ಅರ್ಧ ಚಂದ್ರಾಕೃತಿಯ ದರ್ಶನವನ್ನು ಮಾಡುವ ಮೂಲಕ ಇಡೀ ಪ್ರಪಂಚದಲ್ಲಿ ರಂಜಾನ್ ಪ್ರಾರಂಭವಾಗಿದ್ದು, ಪ್ರತಿಯೊಬ್ಬರು ತಿಂಗಳುಗಳ ಕಾಲ ಪ್ರಾರ್ಥನೆ ಹಾಗೂ ಸಂಪ್ರದಾಯವನ್ನು ಪ್ರಾರಂಭಿಸಿದ್ದಾರೆ. ಇನ್ನು ಈ ರಂಜಾನ್ ಮಧುಮೇಹ (ಡಯಾಬಿಟೀಸ್) ಇರುವವರಿಗೆ ಭಾರಿ ಚಾಲೆಂಜಿಂಗ್ ಸಮಯ ಆಗಿದೆ. ಧಾರ್ಮಿಕ ಅಡಚಣೆಗಳ ಜೊತೆಗೆ ಆರೋಗ್ಯವನ್ನು ಕಾಯ್ದುಕೊಳ್ಳುವುದು ನಿಜವಾಗಿಯೂ ಚಿಂತೆ ಮಾಡಬೇಕಾದ ವಿಚಾರವೇ ಆಗಿದೆ. ಹಾಗಾಗಿ ಇಸ್ಲಾಮಿಕ್ ಕ್ಯಾಲೆಂಡರ್ ನ ಈ ಪವಿತ್ರವಾದ ತಿಂಗಳಿನಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯವಾಗಿರುವಂತಹ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು.
ಬೆಳಗಿನ ಮುಂಜಾನೆ ಸಮಯದಿಂದ ಪ್ರಾರಂಭಿಸಿ ಸಂಜೆವರೆಗೆ ಉಪವಾಸ ಮಾಡುವುದು ರಂಜಾನ್ ನ ಮೂಲಭೂತ ಕ್ರಮವಾಗಿದೆ. ಆದರೆ ಮಧುಮೇಹದಿಂದ ಬಳಲುತ್ತಿರುವಂತಹ ವ್ಯಕ್ತಿಗಳಿಗೆ ಇದು ಆರೋಗ್ಯದಲ್ಲಿ ಏರುಪೇರು ಉಂಟಾಗುವಂತಹ ಸಾಧ್ಯತೆಯನ್ನು ಉಂಟು ಮಾಡಬಹುದಾಗಿದೆ. ದೇಹದಲ್ಲಿ ಎನರ್ಜಿಯ ಮಟ್ಟವನ್ನು ಉಳಿಸಿಕೊಳ್ಳಲು ಮುಂಜಾನೆಯ ಸಂದರ್ಭದಲ್ಲಿ ಮಾಡುವಂತಹ ಆಹಾರ ಸೇವನೆ ಹಾಗೂ ಸಂಜೆಯ ಸಂದರ್ಭದಲ್ಲಿ ಮಾಡುವ ಊಟ ಕೂಡ ಒಳಗೊಂಡಿರುತ್ತದೆ. ಹಾಗಿದ್ದರೂ ಕೂಡ ಡಯಾಬಿಟಿಸ್ ನಿಂದ ಬಳಲುತ್ತಿರುವವರಿಗೆ ಮಧುಮೇಹದಲ್ಲಿ ಸಡನ್ನಾಗಿ ಉಂಟಾಗುವ ಏರಿಕೆ ಹಾಗೂ ಇಳಿಕೆಯಿಂದ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಅದರ ಜೊತೆಗೆ ಡಯಾಬಿಟಿಸ್
