ಬಿಕ್ಕಳಿಕೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ ಬಿಕ್ಕಳಿಸುವಾಗ ನಮ್ಮ ಪಕ್ಕದಲ್ಲಿರುವವರು ನೀವು ಏನನ್ನಾದರೂ ಕದ್ದು ತಿಂದಿದ್ದೀರಾ ಎಂದು ಕೇಳುತ್ತಾರೆ. ಹೀಗೆ ಯಾಕೆ ಕೇಳುತ್ತಾರೆ ಎನ್ನುವ ಕುತೂಹಲ ನಿಮ್ಮಲ್ಲಿ ಇರಬಹುದು. ಹಾಗೆಯೇ ಬಿಕ್ಕಳಿಕೆ ಬರಲು ಕಾರಣ ಏನು ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು ಅದಕ್ಕೆ ಇಲ್ಲಿದೆ ಉತ್ತರ.
ಬಿಕ್ಕಳಿಕೆ ಬರಲು ಕಾರಣ:
* ಹೆಚ್ಚಾಗಿ ಅವಸರದಿಂದ ಆಹಾರ ಸೇವಿಸುವುದರಿಂದ ಬಿಕ್ಕಳಿಕೆ ಉಂಟಾಗುತ್ತದೆ.
* ಚ್ಯೂಯಿಂಗ್ ಗಮ್ ಸೇವಿಸುವಾಗ ಹೆಚ್ಚು ಗಾಳಿಯನ್ನು ಒಳಗೆ ತೆಗೆದುಕೊಳ್ಳುವುದರಿಂದಲೂ ಬಿಕ್ಕಳಿಕೆ ಬರುತ್ತದೆ.
* ಅತಿಯಾದ ಹುಳಿ ಖಾರ ಜಂಕ್ ಆಹಾರ ಪದಾರ್ಥಗಳ ಸೇವನೆಯಿಂದ ಬಿಕ್ಕಳಿಕೆ ಬರುತ್ತದೆ.
* ತಕ್ಷಣ ಆಗುವ ತಾಪಮಾನದ ಬದಲಾವಣೆಯಿಂದಲೂ ಬಿಕ್ಕಳಿಕೆ ಬರುತ್ತದೆ.
* ಹೊಗೆ ಸೇವನೆ, ಕಿಡ್ನಿ ಸಮಸ್ಯೆ, ಮೆದುಳಿನ ಸೋಂಕು ಇಂತಹ ಆರೋಗ್ಯ ಸಮಸ್ಯೆಗಳಿದ್ದಾಗಲೂ ದೀರ್ಘಾವಧಿಯ ಬಿಕ್ಕಳಿಕೆಗಳು ಬರುತ್ತದೆ.
ಬಿಕ್ಕಳಿಕೆಗೆ ಪರಿಹಾರ:
ಬಿಕ್ಕಳಿಕೆ ಬಂದಾಗ ಮೊದಲು ನೀರನ್ನು ಸೇವಿಸಬೇಕು ಎಂದು ಹೇಳುವುದು ವಾಡಿಕೆ. ಹೀಗೆ ನೀರನ್ನು ಸೇವಿಸಿದಾಗ ಬಿಕ್ಕಳಿಕೆ ನಿಯಂತ್ರಣಕ್ಕೆ ಬರುತ್ತದೆ. ಇನ್ನು ಬಿಕ್ಕಳಿಸುವಾಗ ನೀವು ಏನನ್ನಾದರೂ ಕದ್ದಿದ್ದೀರಾ ಎಂದು ಕೇಳುವಾಗ ನಮ್ಮ ಮೆದುಳಿಗೆ ಆಗುವ ಶಾಕ್ ನಿಂದ ಕೂಡ ಬಿಕ್ಕಳಿಕೆ ನಿಲ್ಲುತ್ತದೆ.
ಹಾಗೆಯೇ ಕೆಲವು ಸೆಕೆಂಡುಗಳ ಕಾಲ ಉಸಿರನ್ನು ಗಟ್ಟಿ ಹಿಡಿದಿಡುವುದು ಜೊತೆಗೆ ಎರಡು ಕಿವಿಗಳನ್ನು ಬೆರಳುಗಳಿಂದ ಮುಚ್ಚಿಕೊಳ್ಳುವುದರಿಂದ ಬಿಕ್ಕಳಿಕೆ ನಿವಾರಣೆಯಾಗುತ್ತದೆ.
ಬಿಕ್ಕಳಿಕೆ ಹೆಚ್ಚಾದರೆ ಮನೆಮದ್ದು ಮಾಡಬಹುದು:
ನೀರಿನಿಂದ ಗಾರ್ಗಲ್ ಮಾಡಬಹುದು, ಶುಂಠಿ ಚೂರನ್ನು ಆಗೆಬಹುದು, ನಿಂಬೆಹಣ್ಣನ್ನು ಕಚ್ಚಿ ತಿನ್ನಬಹುದು, ನೆಲ್ಲಿಕಾಯಿ ಪುಡಿಯನ್ನು ಜೇನುತುಪ್ಪದೊಂದಿಗೆ ತಿನ್ನಬಹುದು ಇವೆಲ್ಲ ಮನೆಮದ್ದುಗಳನ್ನು ಮಾಡುವುದರಿಂದ ಬಿಕ್ಕಳಿಕೆಯನ್ನು ನಿಯಂತ್ರಿಸಬಹುದು.