ನೀವು ಮಧುಮೇಹಿಗಳಾ? ನೀವು ರಿವರ್ಸ್ ಡಯಾಬಿಟಿಸ್ ಬಗ್ಗೆ ಕೇಳಿದ್ದೀರಾ? ಮಧುಮೇಹವನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಿಲ್ಲ ಎಂದು ಹೇಳುವುದು ಸಂಪೂರ್ಣ ಸತ್ಯವಲ್ಲ, ನೀವು ರಿವರ್ಸ್ ಡಯಾಬಿಟಿಸ್ ಅಳವಡಿಸಿಕೊಂಡರೆ ಮಧುಮೇಹ ಮುಕ್ತ ಜೀವನ ನಡೆಸುವುದು ದೊಡ್ಡ ವಿಷಯವೇನೂ ಅಲ್ಲ. ಈ ರಿವರ್ಸ್ ಡಯಾಬಿಟಿಸ್ ಮಾಡುವುದು ಹೇಗೆ? ಇದು ಹೇಗೆ ಪರಿಣಾಮಕಾರಿ ಎಂದು ನೋಡೋಣ ಬನ್ನಿ:
ಮಧುಮೇಹದ ಲಕ್ಷಣಗಳು
* ಅತಿಯಾದ ಬಾಯಾರಿಕೆ
* ಪದೇ ಪದೇ ಮೂತ್ರವಿಸರ್ಜನೆಯಾಗುವುದು
* ಅತಿಯಾದ ಬಾಯಾರಿಕೆ
* ತಲೆಸುತ್ತು
* ಕಣ್ಣು ಮಂಜಾಗುವುದು
* ಕಾಲುಗಳು ಮರಗಟ್ಟುವುದು
* ಇದ್ದಕ್ಕಿದ್ದಂತೆ ತೂಕ ಇಳಿಕೆಯಾಗುವುದು
ರಿವರ್ಸ್ ಡಯಾಬಿಟಿಸ್ ಎಂದರೇನು?
ಯಾರಿಗೆ ಡಯಾಬಿಟಿಸ್ ಅಂದರೆ ಮಧುಮೇಹವಿರುತ್ತದೋ ಅವರು ಜೀವನಶೈಲಿ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿಡುವುದು, ಈ ರೀತಿ ಮಾಡುವುದರಿಂದ ಮಧುಮೇಹ ಮುಕ್ತ ಜೀವನ ನಡೆಸಬಹುದು. ಯಾರಿಗೆ ಮಧುಮೇಹ ರಿವರ್ಸ್ ಮಾಡಬಹುದು ಎಂದು ನೋಡುವುದಾದರೆ
* ಮಧುಮೇಹ ಪ್ರಾರಂಭವಾಗಿ 5 ವರ್ಷಕ್ಕಿಂತ ಕಡಿಮೆ ವರ್ಷವಾಗಿರಬೇಕು
* ಮಧುಮೇಹ ಪತ್ತೆಯಾದಾಗ HbA1c ಶೇ.9ಕ್ಕಿಂತಲೂ ಕಡಿಮೆ ಇರಬೇಕು.
* BMI -23 kg/sq. m. ಅಧಿಕವಿರಬೇಕು.
* 60 ವರ್ಷದ ಕೆಳಗಿನವರಾಗಿಬೇಕು.
* ಡಯಾಬಿಟಿಸ್ ರಿವರ್ಸ್ ಮಾಡಲು ಪ್ರಯತ್ನ ಪಡುವ ಛಲ ಇರಬೇಕು.
ಮಧುಮೇಹ ಡಯಾಬಿಟಿಸ್ ರಿವರ್ಸ್ ಮಾಡಲು ಯಾವ ಕಾರಣಕ್ಕೆ ಸಕ್ಕರೆ ಹೆಚ್ಚಾಗುತ್ತಿದೆ ಎಂದು ತಿಳಿದುಕೊಳ್ಳಬೇಕು
ನಾವು ತಿನ್ನುವ ಆಹಾರಕ್ರಮ ನಮ್ಮ ದೇಹದ ಸಕ್ಕರೆಯಂಶ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಯಾವ ಆಹಾರ ನಿಮ್ಮ ದೇಹದಲ್ಲಿ ಸಕ್ಕರೆಯಂಶ ಹೆಚ್ಚು ಮಾಡುತ್ತದೆ ಎಂದು ತಿಳಿದರೆ ಮಧುಮೇಹ ನಿಯಂತ್ರಣದಲ್ಲಿಡಲು ಸಹಕಾರಿಯಾಗುವುದು.
