ಕಲರ್ಸ್ ಕನ್ನಡ ವಾಹಿನಿಯು ಮಧ್ಯಾಹ್ನದ ಮನೋರಂಜನೆಗಾಗಿ ಮೂರು ಹೊಸ ಧಾರವಾಹಿಗಳನ್ನು ಆರಂಭಿಸಿದ್ದು ಸೀರಿಯಲ್ ಪ್ರಿಯರ ಮಧ್ಯಾಹ್ನದ ನಿದ್ದೆ ಕದಿಯಲು ಯೋಜನೆ ರೂಪಿಸಿದಂತಿದೆ.
ಹೊಚ್ಚಹೊಸ ಧಾರವಾಹಿಗಳಾದ ಗೃಹಪ್ರವೇಶ ಮತ್ತು ಗಂಡ ಹೆಂಡತಿ ಕಿರುತೆರೆಯಲ್ಲಿ ಹೊಸ ಸಂಚಲವನ್ನ ಮೂಡಿಸಲು ಸಿದ್ಧವಾಗಿದೆ. ಹೊಸ ಕಥೆಯೊಂದಿಗೆ ಶಾಂತ ಪಾಪ ಹೊಸ ಸಂಚಿಕೆಗಳು ಪ್ರಾರಂಭವಾಗಿದೆ.
ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಮಧ್ಯಾಹ್ನ 2 ಗಂಟೆಗೆ ಈ ಮೂರು ಮನೋರಂಜನೆಗಳು ಬ್ಯಾಕ್ ಟು ಬ್ಯಾಕ್ ಪ್ರಸಾರವಾಗಲಿದೆ.
ಗೃಹಪ್ರವೇಶ ಧಾರವಾಹಿ ಅಪ್ಪನನ್ನು ಹುಡುಕಿಕೊಂಡು ಬರುವ ಮಗಳು ನೋವಿನ ಕಥೆಯಾಗಿದೆ. ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಮಧ್ಯಾಹ್ನ ಎರಡು ಗಂಟೆಗೆ ಪ್ರಸಾರವಾಗಲಿದೆ.
ಭಾವನೆಗಳಿಲ್ಲದೆ ಒಂದು ಹುಡುಗ ಹುಡುಗಿ ಮದುವೆಯಾಗಲು ಸಾಧ್ಯವೇ ಎಂಬ ವಿಶೇಷ ಕಥಾಹಂದರವನ್ನು ಹೊತ್ತು ತಂದಿರುವ ಧಾರವಾಹಿ ಗಂಡ ಹೆಂಡತಿ. ಇದು ಪ್ರತಿದಿನ ಮಧ್ಯಾಹ್ನ 2.30 ಗಂಟೆಗೆ ಪ್ರಸಾರವಾಗಲಿದೆ ಈ ಧಾರಾವಾಹಿಯನ್ನು ಸೂಪರ್ ಹಿಟ್ ಧಾರಾವಾಹಿ ನೀಡಿರುವ ರಾಮ್ ಜಿ ನಿರ್ದೇಶಿಸಿದ್ದಾರೆ.
ಸುತ್ತಲಿನ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡುವ ಶಾಂತಾಂ ಪಾಪಂ ಧಾರಾವಾಹಿ ಐದನೇ ಸೀಸನ್ ನಲ್ಲಿ ಹೊಸತುಗಳೊಂದಿಗೆ ಮೂಡಿ ಬರಲಿದೆ ಇದು ಸೋಮವಾರದಿಂದ ಶನಿವಾರದವರೆಗೆ ಮಧ್ಯಾಹ್ನ ಮೂರು ಗಂಟೆಗೆ ಪ್ರಸಾರವಾಗಲಿದೆ.
ಕಲರ್ಸ್ ಕನ್ನಡದ ಎಲ್ಲಾ ತಾರೆಯರು ಸೇರಿ ಮಧ್ಯಾಹ್ನದ ಕಾರ್ಯಕ್ರಮಕ್ಕೆ ಮಾಡಿರುವ ಪ್ರೊಮೋಗೆ ರಾಜ್ಯದೆಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಬಣ್ಣ ಬದಲಾಗಿದೆ ಬಂಧ ಬಿಗಿಯಾಗಿದೆ ಎಂಬ ಕಲರ್ಸ್ ಕನ್ನಡದ ಘೋಷವಾಕ್ಯಕ್ಕೆ ಪ್ರೊಮೋ ಮೆರಗನ್ನು ನೀಡಿದಂತಿದೆ.