ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಿದಂತೆ ಅದನ್ನು ಬಳಸಿಕೊಂಡು ಅಪರಾಧ ಮಾಡುವವರ ಸಂಖ್ಯೆಯು ಕೂಡ ಏರಿಕೆಯಾಗಿದೆ. ಇನ್ನೂ ಕ್ರೈಮ್ಗಳಲ್ಲಿ ಮೊಬೈಲ್ ಫೋನ್ನ್ನು ಬಳಕೆ ಹೆಚ್ಚುತ್ತಿದೆ ಹಾಗೆಯೇ ಇದು ಸಾಮಾನ್ಯವಾಗಿ ಅಪರಾಧಿಗಳನ್ನು ಪತ್ತೆಹಚ್ಚಲು ಸಹಾಯವಾಗುತ್ತದೆ.
ಅಪರಾಧಿಗಳು ಸಾಮಾನ್ಯವಾಗಿ ಬೇರೆಯವರ ಹೆಸರಿನಲ್ಲಿ ಸೀಮ್ ಕಾರ್ಡ್ ಪಡೆದು ಅಪರಾಧ ಕೃತ್ಯದಲ್ಲಿ ಬಳಸುತ್ತಾರೆ. ಹಾಗೇ ಬೇರೆಯವರ ಆಧಾರ್ ಸಂಖ್ಯೆಯಿಂದ ಸೀಮ್ ಪಡೆದು ಕ್ರೈಮ್ಗಳನ್ನು ಮಾಡಿದರೆ ಕೆಲವೊಮ್ಮೆ ಆಧಾರನ ನಿಜವಾದ ಮಾಲೀಕರು ಕೂಡ ಏನು ತಪ್ಪು ಮಾಡದೇ ಕಾನೂನು ವಿಚಾರಣೆಗೆ ಒಳಗಾಗುವ ಸಾಧ್ಯತೆಗಳಿರುತ್ತವೆ. ಆದರಿಂದ ಇಂತಹ ವಿಚಾರದಲ್ಲಿ ಜಾಗೃತ ವಹಿಸುವುದು ಅತೀ ಮುಖ್ಯ. ನಿಮ್ಮ ಹೆಸರಿನಲ್ಲಿ ಬೇರೆ ವ್ಯಕ್ತಿಗಳು ಸೀಮ್ ತೆಗೆದುಕೊಂಡಿದ್ದಾರೆಯೇ ಎಂದು ಅನುಮಾನ ಬಂದಾಗ ಪರೀಕ್ಷಿಸುವುದು ಉತ್ತಮ.
ನಿಮ್ಮ ಆಧಾರ್ ಕಾರ್ಡ್ನಲ್ಲಿ ಎಷ್ಟು ಸಿಮ್ಗಳನ್ನು ನೋಂದಾಯಿಸಲಾಗಿದೆ ಎಂಬುದನ್ನುಪರೀಕ್ಷಿಸಲು ದೂರಸಂಪರ್ಕ ಇಲಾಖೆ ವೆಬ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಇದನ್ನು ಬಳಸಿ ಕೊಂಡು ನಿಮ್ಮ ಹೆಸರಿನಲ್ಲಿ ಎಷ್ಟು ಮೊಬೈಲ್ ಸಂಖ್ಯೆಗಳು ಸಕ್ರಿಯ ಬಳಕೆಯಲ್ಲಿವೆ ಎಂಬುದನ್ನು ಕಂಡುಹಿಡಿಯಬಹುದು.
ನಿಮ್ಮ ಹೆಸರಿನಲ್ಲಿರುವ ಮೊಬೈಲ್ ಸಂಖ್ಯೆಗಳನ್ನು ಪರಿಶೀಲಿಸುವುದು ಹೇಗೆ?
ನೀವು ದೂರಸಂಪರ್ಕ ಇಲಾಖೆಯ TAFCOP portal ತೆರೆದು ಆಧಾರ್ ಸಹಾಯದಿಂದ ನಿಮ್ಮ ಹೆಸರಿನಲ್ಲಿ ಮತ್ತೊಂದು ಮೊಬೈಲ್ ನಂಬರ್ ಸಕ್ರೀಯವಾಗಿದೆ ಎಂಬುದನ್ನು ತಿಳಿಯಬಹುದು. ಮೊದಲು ದೂರಸಂಪರ್ಕ ಇಲಾಖೆಯ TAFCOP portal ವೆಬ್ಸೈಟ್ ಲಿಂಕ್ ತೆರೆಯಿರಿ. ನಂತರ ಈ ವೆಬ್ಸೈಟ್ಗೆ ಪ್ರಸ್ತುತ ಚಾಲ್ತಿಯಲ್ಲಿರುವ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಅಲ್ಲಿ ಕಾಣಿಸುವ OTP ರಿಕ್ವೆಸ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಮೊಬೈಲ್ಗೆ ಬರುವ OTP ಯನ್ನು ತುಂಬಿರಿ. ನಂತರ ಅಲ್ಲಿ ಕಾಣಿಸುವ ವ್ಯಾಲಿಡೇಟ್ ಆಯ್ಕೆಯನ್ನು ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ನೋಂದಾಯಿಸಲ್ಪಟ್ಟಿರುವ ಎಲ್ಲಾ ಮೊಬೈಲ್ ನಂಬರ್ಗಳು ಕಾಣಿಸುತ್ತವೆ. ನಂತರ ಇದಕ್ಕೆ ಸಂಬಂಧ ಪಟ್ಟವರಿಗೆ ದೂರು ನೀಡಿ.