ಬಲು ಅಪರೂಪದ ಕುಂಟಲ ಹಣ್ಣು, ಸಾಮಾನ್ಯವಾಗಿ ಹಳ್ಳಿ ಗುಡ್ಡ ಕಾಡುಗಳಲ್ಲಿ ಕಾಣಸಿಗುವ ಕುಂಟಲ ಹಣ್ಣು ನೇರಳೆ ಹಣ್ಣಿನ ತಳಿಯಾಗಿದೆ. ದುಂಡಗೆ ಕಪ್ಪು ಬಣ್ಣದ ಈ ಹಣ್ಣು ಗಾತ್ರದಲ್ಲಿ ನೇರಳೆ ಹಣ್ಣಿಗಿಂತ ಚಿಕ್ಕದಾಗಿರುತ್ತದೆ.
ಎಲ್ಲಿ ಸಿಗುತ್ತೆ?
ದಕ್ಷಿಣ ಕನ್ನಡದ ಹಳ್ಳಿಗಳಲ್ಲಿ ಗುಡ್ಡ ಕಾಡುಗಳಲ್ಲಿ ಕಾಣಸಿಗುವ ಈ ಹಣ್ಣು ಬಹುತೇಕರ ನೆನಪಿನ ಬುತ್ತಿಯಲ್ಲಿ ಇದನ್ನು ಸವಿದ ರುಚಿಯು ಅಚ್ಚಳಿಯದೆ ಉಳಿದಿರುತ್ತದೆ.
ಕರ್ನಾಟಕ ಕರಾವಳಿಯ ಜೋತೆ ಪಶ್ಚಿಮ ಘಟ್ಟ, ತಮಿಳುನಾಡು, ಕೇರಳ ಪ್ರದೇಶಗಳಲ್ಲಿ ಕಾಣಬಹುದು.
ಹೇಗೆ ಕಾಣುತ್ತೆ?
ಕೇವಲ 1 ಸೆ.ಮೀ ಗಾತ್ರವನ್ನು ಹೊಂದಿರುವ ಈ ಹಣ್ಣು ಹುಳಿ ಮಿಶ್ರಿತ ಸಿಹಿಯ ರುಚಿಯ ಅನುಭವ ನೀಡುತ್ತದೆ. ಕುಂಟಲ ಹಣ್ಣಿನ ಹೂ ಬಿಳಿಯ ಬಣ್ಣದಾಗಿದ್ದು, ಗೊಂಚಾಲಾಗಿ ಅರಳುತ್ತದೆ.
ಇದರ ಎಲೆಯನ್ನು ಸುರುಳಿಸಿ ಅದಕ್ಕೆ ಒಂದು ಅಡ್ಡಲಾಗಿ ಕಡ್ಡಿಯನ್ನು ಚುಚ್ಚಿ ತುತ್ತೂರಿಯಂತೆ ಮಕ್ಕಳು ಪೀ ಪೀ ಊದುತ್ತಾರೆ. ಆದರೆ ಇಂತಹ ಕುಂಟಲ ಹಣ್ಣಿನ ಮರಗಳು ಇಂದು ವಿರಳವಾಗಿದೆ.
ಹಳ್ಳಿಗಳೂ ಪಟ್ಟಣದ ಮಾದರಿಯಲ್ಲಿ ಬೆಳೆಯುತ್ತಿರುವುದರಿಂದ ನಿದಾನಕ್ಕೆ ನಶಿಸುತ್ತಿದೆ. ಗುಡ್ಡಗಳನ್ನು ಕೆಡವಿ ಕಟ್ಟಡಗಳು ತಲೆ ಎತ್ತುತ್ತಿರುವುದರಿಂದ ಇದರ ನಾಶಕ್ಕೆ ಕಾರಣವಾಗುತ್ತಿದೆ. ಒಂದರ್ಥದಲ್ಲಿ ಅಳಿವಿನಂಚಿನಲ್ಲಿರುವ ಸಸ್ಯ ಮರಗಿಡಗಳ ಗುಂಪಿಗೆ ಸೇರಿದೆ.