2023ರ ಬಹುನಿರೀಕ್ಷಿತ ಚಿತ್ರ ಆದಿಪುರುಷ್ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ರಾಮಾಯಣ ಕಥೆಯನ್ನಾಧರಿಸಿ ಈ ಚಿತ್ರ ತಯಾರಿಸಲಾಗಿದ್ದು, ಜೂನ್ 16ರಂದು ಚಿತ್ರ ತೆರೆ ಮೇಲೆ ಬರಲಿದೆ.
ನಟ ಪ್ರಭಾಸ್ ಈ ಸಿನಿಮಾದಲ್ಲಿ ರಾಮನ ಪಾತ್ರ ಮಾಡಿದ್ದು, ಅವರಿಗೆ ಜೋಡಿಯಾಗಿ ಸೀತೆಯ ಪಾತ್ರದಲ್ಲಿ ಕೃತಿ ಸನೋನ್ ಅಭಿನಯಿಸಿದ್ದಾರೆ. ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಮೇ 9ರಂದು ಸಂಜೆ 5ಕ್ಕೆ ‘ಆದಿಪುರುಷ್ʼ ಟ್ರೇಲರ್ ಬಿಡುಗಡೆ ಆಗಲಿದೆ.
ಮೇ 8ರ ಸಂಜೆ ಹೈದರಾಬಾದ್ ನಲ್ಲಿ ಮಾಧ್ಯಮದವರಿಗೆ ಹಾಗೂ ಅಭಿಮಾನಿಗಳಿಗಾಗಿ ಕೆಲವು ಚಿತ್ರಮಂದಿರಗಳಲ್ಲಿ ಟ್ರೇಲರ್ ತೋರಿಸಲಾಗಿದೆ. ಟ್ರೇಲರ್ ನೋಡಿದ ಅಭಿಮಾನಿಗಳು ‘ಜೈ ಶ್ರೀರಾಮ್’ಎಂದು ಜೈಕಾರ ಹಾಕಿದ್ದಾರೆ.
ಟ್ರೇಲರ್ ಪ್ರದರ್ಶನದಲ್ಲಿ ಪ್ರಭಾಸ್, ಕೃತಿ ಸನೋನ್, ನಿರ್ದೇಶಕ ಓಂ ರಾವತ್ ಸೇರಿದಂತೆ ಇಡೀ ಚಿತ್ರತಂಡದವರು ಹಾಜರಿದ್ದರು. 3ಡಿ ಟ್ರೇಲರ್ ಕಣ್ತುಂಬಿಕೊಂಡ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.