ಹೊಂದಿರುವಂತಹ ವ್ಯಕ್ತಿಗಳಿಗೆ ಸಮತೋಲಿತವಾಗಿರುವಂತಹ ನ್ಯೂಟ್ರಿಷನ್ ಪ್ಲಾನ್ ಜೊತೆಗೆ ಅದನ್ನು ಸರಿಯಾದ ರೀತಿಯಲ್ಲಿ ಮಾನಿಟರ್ ಮಾಡಬೇಕಾಗಿರುವುದು ಕೂಡ ಅತ್ಯಗತ್ಯ ವಾಗಿರುತ್ತದೆ. ರಿಯಲ್ ಟೈಮ್ ಬ್ಲಡ್ ಗ್ಲುಕೋಸ್ ರೀಡಿಂಗ್ ಅನ್ನು ಲೆಕ್ಕಾಚಾರ ಹಾಕುವಂತಹ ಡಿವೈಸ್ ಆಗಿರುವ ಕಂಟಿನ್ಯುಯಸ್ ಗ್ಲೂಕೋಸ್ ಮಾನಿಟರಿಂಗ್ (ಸಿಜಿಎಂ) ಮೂಲಕ ಗ್ಲೂಕೋಸ್ ಅನ್ನು ಮಾನಿಟರ್ ಮಾಡಬೇಕು. ಸರಿಯಾದ ಸಮತೋಲಿತ ಆಹಾರ ಹಾಗೂ ಅದನ್ನು ಸರಿಯಾಗಿ ಮಾನಿಟರ್ ಮಾಡೋದು ಇತ್ಯಾದಿ ಕಾರ್ಯಗಳನ್ನು ಉಪವಾಸದ ಸಂದರ್ಭದಲ್ಲಿ ಡಯಾಬಿಟಿಸ್ ಇರುವಂತಹ ವ್ಯಕ್ತಿಗಳು ಅಗತ್ಯವಾಗಿ ಮಾಡಬೇಕಾಗಿರುತ್ತದೆ. ಈ ರೀತಿ ಮಾಡುವ ಮೂಲಕ ಈ ಪವಿತ್ರ ರಂಜಾನ್
ತಿಂಗಳಲ್ಲಿ ಡಯಾಬಿಟಿಸ್ ನಿಂದ ಬಳಲುತ್ತಿರುವ ವ್ಯಕ್ತಿಯನ್ನು ಉತ್ತಮ ರೀತಿಯಲ್ಲಿ, ಪರಿಣಾಮಕಾರಿಯಾಗಿ ನೀವು ನೋಡಿಕೊಳ್ಳಬಹುದಾಗಿದೆ.
ಈ ಕುರಿತು ಮಾತನಾಡುವ ಬೆಂಗಳೂರು ವೈಟ್ ಫೀಲ್ಡಿನ ಮಣಿಪಾಲ್ ಹಾಸ್ಪಿಟಲ್ಸ್ ನ ಎಂಡೋಕ್ರೈನಾಲಜಿ ವಿಭಾಗದ ಎಂಡಿ, ಡಿಎಂ ಡಾ. ಅನುಷಾ ಹಂಡ್ರಾಲ್, "ಇತ್ತೀಚಿಗೆ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಭಾರತ ದೇಶದಲ್ಲಿ 101 ಮಿಲಿಯನ್ ಗಿಂತಲೂ ಅಧಿಕ ಭಾರತೀಯರು ಸಮಗ್ರ ನಿರ್ವಹಣೆಯನ್ನು ನಿರ್ಲಕ್ಷಿಸಿ ಡಯಾಬಿಟಿಸ್ ನೊಂದಿಗೆ ಜೀವಿಸುತ್ತಿದ್ದಾರೆ. ಪವಿತ್ರ ರಂಜಾನ್ ತಿಂಗಳನ್ನು ಗಮನದಲ್ಲಿರಿಸಿಕೊಂಡು ನೋಡೋದಾದ್ರೆ ಸಿಜಿಎಂ(ಕಂಟಿನ್ಯೂಯಸ್
