ಒಂದು ದೇಶ ಆರ್ಥಿಕವಾಗಿ ಬಲಿಷ್ಠವಾಗ ಬೇಕಾದರೆ ಸ್ವಾರ್ಥತೆಯಿಂದ ಕೂಡಿಟ್ಟಿರುವ ಹಣವು ದೇಶದ ಖಜನೆಯನ್ನು ಸೇರಲೇಬೇಕು. ದೇಶದಲ್ಲಿ ಅದೆಷ್ಟೋ ಮಂದಿ ತೆರಿಗೆ ಪಾವತಿಸದೆ ಬಚ್ಚಿಟ್ಟ ಹಣದಿಂದ ಜನ ಸಾಮನ್ಯರ ಮೇಲೆ ಆರ್ಥಿಕತೆಯ ಹೊರೆಯಿಂದ ಮುಳುಗುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಬಚ್ಚಿಟ್ಟಿರುವ ಹಣವನ್ನು ಹೊರ ತೆಗೆಯಲು ಸರ್ಕಾರವು ವಿವಿಧ ತಂತ್ರಗಳನ್ನು ಮಾಡಲೇಬೇಕಾಗಿದೆ. ಕ್ಲೀನ್ ನೋಟ್ ಪಾಲಿಸಿ ಪ್ರಕಾರ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಆರ್ಬಿಐ ಈಗಾಗಲೇ ಘೋಷಿಸಿದೆ. 2016 ನೋಟು ಅಮಾನ್ಯೀಕರಣದ ನಂತರ 2000 ರೂಪಾಯಿಯ ನೋಟುಗಳನ್ನು ಪರಿಚಯಿಸಲಾಗಿತ್ತು. ಇದೀಗ ಸೆಪ್ಟೆಂಬರ್ 30ರ ಒಳಗೆ ಈ ನೋಟುಗಳನ್ನು ಬ್ಯಾಂಕ್ ನಲ್ಲಿ ಜಮೆ ಮಾಡುವಂತೆ ಆರ್ ಬಿ ಐ ಮನವಿ ಮಾಡಿದೆ.
ಇತ್ತ ಇತಿಹಾಸ ಕೆದಕಿದರೆ ಈ ಹಿಂದೆನೂ ನೋಟುಗಳನ್ನು ಅಮಾನ್ಯಗೋಳಿಸಲಾಗಿತ್ತು. 1946 ರಲ್ಲಿ ಬ್ರಿಟಿಷ್ ಸರ್ಕಾರವು ಅಂದಿನ ಆರ್ ಬಿ ಐ ಗವರ್ನರ್ ಚಿಂತಾಮನ್ ದ್ವಾರಕನಾಥ್ ದೇಶ್ಮುಖ್ ಅವರೊಂದಿಗೆ ಸಮಾಲೋಚಿಸಿ 500, 1000, 10,000 ರೂಪಾಯಿಯ ನೋಟುಗಳನ್ನು ಅಮಾನ್ಯಗೊಳಿಸಿತ್ತು. ಇದಕ್ಕೆ ಮುಖ್ಯ ಕಾರಣ ಎರಡನೇ ಮಹಾ ಯುದ್ಧ ಮತ್ತು ಬೆಳೆಯುತ್ತಿದ್ದ ಕಪ್ಪು ಮಾರಕಟ್ಟೆಯನ್ನು ತಡೆಯಲು ಈ ಕ್ರಮವನ್ನು ತೆಗೆದುಕೊಳ್ಳಲಾಯಿತ್ತು.
1978 ರಲ್ಲಿ ಭಾರತದ ಸಂಸತ್ತು ಅಂಗೀಕರಿಸಿದ ಕಾನೂನು, ಅಧಿಕ ಮುಖಬೆಲೆಯ ಬ್ಯಾಂಕ್ ನೋಟುಗಳು (ಅಪನಗದೀಕರಣ) ಕಾಯ್ದೆಯ ಪ್ರಕಾರ 1000, 5000, 10,000 ರೂಪಾಯಿಯ ನೋಟುಗಳ ಬಳಕೆಯನ್ನು ನಿಲ್ಲಿಸಲಾಯಿತ್ತು.
ಜನವರಿ 22, 2014 ರಂದು, ಆರ್ಬಿಐ ಮಾರ್ಚ್ 31, 2014 ರ ನಂತರ, 2005 ಕ್ಕಿಂತ ಮೊದಲು ಚಲಾವಣೆಯಾದ ಎಲ್ಲಾ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಅಧಿಕೃತವಾಗಿ ಹೇಳಿತ್ತು. ನಂತರ ಮಾತಿನಂತೆ ನಡೆದುಕೊಂಡಿತ್ತು.
ನವೆಂಬರ್ 8, 2016 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1,000 ರೂ.ಗಳ ನೋಟುಗಳನ್ನು ಅಮಾನ್ಯಗೊಳಿಸಿದರು. ಈ ಸಂದರ್ಭದಲ್ಲಿ ಸರ್ಕಾರ ಮತ್ತು ಆರ್ಬಿಐ ಹೊಸ 500 ಮತ್ತು 2,000 ರೂ ನೋಟುಗಳನ್ನು ಚಲಾವಣೆಗೆ ತಂದಿತ್ತು ಜೋತೆಗೆ 10, 20, 50, 100 ರ ಹೊಸ ನೋಟುಗಳನ್ನು ಬಿಡುಗಡೆ ಮಾಡಿತ್ತು.
ಹೀಗೆ ಕಾಲ ಕಾಲಕ್ಕೆ ದೇಶದ ನೋಟುಗಳು ಅಮಾನ್ಯವಾಗಿ ಬದಲಾಗುತ್ತಿದೆ. ಈ ಬದಲಾವಣೆಯ ಮೂಲ ಮಂತ್ರವನ್ನು ಹಾಕಿ ಕೊಟ್ಟವರು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್. ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಯಲ್ಲಿ ದೇಶವು ಆರ್ಥಿಕವಾಗಿ ಸುದೃಡಗೊಳ್ಳಲು ಮತ್ತು ಕಪ್ಪು ಹಣ, ಭ್ರಷ್ಟಾಚಾರವನ್ನು ನಿಗ್ರಯಿಸಲು ಪ್ರತಿ 10 ವರ್ಷಗಳಿಗೊಮ್ಮೆ ಬಾರತೀಯ ಕರೆನ್ಸಿಯನ್ನು ಬದಲಾಯಿಸಬೇಕು ಎಂದು ತಮ್ಮ ‘ಪ್ರಾಬ್ಲಮ್ಸ್ ಆಫ್ ಇಂಡಿಯಾನ್ ರೂಪಾಯಿ’ ಎಂಬ ಪುಸ್ತಕದಲ್ಲಿ ಶಿಫಾರಸು ಮಾಡಿದ್ದಾರೆ.
ಪ್ರಸತುತ ಆರ್ ಬಿ ಐ ಜನರಿಗೆ ನೀಡಿರುವ ಮಾರ್ಗದರ್ಶಿಯ ಪ್ರಕಾರ ಸಂದೇಹವೇ ಇಲ್ಲ ಇದು ಮಗೊದೊಮ್ಮೆ ಕಪ್ಪು ಹಣವನ್ನು ಹೊರತರುವ ಮತ್ತು ಭ್ರಷ್ಟರನ್ನು ಹಿಡಿಯುವ ಪ್ರಯತ್ನ ಎಂದು ಗೋಚರಿಸುತ್ತಿದೆ.