ಭಾರತದಂತಹ ದೇಶದಲ್ಲಿ ಚಹಾ ಹೆಸರನ್ನು ಕೇಳಲಾರದವರು ಯಾರಾದರು ಇದ್ದಾರೆಯೇ? ಸಾಧ್ಯವೇ ಇಲ್ಲ. ದಿನ ಬೆಳಗಾದರೆ ಚಹಾ ಕುಡಿದೆ ದಿನವನ್ನು ಪ್ರಾರಂಭಿಸುವ ಕೊಟ್ಯಾಂತರ ಜನ ಭಾರತದಲ್ಲಿದ್ದಾರೆ.
ಮತ್ತೊಂದು ಆಶ್ಚರ್ಯದ ಸಂಗತಿಯೆಂದರೆ ನೀರಿನ ನಂತರ ಅಧಿಕವಾಗಿ ಬಳಿಸುವ ಪೇಯವೆಂದರೆ ಅದು ಚಹಾ.
ಕೆಮಿಲಿಯಾ ಸಿನೆನ್ಸಿಸ್ (Camellia sinensis) ಎನ್ನುವ ನಿತ್ಯ ಹರಿದ್ವರ್ಣ ಗಿಡವೇ ಚಹಾ ಗಿಡ.
ಭಾರತದಲ್ಲಿ ಚಹಾದ ಇತಿಹಾಸ
ಕಾಫಿಯಂತೆ ಚಹಾ ಕೂಡಾ ತನ್ನ ಹುಟ್ಟಿನ ಬಗ್ಗೆ ಸಾಕಷ್ಟು ಗೊಂದಲವನ್ನ ಹೊಂದಿದೆ ಮತ್ತು ಸುಮಾರು ಆರು ಸಾವಿರ ವರ್ಷಗಳಷ್ಟು ಹಿಂದಕ್ಕೆ ನಮ್ಮನ್ನ ಎಳೆದೊಯ್ಯುತ್ತದೆ. ಅಲ್ಲಿ ನಮಗೆ ಸಾಕಷ್ಟು ದಂತ ಕತೆಗಳು ಮತ್ತು ಇತಿಹಾಸಕಾರರ ದಾಖಲೆಗಳು ಸಿಗುತ್ತವೆ.
ದಂತ ಕತೆಗಳ ಪ್ರಕಾರ,
ಶೆನ್ನಾಂಗ್ ಎನ್ನುವವನು ಚೈನಾದ ಪುರಾಣ ಕಾಲದ ರಾಜ. ಅವನೊಬ್ಬ ಕೃಷಿ ಸಂಶೋಧಕ ಮತ್ತು ವೈದ್ಯ ಕೂಡಾ. ಕ್ರಿ.ಪೂ 2700 ರಲ್ಲಿ ಮನೆಯ ಹೊರಭಾಗದಲ್ಲಿ ಕುಡಿಯುವ ನೀರನ್ನ ಕುದಿಸುತ್ತಿದ್ದಾಗ ಅದರಲ್ಲಿ ಎರಡು ಎಲೆಗಳು ಬಿದ್ದವು. ಕುದಿಯತ್ತಿದ್ದ ನೀರಿನ ಬಣ್ಣ ಕಂದು ಬಣ್ಣಕ್ಕೆ ತಿರುಗತೊಡಗಿತು.ಕುತೂಹಲದಿಂದ ಆ ನೀರನ್ನ ಸ್ವಲ್ಪ ಕುಡಿಯುತ್ತಾನೆ. ಅದರಿಂದ ಅವನಲ್ಲಿ ಚೈತನ್ಯ ಹೆಚ್ಚುತ್ತದೆ. ಇದನ್ನ ಅಭಿವೃದ್ಧಿ ಪಡಿಸುತ್ತಾನೆ.
ಇತಿಹಾಸಕಾರರ ಪ್ರಕಾರ,
ಎರಡೂವರೆ ಸಾವಿರ ವರ್ಷಗಳ ಹಿಂದೆ ಹುಟ್ಟಿದ ಅವತಾರ ಪುರುಷ ಗೌತಮ ಬುದ್ಧ ಮೊಟ್ಟ ಮೊದಲ ಬಾರಿ ಚಹಾ ಸೇವಿಸಿದನೆಂಬ ಒಂದು ಉಲ್ಲೇಖ ಇದೆ.
ಆದರೆ ಇತಿಹಾಸದ ಉಲ್ಲೇಖದ ಪ್ರಕಾರ ಹದಿನೆಂಟನೇ ಶತಮಾನದಲ್ಲಿ ಚೈನಾದ ಚಹಾ ಬೆಳೆಯ ಪ್ರಾಬಲ್ಯವನ್ನ ಮೆಟ್ಟಿ ನಿಲ್ಲಲು ಈಸ್ಟ್ ಇಂಡಿಯಾ ಕಂಪನಿಯು ಭಾರತದ ಆಸ್ಸಾಂ ಕಣಿವೆಗಳಲ್ಲಿ ಚಹಾದ ಕೃಷಿಯನ್ನ ವಾಣಿಜ್ಯದ ದೃಷ್ಟಿಯಿಂದ ಆರಂಭಿಸಿದರು. ಅಂದು ಅಧಿಕೃತವಾಗಿ ಚಹಾ ಭಾರತ ಪ್ರವೇಶ ಮಾಡಿತು.