ಗ್ಲೂಯೋಸ್ ಮಾನಿಟರಿಂಗ್) ಡಯಾಬಿಟಿಸ್ ಇರುವವರಿಗೆ ಮಿತ್ರನ ರೀತಿಯ ಕೆಲಸ ಮಾಡುತ್ತದೆ. ಸಿಜಿಎಂ ನಿಮಗೆ ರಂಜಾನ್ ತಿಂಗಳಲ್ಲಿ ಊಟಕ್ಕಿಂತ ಮೊದಲು ಹಾಗು ಊಟದ ನಂತರ ಬ್ಲಡ್ ನಲ್ಲಿರುವಂತಹ ಶುಗರ್ ಲೆವೆಲ್ ಏರಿಕೆ ಹಾಗೂ ಇಳಿಕೆ ಆಗೋದನ್ನ ರಿಯಲ್ ಟೈಮ್ ನಲ್ಲಿ ನೋಡೋದಕ್ಕೆ ಸಹಾಯಕವಾಗಿರುತ್ತದೆ. ಸಿಜಿಎಂ ನಿಂದ ಸಿಗುವಂತಹ ಮಾಹಿತಿಗಳ ಮೂಲಕ ನೀವು ನಿಮ್ಮ ಡಯಟ್ ಪ್ಲಾನ್ ಮಾಡಬಹುದಾಗಿದೆ. ಆ ಮೂಲಕ ನೀವು ಎಷ್ಟು ಪ್ರಮಾಣದಲ್ಲಿ ಆಹಾರವನ್ನು ಸೇವಿಸಬೇಕು ಹಾಗೂ ಯಾವ ಸಮಯ ಮತ್ತು ಡಯಾಬಿಟಿಸ್ ಗಾಗಿ ಪ್ರತ್ಯೇಕವಾಗಿ ಬೇಗ ಅಗತ್ಯವಿರುವಂತಹ ನ್ಯೂಟ್ರಿಷನ್ ತೆಗೆದುಕೊಳ್ಳಬೇಕು ಎಂಬುನ್ನು ನಿರ್ಧರಿಸಲು ಕೂಡ ಸಹಾಯಕವಾಗುತ್ತದೆ. ಸಿಜಿಎಂ
ಡೇಟಾ ಹಾಗೂ ನಿಮ್ಮ ಡಯಟ್ ಪ್ಲಾನ್ ನಡುವೆ ಇರುವ ಸಾಂಕೇತಿಕ ಸಂಬಂಧ ನಿಮ್ಮ ರಕ್ತದಲ್ಲಿರುವ ಗ್ಲುಕೋಸ್ ಮ್ಯಾನೇಜ್ಮೆಂಟ್ ಅನ್ನು ಬಲಗೊಳಿಸುವುದಕ್ಕೆ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ” ಎಂದು ಹೇಳಿದರು.
ಈ ವರ್ಷ ನೀವು ರಂಜಾನ್ ಉಪವಾಸ ಮಾಡುವಾಗ ನಿಮ್ಮ ಡಯಾಬಿಟಿಸ್ ಅನ್ನು ನಿರ್ವಹಣೆ ಮಾಡಲು ಇಲ್ಲಿದೆ ನೋಡಿ ಟಿಪ್ಸ್.
