಚಾರ್ಮ್ ನೀಡುತ್ತಿದೆ ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ಚಿತ್ರೀಕರಣ ಮಾಡುತ್ತಿರುವುದು ಖುಷಿಯ ವಿಚಾರ ಪ್ರತಿದಿನವೂ ಚಿತ್ರೀಕರಣವನ್ನು ಎಂಜಾಯ್ ಮಾಡುತ್ತಿದ್ದೇನೆ ಎಂದು ನಟಿ ಸಪ್ತಮಿ ಗೌಡ ಹೇಳಿದ್ದಾರೆ.
ಈ ಸಿನಿಮಾವನ್ನು ವಿಜಯ ಕಿರಣ್ ಕಿರಗಂದೂರು ಅವರು ನಿರ್ಮಾಣ ಮಾಡುತ್ತಿದ್ದು, ಸಂತೋಷ ಆನಂದರಾಮ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಗೆ ಸಂಗೀತ ನಿರ್ದೇಶನವನ್ನು ಅಜನಿಶ್ ಬಿ ಲೋಕನಾಥ್ ಮಾಡುತ್ತಿದ್ದರು ಛಾಯಾಗ್ರಹಣ ಶ್ರೀಶ ಕೊಳವಳ್ಳಿ ಮಾಡಲಿದ್ದಾರೆ.