ಭಾರತದವು ಟೀ ಉತ್ಪಾದನೆಯಲ್ಲಿ ಚೈನಾದ ನಂತರದ ಸ್ಥಾನದಲ್ಲಿದೆ.
ನಾವು ಬೆಳೆಯುವ ಚಹಾದ ಉತ್ಪಾದನೆಯ ಮುಕ್ಕಾಲು ಭಾಗ ನಮ್ಮ ದಾಹವನ್ನ ತಣಿಸುವುದಕ್ಕೇ ಬೇಕು.
ಇಂದು ನಾವು ಕುಡಿಯುತ್ತಿರುವ ಹಾಲು, ಸಕ್ಕರೆ ಮಿಶ್ರಿತ ಚಹಾ ನಿಜವಾದ ಚಹಾ ಅಲ್ಲ.
ಕೇವಲ ಟೀ ಸೊಪ್ಪನ್ನ ಕುದಿಸಿ ಕುಡಿಯುವುದೇ ನಿಜವಾದ ಚಹಾ.
ತಮ್ಮ ಕೆಲಸಗಾರರು ಬಿಸಿಯಾದ ಚಹಾ ಕುಡಿಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದರಿಂದ ಅದಕ್ಕೆ ಹಾಲನ್ನ ಸೇರಿಸಿ ಅರ್ಧ ಬಿಸಿ ಚಹಾ ಕೊಡುವ ಪರಿಪಾಠವನ್ನ ಬೆಳೆಸಿದ್ದು ಬ್ರಿಟಿಷ್ ಅಧಿಕಾರಿಗಳು.
ಈಗ ನಾವದನ್ನೇ ಮುಂದುವರಿಸಿದ್ದೇವಷ್ಟೆ.ಇದು ಚಹಾ ಬೆಳೆದು ಬಂದ ವಿಧಿ ವಿಧಾನ.
ಈಗ ಚಹಾದ ವಿವಿಧ ಬಗೆಗಳೆಂದರೆ
ಗ್ರೀನ್ ಟೀ
.ಬ್ಲ್ಯಾಕ್ ಟೀ
.ಯೆಲ್ಲೋ ಟೀ.
ಶುಂಠಿ, ಏಲಕ್ಕಿ, ದಾಲ್ಚಿನ್ನಿ, ಲವಂಗ ಮಿಶ್ರಿತ ಮಸಾಲಾ ಟೀ.
ವೈಟ್ ಟೀ.
ಹೆಚ್ಚಾಗಿ ಉಪಯೋಗಿಸುವ ಹಾಲು ಮಿಶ್ರಿತ ಟೀ.
ವೈಟ್ ಟೀ ಇವುಗಳೆಲ್ಲದರಲ್ಲೂ ಅತ್ಯಂತ ದುಬಾರಿಯದ್ದು ಮತ್ತು ಅತಿ ಹೆಚ್ಚು ಉತ್ತಮವಾದದ್ದು. ಆರೋಗ್ಯಕರವಾದ ಇದು ಬಹಳಷ್ಟು ಔಷಧೀಯ ಗುಣಗಳನ್ನ ಹೊಂದಿದೆ.
ಜಪಾನ ದೇಶದಲ್ಲಿ ಬಳಸುವ ಚಹಾದ ಪ್ರಕಾರವೇ ಮಚ್ಚಾ ಚಹಾ ಇದು ಮುನುಷ್ಯನ ದೇಹಕ್ಕೆ ತುಂಬಾ ಉಪಯುಕ್ತವಾಗಿದೆ ಅವುಗಳೆಂದರೆ
ಅಧಿಕ ರೋಗನಿರೋಧಕ ಶಕ್ತಿ:
ಚಹಾದಲ್ಲಿ ಕ್ಯಾಟೆಚಿನ್ (ಶ್ರೇಷ್ಠಗುಣಮಟ್ಟದ ಚಹಾದ ಹರಳು) ಸಮೃದ್ಧವಾಗಿದ್ದು, ಇದು ನೈಸರ್ಗಿಕ ರೋಗನಿರೋಧಕಗಳಾಗಿ ಕಾರ್ಯನಿರ್ವಹಿಸುವ ಚಹಾದಲ್ಲಿನ ಸಸ್ಯ ಸಂಯುಕ್ತಗಳ ವರ್ಗವಾಗಿದೆ. ಹಾನಿಕಾರಕ Radicalsಗಳಿಂದಾಗುವ ಅಪಾಯವನ್ನು ತಡೆಗಟ್ಟುತ್ತದೆ. ಅಲ್ಲದೇ ಜೀವಕೋಶಗಳಿಗೆ ಹಾನಿ ಮಾಡುವ ಮತ್ತು ದೀರ್ಘ ಕಾಯಿಲೆಗಳನ್ನು ತಡೆಯಲು ಮಚ್ಚಾ ಚಹಾ ಪ್ರಯೋಜನಕಾರಿಯಾಗಿದೆ.
