ಈಗಾಗಲೇ ತಿಳಿದಿರುವಂತೆ ಆರ್ ಬಿಐ 2೦೦೦ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದೆ. ಅಂದರೆ ಬ್ಯಾಂಕ್ ಎಟಿಎಂಗಳಲ್ಲಿ ಇನ್ನು ಮುಂದೆ ಎರಡು ಸಾವಿರ ರೂಪಾಯಿ ನೋಟುಗಳು ಲಭ್ಯವಾಗುದಿಲ್ಲ ಮತ್ತು ಇದು ಈ ಹಿಂದೆ 2017ರಲ್ಲಿ ನಡೆದ ನೋಟು ಅಮಾನ್ಯೀಕರಣ ಪ್ರಕ್ರಿಯೆಯಲ್ಲ ಕಾರಣ ಈ ಹಿಂದೆಯೇ ಇದರ ಬಗ್ಗೆ ಸಣ್ಣ ಸುಳಿವನ್ನು ಬಿಜೆಪಿಯ ರಾಜ್ಯ ಸಭಾ ಸದಸ್ಯರಾದ ಸುಶೀಲ ಮೋದಿಯವರು ರಾಜ್ಯ ಸಭೆಯಲ್ಲಿ ಇದರ ಬಗ್ಗೆ ಪ್ರಸ್ತಾಪಿಸಿದ್ದರು.
2016 ರ ನೋಟು ಅಮಾನ್ಯೀಕರಣದಿಂದ 500 ಮತ್ತು 1೦೦೦ ರೂಪಾಯಿ ಮುಖಬೆಲೆಯ ನೋಟುಗಳು ರದ್ದಾಗಿದ್ದವು ಅದನ್ನು ಸರಿದೂಗಿಸಲು ಚಲಾವಣೆಗೆ ಬಂದಿದ್ದ ಈ 2೦೦೦ ರೂಪಾಯಿ ನೋಟುಗಳನ್ನು 2018- 19 ರಲ್ಲೇ ಅದರ ಮುದ್ರಣವನ್ನು ಆರ್ ಬಿಐ ನಿಲ್ಲಿಸಿದೆ. ಇದರಿಂದ ಸರ್ಕಾರದ ಮುದ್ರಣದ ವೆಚ್ಚವೂ ಕಡಿಮೆಯಾಗಿದೆ.
ಆರ್ ಬಿಐ ತನ್ನ ಸೂಚನೆಯಲ್ಲಿ ತಿಳಿಸಿದಂತೆ 2018ರ ಮಾರ್ಚ್ ವರೆಗೆ 37.5% ದಷ್ಟು 2000 ನೋಟು ಚಾಲ್ತಿಯಲ್ಲಿದ್ದರೆ ಅದರ ನಂತರದಲ್ಲಿ ಕೇವಲ 10.8% ಮಾತ್ರ ಚಲಾವಣೆಯಲ್ಲಿದ್ದವು ಅಂದರೆ 9೦%ರಷ್ಟು ಕಮ್ಮಿ ಬಳಕೆಗೊಂಡಿದೆ.
ಆರ್ ಬಿಐ ಇದಕ್ಕೆ clean Note policy ಎಂದು ಹೆಸರಿಸಿದೆ.