ಕಳೆದ ಮಾರ್ಚ್ ತಿಂಗಳ ಅಂತ್ಯದಲ್ಲಿ ಆರಂಭಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ನ 16ನೇ ಆವೃತ್ತಿಯ ಅಂತಿಮ ಘಟ್ಟವನ್ನು ತಲುಪಿದ್ದು ನಾಳೆ ಐಪಿಎಲ್ ಕೊನೆಯ ಮ್ಯಾಚ್ನೊಂದಿಗೆ ಐಪಿಎಲ್ 2023 ಮುಕ್ತಾಯವಾಗಲಿದೆ.
ಚೆನ್ನೈಸೂಪರ್ ಕಿಂಗ್ಸ್ ಹಾಗೂ ಗುಜರಾತ್ಟೈಟನ್ಸ್ ಫೈನಲ್ಸ್ ಪ್ರವೇಶಿಸಿದ್ದು, ಭಾನುವಾರ ನಡೆಯಲಿರುವ ಹೈವೋಲ್ಟೇಜ್ ಮ್ಯಾಚ್ಗೆ ಅಹಮದಾಬಾದ್ನ ನರೇಂದ್ರಮೋದಿ ಸ್ಟೇಡಿಯಂ ಸಾಕ್ಷಿಯಾಗಲಿದೆ.
ಮಾಜಿ ಚಾಂಪಿಯನ್ಸ್ ಮತ್ತು ಹಾಲಿ ಚಾಂಪಿಯನ್ಸ್ ನಡುವೆ ಹಣಾಹಣಿ ನಡೆಯಲಿದ್ದು, ಐಪಿಎಲ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸೂಪರ್ ಸಂಡೇಯಾದ ನಾಳೆ ಸಂಜೆ 6 ಗಂಟೆಗೆ ಐಪಿಎಲ್ನ ಕೊನೆಯ ಪಂದ್ಯ ಪ್ರಾರಂಭವಾಗಲಿದೆ.
ಒಂದನೇ ಕ್ವಾಲಿಫಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್ ಪ್ರವೇಶಿಸಿತ್ತು. ಈ ಪಂದ್ಯದಲ್ಲಿ ಸೋತ ಗುಜರಾತ್ ಟೈಟನ್ಸ್ ಎರಡನೇ ಕ್ವಾಲಿಫಯರ್ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಆಡಿ ಭರ್ಜರಿ ಗೆಲುವು ಸಾಧಿಸಿ ಐಪಿಎಲ್ನ ಫೈನಲ್ ಪ್ರವೇಶಿಸಿದೆ.
ಐಪಿಎಲ್ ಕೊನೆಯ ಪಂದ್ಯದ ಸಮಾರೋಪ ಸಮಾರಂಭ ಅದ್ದೂರಿಯಾಗಿ ನಡೆಯಲಿದ್ದು, ಡಿಜೆ ನ್ಯೂಕ್ಲಿಯಾ ಪ್ರದರ್ಶನ ನಡೆಯಲಿದೆ. ಹಾಗೆಯೇ ಇದರ ಜೊತೆ ಜೋನಿತಾ ಗಾಂಧಿ ಮತ್ತು ಡಿವೈನ್ ಕಾಮಿಡಿ ಶೋ ಇರಲಿದೆ.