ಬೆಂಗಳೂರಿನಲ್ಲಿ ತುಂಬಾ ಸೆಕೆ. ಜನರು ಬೇಸಿಗೆ ಶಾಖವನ್ನು ಕಡಿಮೆ ಮಾಡಲು ತಣ್ಣನೆಯ ನೀರು, ಜ್ಯೂಸ್ ಹೀಗೆ ಹಲವು ಉಪಾಯಗಳ ಮೊರೆ
ಹೋಗುತ್ತಿದ್ದಾರೆ.ಬೆಂಗಳೂರಿನಲ್ಲಿ ಮೇ 17ರಂದು 35 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದು ರಾಜ್ಯ ರಾಜಧಾನಿಯಲ್ಲಿ ಬರೋಬ್ಬರಿ 5 ವರ್ಷಗಳ ದಾಖಲೆಯನ್ನೇ ಮೀರಿಸಿದೆ.
ಬೆಂಗಳೂರಿನಲ್ಲಿ ಪ್ರತಿದಿನ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ. ಮೇ ತಿಂಗಳ ಸರಾಸರಿ ತಾಪಮಾನವು ಸಾಮಾನ್ಯವಾಗಿ 33.1 ಡಿಗ್ರಿ ಸೆಲ್ಸಿಯಸ್ ಆಗಿದೆ.ಮಂಗಳವಾರದ ತಾಪಮಾನವು 2018 ರಿಂದ ಇಚೆಗಿನ ದಾಖಲೆಯ ಹೆಚ್ಚಿನ ತಾಪಮಾನವಾಗಿದೆ. ಈ ಮೂಲಕ ಬರೋಬ್ಬರಿ 5 ವರ್ಷಗಳಲ್ಲಿ ಅತೀ ಹೆಚ್ಚಿನ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಭಾರತೀಯ ಹವಾಮಾನ ಇಲಾಖೆಯು 1990 ರಿಂದ 2020 ರವರೆಗಿನ ಅಂಕಿ ಅಂಶಗಳ ಆಧಾರದ ಮೇಲೆ ಮೇ ತಿಂಗಳ ಸರಾಸರಿ ತಾಪಮಾನ 33.1 ಡಿಗ್ರಿ ಸೆಲ್ಸಿಯಸ್ ಎಂದು ಅಂದಾಜಿಸಿದೆ. ಆದರೆ ಈ ವಾರದ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನವು 33 ಮತ್ತು 35 ಡಿಗ್ರಿಗಳಷ್ಟಿತ್ತು.
ಭಾರತೀಯ ಹವಾಮಾನ ಇಲಾಖೆಯು 1990 ರಿಂದ 2020 ರವರೆಗಿನ ಅಂಕಿ ಅಂಶಗಳ ಆಧಾರದ ಮೇಲೆ ಮೇ ತಿಂಗಳ ಸರಾಸರಿ ತಾಪಮಾನ 33.1 ಡಿಗ್ರಿ ಸೆಲ್ಸಿಯಸ್ ಎಂದು ಅಂದಾಜು ಮಾಡಲಾಗಿದೆ. ಆದರೆ ಈ ವಾರದ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನವು 33 ಮತ್ತು 35 ಡಿಗ್ರಿಗಳ ನಡುವೆ ಇದೆ. ಇದಕ್ಕೆ ಮರಗಳಿಲ್ಲದೆ ಕಟ್ಟಡಗಳ ಸಂಖ್ಯೆ ಮೇಲುಗೈ ಆಗಿರುವುದೇ ಕಾರಣವಾಗಿದೆ.