ಬೆಂಗಳೂರು: ಇಂದು ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚುನಾವಣಾ ಸಮೀಕ್ಷೆಗಳ ಪ್ರಕಾರ, ಜನರು ಉತ್ಸಾಹದಿಂದ ಮಾಡಿದ ಮತದಾನ, ಬೂತ್ ನಲ್ಲಿ ಕಾರ್ಯಕರ್ತರು ಕೊಟ್ಟ ಮಾಹಿತಿ ಇವೆಲ್ಲವನ್ನು ಗಮನಿಸಿದ್ದರೆ, ನಾವು ಗೆಲ್ಲುವ ವಿಶ್ವಾಸ ಇದೆ ಎಂಬ ಅಭಿಪ್ರಾಯ ಹೊರಹಾಕಿದರು.
ನಮ್ಮ ಕಾರ್ಯಕರ್ತರು 120 ರಿಂದ 125 ಸೀಟ್ ಗೆಲ್ಲುವ ಸಾಧ್ಯತೆ ಇದೆ ಚುನಾವಣೆಯೋತ್ತರ ಸಮೀಕ್ಷೆ ಪ್ರಕಾರ ಬೆಂಗಳೂರು ಕಡಿಮೆ ಮತದಾನ ಮಾಡಿದೆ, ಆದರೆ ಫಲಿತಾಂಶ ನೋಡುವಾಗ ಬೆಂಗಳೂರಿನಲ್ಲಿ ಅತಿ ಹೆಚ್ಚು ಬಿಜೆಪಿ ಸೀಟ್ ಗಳಿಸುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯಡಿಯೂರಪ್ಪ ಮತ್ತು ನಮ್ಮ ವರದಿ ಯಾವತ್ತೂ ಸುಳ್ಳು ಆಗುವುದಿಲ್ಲ. ಯಡಿಯೂರಪ್ಪನವರ ಮಾತಿನಂತೆ 120 ರಿಂದ 125 ಸೀಟು ಗೆದ್ದೇ ಗೆಲ್ಲುತ್ತೇವೆ. ಆಪರೇಷನ್ ಕಮಲ ಮಾಡುವ ಸಂದರ್ಭ ಬರುವುದಿಲ್ಲ. ರಾಜ್ಯದ ಅಭಿವೃದ್ಧಿಗಾಗಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಬರುವುದರಲ್ಲಿ ಸಂದೇಹವಿಲ್ಲ ಎಂದು ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದರು.