ಅನಾನಸ್ ಒಂದು ಹುಳಿ-ಸಿಹಿ ಮತ್ತು ರಸಭರಿತವಾದ ಹಣ್ಣು. ಇದು ಸಾಮಾನ್ಯವಾಗಿ ಹೊರಗಿನಿಂದ ಹಸಿರು ಬಣ್ಣ ಮತ್ತು ಮುಳ್ಳಿನಿಂದ ಕೂಡಿರುತ್ತದೆ. ಮತ್ತು ಒಳಗಿನಿಂದ ಸ್ವಲ್ಪ ಗಟ್ಟಿಯಾಗಿ ಹಳದಿಯಾಗಿರುತ್ತದೆ. ಅನಾನಸ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆಂಟಿ-ಆಕ್ಸಿಡೆಂಟ್ಗಳು, ಕ್ಯಾಲ್ಸಿಯಂ, ಫೈಬರ್, ವಿಟಮಿನ್ ಸಿ ಮತ್ತು ಇತರ ಅನೇಕ ಅಗತ್ಯ ಅಂಶಗಳು ಇದರಲ್ಲಿ ಕಂಡುಬರುತ್ತವೆ,
ಅನಾನಸ್ನಲ್ಲಿ ಕಂಡುಬರುವ ಪೋಷಕಾಂಶಗಳು ದೇಹವನ್ನು ಅನೇಕ ಸಮಸ್ಯೆಗಳಿಂದ ದೂರವಿರಿಸಲು ಸಹಾಯ ಮಾಡುತ್ತದೆ. ಆದರೆ ಈ ಹಣ್ಣನ್ನು ತಿನ್ನುವುದರಿಂದ ಹಲವಾರು ಅನಾನುಕೂಲತೆಗಳಿವೆ. ಅದಕ್ಕಾಗಿಯೇ ಇದನ್ನು ಅತಿಯಾಗಿ ಸೇವಿಸಬೇಡಿ
ಭಾರತದಲ್ಲಿ ಬೆಳೆಯುವ ಅನಾನಸ್ನ ಹೆಚ್ಚಿನ ವಾಣಿಜ್ಯ ಪ್ರಭೇದಗಳು ಕ್ಯೂ, ಜೈಂಟ್ ಕ್ಯೂ, ಕ್ವೀನ್, ಮಾರಿಷಸ್, ಜಲ್ಧಪ್ ಮತ್ತು ಲಖತ್. ಈ ಪ್ರಭೇದಗಳಲ್ಲಿ, ರಾಣಿ, ದೈತ್ಯ ಕ್ಯೂ ಅನ್ನು ಭಾರತದ ಈಶಾನ್ಯ ಭಾಗಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ.
ಭಾರತದಲ್ಲಿ ಅನಾನಸ್ ಬೆಳೆಯುವ ಪ್ರಮುಖ ಅವಧಿಯು ಜುಲೈನಿಂದ ಸೆಪ್ಟೆಂಬರ್ ವರೆಗೆ ಇರುತ್ತದೆ ಮತ್ತು ಬೆಳೆ ಕೊಯ್ಲು ಮಾಡಲು ಸುಮಾರು 18 ರಿಂದ 24 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಅನಾನಸ್ ಉಷ್ಣವಲಯದ ಸಸ್ಯವಾಗಿದ್ದು ಅದು ಆರ್ದ್ರ ಸ್ಥಿತಿಯಲ್ಲಿ ಬೆಳೆಯುತ್ತದೆ. ಇದು ಬಯಲು ಪ್ರದೇಶಗಳಲ್ಲಿ ಮತ್ತು 900 ಮೀಟರ್ಗಿಂತ ಕಡಿಮೆ ಎತ್ತರದಲ್ಲಿ ಬೆಳೆಯುತ್ತದೆ.
ಅನಾನಸ್ ಸಸ್ಯವು ಹೆಚ್ಚಿನ ತಾಪಮಾನ ಅಥವಾ ಹಿಮಕ್ಕೆ ಸಹಿಸುವುದಿಲ್ಲ. ಅನಾನಸು ಬೆಳಗೆ ಪ್ರಮುಖವಾಗಿ ಉತ್ತಮ ಬೆಳಕು ಅವಶ್ಯಕ. ಹೆಚ್ಚು ನೀರು ಬೇಕಾಗಿಲ್ಲ ಇಬ್ಬನಿಯಲ್ಲಿ ಯು ಬದುಕುತ್ತದೆ. ನೆಲವನ್ನು ಉಳುಮೆ ಮಾಡಿ ನೆಲಮಟ್ಟದಲ್ಲಿಯೇ ಗಿಡಗಳನ್ನು ಮೇಲ್ಭಾಗದಲ್ಲಿ ಊರಬೇಕು. ಅನಾನಸನ್ನು ನೆಡಲು ಹಣ್ಣಿನ ಜುಟ್ಟನ್ನು ಬಳಸಲಾಗುತ್ತದೆ. ಜುಟ್ಟು ಬೆಳೆಯಲು ಸುಮಾರು ಆರು ತಿಂಗಳು ಹೆಚ್ಚು ಸಮಯ ಬೇಕಾಗುತ್ತದೆ.
