ಎಲ್ಲರ ಜೀವನದಲ್ಲೂ ನೆಗೆಟಿವ್ ಕಮೆಂಟ್ಸ್ ಕೊಡೋರು ಇದ್ದೇ ಇರ್ತಾರೆ. ಕೆಲವರು ನಮ್ಮ ಬೆನ್ನ ಹಿಂದೆ ಮಾತಾಡಿ ಹೀಯಾಳಿಸಿದರೆ ಇನ್ನು ಕೆಲವರು ನಮ್ಮ ಮನಸ್ಸಿಗೆ ನೋವು ಮಾಡೋದಕ್ಕೆ ಅಂತಾನೇ ಮಾತಾಡ್ತಾರೆ ಅಲ್ವಾ? ಆದರೆ ಈ ನೆಗೆಟಿವ್ ಕಮೆಂಟ್ಸ್ ಗಳನ್ನು ಎಷ್ಟು ಜನ ಬಿಟ್ಟು ಮುಂದೆ ಹೋಗ್ತೀವಿ. ಇದನ್ನೆ ತಲೇಲಿ ಇಟ್ಕೊಂಡಿದ್ರೆ ಮುಂದೆ ನಿಮ್ಮ ಲೈಫ್ ಹೇಗೆ ಯೋಚಿಸಿ.. ಇದನ್ನೆಲ್ಲ ಹೇಗೆ ಡೀಲ್ ಮಾಡಬೇಕು ನೋಡಿ..
• ಮಾತುಗಳಿಗೆ ಭಾವನೆಗಳನ್ನು ಮಿಕ್ಸ್ ಮಾಡಬೇಡಿ:
ಕೆಲವೊಮ್ಮೆ ಈ ತರ ಮಾತುಗಳನ್ನು ಕೇಳಿದ ಕೂಡಲೇ ಅಳು, ಕೋಪ, ಮನಸ್ಸಿಗೆ ಬೇಜಾರು ಎಲ್ಲಾ ಆಗುತ್ತದೆ. ಆದರೆ ಆ ಕ್ಷಣಕ್ಕೆ ಯಾವುದೇ ಭಾವನೆಯನ್ನೂ ತೋರಿಸದೇ ಸುಮ್ಮನಿದ್ದು ಬಿಡಿ.
• ಆ ವ್ಯಕ್ತಿ ನೀವಲ್ವಾ?:
ಅವರು ದೂಷಿಸುತ್ತಿರುವ ವ್ಯಕ್ತಿ ನೀವಲ್ವಾ? ನೀವು ಯಾವ ರೀತಿಯ ತಪ್ಪು ಮಾಡಿಲ್ವಾ? ಮತ್ಯಾಕೆ ಯೋಚನೆ ಮಾಡ್ತೀರಿ? ಅವರ ಮಾತಿಗೆ ನೀವು ಬೆಲೆ ಕೊಡದೆ ನಿಮ್ಮ ಪಾಡಿಗೆ ನೀವಿರೋದೆ ಬೆಸ್ಟ್.
• ಪದಬಳಿಕೆ ನೋಡಿಕೊಳ್ಳಿ:
ಯಾರೋ ಏನೋ ಅಂದರು ಅಂತ ಹೇಳಿ ನಾವು ಬಾಯಿಗೆ ಬಂದ ಹಾಗೆ ಮಾತನಾಡಬಾರದು. ನೆನಪಿದ್ಯಾ? ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು ಅಂತ.
• ಪರ್ಸನಲ್ ಆಗಿ ತಗೋಬೇಡಿ:
ಅವರ ಮನಸ್ಸಿನಲ್ಲಿ ಯಾರ ಮೇಲೆ ಕೋಪ ಇತ್ತೋ, ಏನು ಸಮಸ್ಯೆ ಇದೆಯೋ ಯಾರಿಗೆ ಗೊತ್ತು. ಸುಮ್ಮನೆ ಅದನ್ನ ಗಂಭೀರವಾಗಿ ತಗೊಂಡು ಕೊರಗೋದ್ಯಾಕೆ? ಅವರಿಗೊಂದಿಷ್ಟು ಪ್ರೀತಿ ತೋರಿಸಿ ಸುಮ್ಮನಾಗಿಬಿಡಿ.
• ಅವರ ಮಾತು ಸತ್ಯಾನಾ?
ನಿಮ್ಮನ್ನು ನಿಂದಿಸುತ್ತಿರುವವರ ಮಾತುಗಳಲ್ಲಿ ಸತ್ಯ ಇದ್ಯಾ ಅಥವಾ ಕೇವಲ ಕಮೆಂಟ್ ಆ? ಅದು ಸತ್ಯ ಆಗಿದ್ರೆ ನೀವು ಹೇಗೆ ಅದನ್ನು ಬದಲಾಗಿಸಿಕೊಳ್ಳಬೇಕು ಅಂತ ಯೋಚನೆ ಮಾಡಿ.
• ಎಲ್ಲರಿಗೂ ಹೇಳ್ಬೇಡಿ:
ನಿಮಗೆ ಯಾರದೋ ವ್ಯಕ್ತಿಯಿಂದ ನೋವಾಗಿದ್ರೆ ಅದನ್ನ ಎಲ್ಲರಿಗೂ ಹೇಳೋಕೆ ಹೋಗಬೇಡಿ. ಬಾಯಿಂದ ಬಾಯಿಗೆ ಹೋಗುವಾಗ ಚೈನೀಸ್ ವಿಸ್ಪರ್ ನಂತೆ ವಾಕ್ಯಗಳು ಬದಲಾಗುತ್ತದೆ. ಕೊನೆಗೆ ನೀವೇ ಪೇಚಿಗೆ ಸಿಕ್ಕಿ ಹಾಕೋಬೇಕು.
• ಮೂಡ್ ಆಫ್ ಬೇಡ:
ಕೆಲವು ಮಾತುಗಳು ನಮ್ಮ ಮನಸ್ಸಿಗೆ ತಟ್ಟುತ್ತೆ. ಇದರಿಂದ ನಮ್ಮ ಮೂಡ್ ಆಫ್ ಮಾಡ್ಕೋತೀವಿ. ಆದರೆ ನೆನಪಿಡಿ ಯಾರದೋ ಮಾತಿಗೆ ನಿಮ್ಮ ಜೊತೆ ಇರುವ ನಿಮ್ಮವರ ಮೂಡ್ ಆಫ್ ಮಾಡ್ತೀರಾ? ಸದಾ ಖುಷಿಯಾಗಿರಿ