ಆರೋಗ್ಯಕರ ಚರ್ಮಕ್ಕೆ ಸಹಕಾರಿ:
ಮಚ್ಚಾ ಚಹಾ ಆಂತರಿಕ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವುದರ ಜತೆಗೆ, ಮಚ್ಚಾ ಚಹಾ ಪುಡಿ ಕೆಫೀನ್ ಮತ್ತು ಇಜಿಸಿಜಿ ಸಂಯುಕ್ತಾಂಶ ಒಳಗೊಂಡಿದೆ.
ಹೃದಯರಕ್ತನಾಳದ ಆರೋಗ್ಯ ಸುಧಾರಣೆ:
ಮಚ್ಚಾದಲ್ಲಿ ಸೂಕ್ಷ್ಮ ಪೌಷ್ಠಿಕಾಂಶಗಳು ಹೇರಳವಾಗಿದೆ. ಮುಖ್ಯವಾಗಿ ಇದು ಎಪಿಗಲ್ಲೊಕಾಟೆಚಿನ್ 3 ಗ್ಯಾಲೇಟ್ (ಇಜಿಸಿಜಿ) ಎಂದು ಕರೆಯಲ್ಪಡುವ ಒಂದು ಸಸ್ಯದ ಸಂಯುಕ್ತ ಮಿಶ್ರಣವಾಗಿದೆ. ಇಜಿಸಿಜಿ ಸಂಶೋಧನೆಯಲ್ಲಿನ ಸಲಹೆಯಂತೆ, ಮಚ್ಚಾ ಚಹಾ ಪುಡಿ ಹೃದಯರಕ್ತನಾಳದ ಮತ್ತು ಚಯಾಪಚಯ ಕ್ರಿಯೆ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ.
ಒತ್ತಡ ನಿವಾರಕಕ್ಕೆ ಸಹಕಾರಿ:
ಜಪಾನ್ ನ ಮಚ್ಚಾ ಚಹಾದಲ್ಲಿ ಅಮೈನೋ ಆ್ಯಸಿಡ್ ಎಲ್ ಥಿಯಾನೈನ್ ಹೆಚ್ಚಿನ ಪ್ರಮಾಣದಲ್ಲಿದ್ದು, ಕಡಿಮೆ ಪ್ರಮಾಣದ ಕೆಫೀನ್ ಮತ್ತು ಕ್ಯಾಟೆಚಿನ್ ಗಳನ್ನು ಹೊಂದಿದೆ. ಮಚ್ಚಾ ಚಹಾ ಸೇವನೆಯಿಂದ ಖಿನ್ನತೆ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.
ಇಂತಹ ಚಹಾವನ್ನು ಬಂಡವಾಳ ಮಾಡಿಕೊಂಡು ಜಗತ್ತಿನಾದ್ಯಂತ ತಮ್ಮ ಮಳಿಗೆಯನ್ನು ಸ್ಥಾಪಿಸಿ ಕೋಟ್ಯಾಂತರ ರೂಪಾಯಿ ಸಂಪಾದಿಸಿದವರು ಇಂದು ನಮ್ಮ ಮಧ್ಯೆ ಇದ್ದಾರೆ. ಉದಾರಣೆಗೆ ಚಾಯ್ ಸುಟ್ಟಾ ಬಾರ್, ಎಂಬಿಎ ಚಾಯ್ ವಾಲಾ ಇನ್ನು ಮುಂತಾದವರು ಈ ಸಾಲಿನಲ್ಲಿ ಸೇರುತ್ತಾರೆ. ಅಷ್ಟೇ ಅಲ್ಲದೆ ಕೆಲವೊಂದು ಪ್ರಾದೇಶಿಕ ಮಳಿಗೆಗಳು ಸಹ ರಾಜ್ಯಾದ್ಯಂತ ತಮ್ಮ ವಿತರಕರನ್ನು ನೇಮಿಸಿ ಚಹಾ ಮಾರಿ ಉದ್ಯಮವನ್ನು ನಡೆಸುತ್ತಿದ್ದಾರೆ. ಇದೆಲ್ಲದರ ಮಧ್ಯೆ ನಮ್ಮ ದೇಶದ ಹೆಮ್ಮೆಯ ಪ್ರಧಾನಿಗಳು ಒಂದು ಕಾಲದಲ್ಲಿ ಚಾಯ್ ಮಾರುತ್ತಿದ್ದರು ಇದು ಎಲ್ಲ ಚಹಾ ಮಾರಾಟ ಮಾಡುವವರಿಗೆ ಮತ್ತು ಚಹಾಪ್ರೀಯರಿಗೆ ಗೌರವದ ಸಂಗತಿ.