1. ನಿಯಮಿತವಾಗಿ ಬ್ಲಡ್ ಶುಗರ್ ಲೆವೆಲ್ ಅನ್ನು ಮಾನಿಟರ್ ಮಾಡಿ: ನಿಯಮಿತವಾಗಿ ನಿಮ್ಮ ಬ್ಲಡ್ ಶುಗರ್ ಲೆವೆಲ್ ಅನ್ನು ಚೆಕ್ ಮಾಡುವುದು ಅತ್ಯಂತ ಪ್ರಮುಖವಾಗಿದೆ. ಕೆಲವೊಂದು ನಿರ್ದಿಷ್ಟ ಸಮಯದಲ್ಲಿ ಬ್ಲಡ್ ಶುಗರ್ ಲೆವೆಲ್ ಅನ್ನು ಚೆಕ್ ಮಾಡುವುದಕ್ಕಿಂತ, ಕಂಟಿನ್ಯೂಯಸ್ ಗ್ಲೂಕೋಸ್ ಮಾನಿಟರಿಂಗ್ ಮೂಲಕ ರಿಯಲ್ ಟೈಮ್ ಗ್ಲುಕೋಸ್ ಮಾನಿಟರಿಂಗ್ ಮಾಡಬಹುದಾಗಿದೆ. ಇದರ ಡೇಟಾವನ್ನು ನೀವು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಪಡೆದುಕೊಳ್ಳಬಹುದಾಗಿದ್ದು, ಈ ಮೂಲಕ ನೀವು ಸುಲಭವಾಗಿ ಆಹಾರ, ದೈಹಿಕ ಚಟುವಟಿಕೆಗಳು ಹಾಗೂ ಥೆರಪಿಯ ವಿಚಾರದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬಹುದಾಗಿದೆ. ಈ ಡಿವೈಸ್ ಮೂಲಕ ಪಡೆದುಕೊಂಡಿರುವ ಡೇಟಾ ಮಾಹಿತಿಯ ಮುಖಾಂತರ ನೀವು ಈ ರಂಜಾನ್ ತಿಂಗಳಿನಲ್ಲಿ ಸರಿಯಾದ ರೀತಿಯ ಆಹಾರದ ಪ್ಲಾನಿಂಗ್ ಮಾಡಬಹುದಾಗಿದ್ದು, ಇದರಿಂದಾಗಿ ನಿಮ್ಮ ಆರೋಗ್ಯವನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳಬಹುದಾಗಿದೆ ಮತ್ತು ಕಾಳಜಿ ವಹಿಸಿಕೊಳ್ಳಬಹುದಾಗಿದೆ.
2. ಇಫ್ತಾರ್ ಸಂದರ್ಭದಲ್ಲಿ ಸರಿಯಾದ ಪೋಷಕಾಂಶಗಳ ಮೂಲಕ ದೇಹವನ್ನು ರಿಚಾರ್ಜ್ ಮಾಡಿಕೊಳ್ಳುವುದು: ಆಚರಣೆಗಳ ಪ್ರಕಾರ ಉಪವಾಸ ಮುರಿಯೋದು ಕರ್ಜೂರ ಹಾಗೂ ಹಣ್ಣುಗಳನ್ನು ತಿನ್ನುವುದರ ಮೂಲಕ. ಅದರ ಬಳಿಕ ವ್ಯಕ್ತಿಗಳು ಸರಿಯಾದ ಪೂರ್ತಿ ಊಟ ವನ್ನು ಮಾಡಬಹುದಾಗಿದೆ. ಈ ಸಂದರ್ಭದಲ್ಲಿ ನೀವು ಸರಿಯಾದ ಪ್ರಮಾಣದಲ್ಲಿ ನೀರನ್ನು ಸೇವಿಸಿ ಹಾಗೂ ಕೆಫಿನ್ ಅಂಶ ಹೆಚ್ಚಾಗಿರುವ ಕಾಫಿ, ಟೀ ಹಾಗೂ ಸಾಫ್ಟ್ ಡ್ರಿಂಕ್ ಗಳನ್ನು ದೂರ ಇಡಿ. ದೇಹಕ್ಕೆ ಕಾರ್ಬೋಹೈಡ್ರೇಟ್, ಪ್ರೋಟೀನ್ ಹಾಗೂ ಫ್ಯಾಟ್ ಸಮಪ್ರಮಾಣದಲ್ಲಿ ಸಿಗುವಂತಹ ಆಹಾರವನ್ನು ನೀವುಸೇವಿಸಬೇಕು. ಉತ್ತಮ ಪೋಷಕಾಂಶಗಳು ಹಾಗೂ ಫೈಬರ್ ನಿಂದ ತುಂಬಿರುವಂತಹ ಓಟ್ಸ್, ಬಹುಧಾನ್ಯಗಳ ಬ್ರೆಡ್, ತರಕಾರಿಗಳು, ದಾಲ್, ಮೀನು ಹಾಗೂ ಬೇಳೆ ಕಾಳುಗಳನ್ನು ಸೇವಿಸಬೇಕು. ಇದರ ಜೊತೆಗೆ ಡಯಾಬಿಟಿಸ್ ಗಾಗಿ ಪ್ರತ್ಯೇಕವಾಗಿ ನಿಗದಿಪಡಿಸಿರುವ ಎನ್ಶುರ್ ಡಯಾಬಿಟಿಸ್ ಕೇರ್ ನಂತಹ ಪೌಷ್ಠಿಕಾಂಶಯುಕ್ತ ಆಹಾರ ಉತ್ಪನ್ನವನ್ನು ನೀವು ಸಂಜೆಯ ಇಫ್ತಾರ್ ಸಂದರ್ಭದಲ್ಲಿ ಉಪವಾಸ ಮುರಿಯುವಾಗ ಸೇವಿಸಬಹುದಾಗಿದೆ. (ಅಥವಾ ಬೆಳಗಿನ ಸೆಹ್ರಿ ಸಂದರ್ಭದಲ್ಲಿಯೂ ಸೇವಿಸಬಹುದು) ವೈಜ್ಞಾನಿಕವಾಗಿ ಹೆಚ್ಚಿನ ಪ್ರೋಟೀನ್, ಮಹತ್ವದ ನ್ಯೂಟ್ರಿಷನ್ ಹೊಂದಿರುವಂತಹ ಈ ಆಹಾರವನ್ನು ಸೇವಿಸುವುದರಿಂದ ಎನರ್ಜಿ ಸಿಸ್ಟಮ್ ನಿಮ್ಮ ದೇಹದಲ್ಲಿ ಬ್ಲಡ್ ಗ್ಲುಕೋಸ್, ಹಸಿವು ಹಾಗೂ ನಿಮ್ಮ ಎನರ್ಜಿ ಲೆವೆಲ್ ಅನ್ನು ನಿರ್ವಹಣೆ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಈ ಕಾರಣಕ್ಕಾಗಿ ನಿಮ್ಮ ವೈದ್ಯರ ಬಳಿ ಈ ಸಮಯದಲ್ಲಿ ಬೇಕಾಗಿರುವ ಸರಿಯಾದ ನ್ಯೂಟ್ರಿಷನ್ ಗಳ ಸಲಹೆ ಪಡೆಯಿರಿ.
3. ನಿಮ್ಮ ದೇಹವನ್ನು ಚಲನೆಯಲ್ಲಿ ಇರಿಸಿ: ದೇಹವನ್ನು ಸಕ್ರಿಯವಾಗಿ ಇರಿಸುವುದು ಕೂಡ ಡಯಾಬಿಟಿಸ್ ನ್ಯೂಟ್ರಿಷನ್ ನಲ್ಲಿ ಅತ್ಯಂತ ಪ್ರಮುಖ ಎಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಆರೋಗ್ಯವನ್ನು ಸ್ವಾಸ್ಥ್ಯದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಉಪವಾಸದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಆಹಾರ ಸೇವನೆಯ ಜೊತೆಗೆ ದೈಹಿಕ ಕಸರತ್ತುಗಳನ್ನು ಮಾಡುವ ಮೂಲಕ ಫಿಟ್ ಆಗಿರೋದು ಕೂಡ ಡಯಾಬಿಟಿಸ್ ಮ್ಯಾನೇಜ್ ಮಾಡುವುದಕ್ಕೆಸಹಾಯಕಾರಿಯಾಗಿದೆ. ವಿಶೇಷವಾಗಿ ಉಪವಾಸ ಮುರಿಯಲು ಕೊನೆಯ ಕೆಲವು ಕ್ಷಣಗಳು ಇರುವ ಸಂದರ್ಭದಲ್ಲಿ ಅತಿಯಾದ ವ್ಯಾಯಾಮ ಮಾಡುವುದು ಸರಿಯಲ್ಲ. ವಾಕಿಂಗ್ ಹಾಗೂ ಯೋಗ ಸೇರಿದಂತೆ ಬೇಸಿಕ್ ದೈಹಿಕ ಕಸರತ್ತುಗಳನ್ನು ನೀವು 30 ನಿಮಿಷಗಳ ವರೆಗೆ ಮಾಡಿದ್ರೆ ಪರಿಣಾಮಕಾರಿಯಾಗಿರುತ್ತದೆ.