ಅನಾನಸ್ ನು ಕಾಲುವೆ ಪದ್ಧತಿ ಮತ್ತು ಏರಿ ಪದ್ಧತಿಯಲ್ಲಿ ನಾಟಿ ಮಾಡಲಾಗುತ್ತದೆ. ಕಾಲುವೆ ಪದ್ಧತಿಯಲ್ಲಿ ಸುಮಾರು 1.5 – 2 ಅಡಿಗಳ ಆಳ ಮತ್ತು ಅಗಲದ ಕಾಲುವೆ ಮಾಡಿ ಅದರಲ್ಲಿ ಏಕ ಸಾಲಿನಲ್ಲಿ ನಾಟಿ ಮಾಡಲಾಗುತ್ತದೆ. ವರ್ಷವೂ ಬದಿಯ ಮಣ್ಣನ್ನು ಜಾರಿಸಿ ಮೂರು ನಾಲ್ಕು ವರ್ಷ ಬೆಳೆ ಉಳಿಸಿಕೊಳ್ಳಬಹುದು. ಮಳೆಗಾಲ ಮುಗಿಯುವ ಸಮಯ ಅಂದರೆ ಸಪ್ಟೆಂಬರ್ ಅಕ್ಟೋಬರ್ ಅಥವಾ ಏಪ್ರಿಲ್ ಮೇ ತಿಂಗಳಿನಲ್ಲಿ ನಾಟಿ ಮಾಡಬೇಕು. ಮಳೆಗಾಲದಲ್ಲಿ ನೆಟ್ಟರೆ ಕೊಳೆತು ಹೋಗುವ ಸಾಧ್ಯತೆ ಇರುತ್ತದೆ.
ನಾಟಿ ಮಾಡಿದ ನಂತರ ಸಸ್ಯ ಬುಡಕ್ಕೆ 100 ರಿಂದ 200 ಮಿಲಿಯಂತೆ ಶಿಲೀಂದ್ರ ನಾಶಕ ಸಿಂಪಡಿಸಬೇಕು. ಮೇಲು ಗೊಬ್ಬರವಾಗಿ ಸಾರಜನಕ ಮತ್ತು ರಂಜಕ ಯುಕ್ತ ಗೊಬ್ಬರವನ್ನು ನೀಡಬೇಕು ಅಲ್ಲದೇ ಕೊಟ್ಟಿಗೆ ಗೊಬ್ಬರವನ್ನು ಕೂಡ ಬಳಸಬೇಕು. ಸಸಿ ಬೆಳವಣಿಗೆಗೆ ಅನುಸಾರ ಗೊಬ್ಬರ ನೀಡುತ್ತಾ ಬಂದರೆ ಹೂ ಬಿಟ್ಟು ಕಾಯಿ ಬೆಳೆಯುವ ಸಮಯದಲ್ಲಿ ಪೊಟ್ಯಾಶಿಯಂ ಗೊಬ್ಬರ ಕೊಡುವುದರಿಂದ ಸಿಹಿ ಮತ್ತು ತೂಕ ಹೆಚ್ಚಾಗುತ್ತದೆ.
ಪ್ರತಿ ವರ್ಷ ಈ ಬೆಳೆಯನ್ನೇ ಮುಂದುವರಿಸಿಕೊಂಡು ಹೋಗುವುದರಿಂದ ಈ ಬೆಳೆಗಾರರಿಗೆ ಅಧಿಕ ಲಾಭ ಕೂಡ ಸಿಗುತ್ತದೆ ಕಡಿಮೆ ನೀರು ಇರುವ ಪ್ರದೇಶಗಳಲ್ಲಿ ಈ ಬೆಳೆಯನ್ನು ಬೆಳೆಯಲು ಸಾಧ್ಯವಾದ್ದರಿಂದ ಇದು ಒಂದು ಉತ್ತಮ ವಾಣಿಜ್ಯ ಬೆಳೆ ಎಂದು ಹೇಳಬಹುದು.