ಜನರ ಸಲಹೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ
ಮಧುಮೇಹವಿದೆ ಎಂದು ನೀವು ಹೇಳಿದರೆ ಎಲ್ಲರೂ ಡಾಕ್ಟರ್ ರೀತಿಯಲ್ಲಿ ಸಲಹೆ ನೀಡುತ್ತಾರೆ. ಮಧುಮೇಹ ಸಂಪೂರ್ಣ ಗುಣಮುಖವಾಗುವುದಿಲ್ಲ. ಆದರೆ ರಿವರ್ಸ್ ಡಯಾಬಿಟಿಸ್ನಿಂದ ಮಧುಮೇಹದ ಅಪಾಯವಿಲ್ಲದೆ ಜೀವನ ನಡೆಸಬಹುದು ಎಂಬುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ರಿವರ್ಸ್ ಡಯಾಬಿಟಿಸ್ಗೆ ನೀವೇನು ಮಾಡಬೇಕು ಎಂದು ನೋಡುವುದಾದರೆ
ಆರೋಗ್ಯಕರ ಆಹಾರಕ್ರಮ ಪಾಲಿಸಿ
ಮಧುಮೇಹಿಗಳು ಕ್ಯಾಲೋರಿ ಆಹಾರ ಕಡಿಮೆ ಮಾಡಬೇಕು, ಅದರಲ್ಲೂ ಕಾರ್ಬ್ಸ್ನ ಕ್ಯಾಲೋರಿ ಕಡಿಮೆ ಮಾಡಬೇಕು. ಪ್ರತಿಬಾರಿ ಆಹಾರ ಸೇವಿಸಿದಾಗ 200ಗ್ರಾಂಗಿಂತ ಅಧಿಕ ಕ್ಯಾಲೋರಿ ಬಳಸಬಾರದು. ನಿಮ್ಮ ಆಹಾರಕ್ರಮದಲ್ಲಿ ತೆಳು ಮಾಂಸ, ನಾರಿನಂಶದ ಆಹಾರ, ಸೋಯಾ, ಬೀನ್ಸ್, ತೆಳು ಮಾಂಸ, ಚಿಕನ್ ಸೇರಿಸಬಹುದು.
ಇವುಗಳನ್ನು ಬಳಸಬಹುದು.
ದಿನನಿತ್ಯ ವ್ಯಾಯಾಮ ಮಾಡಿ
ದಿನನಿತ್ಯ 30 ನಿಮಿಷ ವ್ಯಾಯಾಮ ಮಾಡಲೇಬೇಕು. ದೈಹಿಕ ಚಟುವಟಿಕೆ ಕಡಿಮೆಯಿದ್ದರೆ ಮಧುಮೇಹದ ಸಮಸ್ಯೆ ಹೆಚ್ಚಾಗುವುದು. ಆದ್ದರಿಂದ ಒಂದು ಮೈ ತೂಕ ಕಡಿಮೆ ಮಾಡಿದಿನ ತಪ್ಪದೆ ವ್ಯಾಯಾಮ ಮಾಡಿ, ಆದಷ್ಟು ನಡೆಯಿರಿ.
ನೀವು ಮೈ ತೂಕ ಕಡಿಮೆ ಮಾಡಿಕೊಂಡರೆ ಮಧುಮೇಹ ಅರ್ಧ ಅಪಾಯ ತಪ್ಪುತ್ತದೆ. ನಿಮ್ಮ ಆಹಾರಕ್ರಮ ಹಾಗೂ ವ್ಯಾಯಾಮ ಮೈ ತೂಕ ಕಡಿಮೆ ಮಾಡಿ ಮಧುಮೇಹ ರಿವರ್ಸ್ ಮಾಡಲು ತುಂಬಾನೇ ಸಹಕಾರಿಯಾಗಿದೆ.