4. ನಿಮ್ಮ ನಿದ್ರೆಯ ಕ್ರಮವನ್ನು ಸರಿಯಾಗಿಸಿಕೊಳ್ಳಿ: ರಂಜಾನ್ ನಲ್ಲಿ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರ ಜೊತೆಗೆ ತಡರಾತ್ರಿವರೆಗೂ ಕೂಡ ಎದ್ದಿರಬೇಕಾದಂತಹ ಸ್ಥಿತಿ ಒದಗಿಬರಬಹುದು. ಹೀಗಿದ್ರೂ ಈ ಸಂದರ್ಭದಲ್ಲಿ ದೇಹಕ್ಕೆ ಬೇಕಾಗಿರುವ ಒಳ್ಳೆಯ ನಿದ್ರೆಯನ್ನು ಪಡೆಯುವುದು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಸಹಾಯಕವಾಗುತ್ತದೆ. ಸರಿಯಾದ ನಿದ್ದೆ ಸಿಗದೆ ಹೋದಲ್ಲಿ ಇದು ನಕಾರಾತ್ಮಕವಾಗಿ ನಿಮ್ಮ ಆರೋಗ್ಯದ ಮೇಲೆ ಹಾಗೂ ಹಸಿವಿನ ಲೆವೆಲ್ ಮೇಲೆ ಪರಿಣಾಮ ಬೀರುತ್ತದೆ. ಇನ್ನು ನಿದ್ದೆ ನಮ್ಮ ರೋಗನಿರೋಧಕ ಶಕ್ತಿ ಹಾಗೂ ಬ್ಲಡ್ ಗ್ಲುಕೋಸ್ ಲೆವೆಲ್ ಅನ್ನು ನಿರ್ವಹಣೆ ಮಾಡುವುದಕ್ಕೆ ಪ್ರಮುಖ ಪರಿಣಾಮ ಬೀರುತ್ತದೆ ಹಾಗೂ ಇವುಗಳು ನೇರವಾಗಿ ಡಯಾಬಿಟಿಸ್ ಜೊತೆಗೆ ಸಂಬಂಧವನ್ನು ಹೊಂದಿರುತ್ತವೆ.
ಯಾವುದೇ ಸವಾಲುಗಳು ಇದ್ದರೂ ಕೂಡ ಸರಿಯಾದ ದೃಢವಾದ ಕಾರ್ಯ ಯೋಜನೆ ಇದ್ರೆ ಅದನ್ನು ಮ್ಯಾನೇಜ್ ಮಾಡೋದು ಕಷ್ಟ ಆಗಿರುವುದಿಲ್ಲ. ಈ ನಾಲ್ಕು ಪ್ರಕ್ರಿಯೆಗಳು ನಿಮಗೆ ಗಂಟೆಗಟ್ಟಲೆ ಉಪವಾಸ ಇದ್ದರೂ ಕೂಡ ನಿಮ್ಮ
ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಸಹಾಯ ಮಾಡುತ್ತವೆ.