ಅಂತಾರಾಷ್ಟ್ರೀಯ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ ಫ್ರಾನ್ಸ್ ನಲ್ಲಿ ನಡೆಯುತ್ತಿದ್ದು,ಬಾಲಿವುಡ್ ತಾರೆಯರು ಭಿನ್ನ ವಿಭಿನ್ನ ಉಡುಗೆ ತೊಟ್ಟು ಕ್ಯಾನೆಸ್ ಫಿಲ್ಮಂ ಫೆಸ್ಟಿವಲ್ ರೆಡ್ ಕಾರ್ಪೆಟ್ ನಲ್ಲಿ ಹೆಜ್ಜೆ ಹಾಕಿ ಮಿಂಚುತ್ತಿದ್ದಾರೆ. 10 ದಿನಗಳ ಕಾಲ ನಡೆಯುವ ಈ ಸಿನಿಮಾ ಹಬ್ಬದಲ್ಲಿ ಕನ್ನಡದ ನಟಿ ಇತಿ ಆಚಾರ್ಯ ಇದೇ ಮೊದಲ ಬಾರಿಗೆ ಹೆಜ್ಜೆ ಹಾಕಿದ್ದಾರೆ.
ಕಪ್ಪು ಬಣ್ಣದ ಗೌನ್ ತೊಟ್ಟು, ವಜ್ರದ ಆಭರಣ, ಹಮ್ಮಿಂಗ್ ಬರ್ಡ್ ಕಪ್ಪು ಕೈ ಕ್ಲಚ್ ಹಿಡಿದು ಕ್ಯಾನೆಸ್ನಲ್ಲಿ ಇತಿ ಆಚಾರ್ಯ ಮಿಂಚಿದ್ದಾರೆ.
ನಟಿ ಹಾಗೂ ಮಾಡೆಲ್ ಆಗಿ ಜನಪ್ರಿಯತೆ ಗಳಿಸಿರುವ ಇತಿ ಆಚಾರ್ಯ 2016ರ ಮಿಸ್ ಸೌತ್ ಇಂಡಿಯಾ ವಿನ್ನರ್. ಆರ್ ವಿ ಎಸ್ ಪಿ ಪ್ರೊಡಕ್ಷನ್ ಹೌಸ್ ಮೂಲಕ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ.
ವಿಮ್ ವೆಂಡರ್ಸ್ ನಿರ್ದೇಶಿಸಿದ ಅನ್ಸೆಲ್ಮ್ ಸಿನಿಮಾದಿಂದಾಗಿ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸುವ ಅವಕಾಶ ಇತಿ ಆಚಾರ್ಯಗೆ ದೊರಕಿತ್ತು.
ಕನ್ನಡ, ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳಲ್ಲೂ ಇತಿ ಆಚಾರ್ಯ ನಟಿಸಿದ್ದಾರೆ. ಇನ್ನೂ ಅಮೇರಿಕಾದ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಮೆರ್ಲಿನ್ ಬಾಬಾಜಿ ಸಾಂಗ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿಇತಿ ಆಚಾರ್ಯ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.
ಇಲ್ಲಿಯವರೆಗೆ ಬಾಲಿವುಡ್ ನಟಿಯರಾದ ಐಶ್ವರ್ಯ ರೈ, ಅನುಷ್ಕಾ, ಶರ್ಮಾ, ಸಾರಾ ಅಲಿಖಾನ್, ಮಾನುಷಿ ಚಿಲ್ಲರ್ ಸೇರಿದಂತೆ ಹಲವಾರು ನಟ ನಟಿಯರು ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದಾರೆ.