ಟಾಟಾ ಐಪಿಎಲ್ 2023 ಅರ್ಧ ದಾರಿಯನ್ನು ಯಶಸ್ವಿಯಾಗಿ ಕ್ರಮಿಸಿ ಮುಂದೆ ಸಾಗುತ್ತಿದೆ. ಪ್ರತಿಬಾರಿ ಇಷ್ಟೊತ್ತಿಗೆ ಕನಿಷ್ಟ ಒಂದು ತಂಡವಾದರೂ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸುವ ಪರಿಸ್ಥಿತಿಯಲ್ಲಾದರೂ ಇರುತ್ತಿತ್ತು. ಆದರೆ ಈ ಬಾರಿ ಸ್ಪರ್ಧೆ ಬಹಳ ಜಿದ್ದಾಜಿದ್ದಿನಿಂದ ಕೂಡಿದೆ. ಸದ್ಯ ಟಾಪ್ 4 ಸ್ಥಾನಗಳಲ್ಲಿರೋ ತಂಡಗಳಲ್ಲಿ ಯಾವ ತಂಡವೂ ಸಹ ಪ್ಲೇ ಆಫ್ ಪ್ರವೇಶಿಸದೇ, ಅದರ ಕೆಳಗಿನ 4 ತಂಡಗಳು ಮುನ್ನಡೆ ಸಾಧಿಸಿದರೂ ಅಚ್ಚರಿ ಪಡಬೇಕಾಗಿಲ್ಲ.
ಲೇಖನ ಬರೆಯುವ ಹೊತ್ತಿಗೆ, ಪ್ರಥಮ ಸ್ಥಾನದಲ್ಲಿರೋ ತಂಡ ಹಾಗೂ ಅಂಕಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿರೋ ತಂಡದ ನಡುವಿನ ಅಂತರ ಕೇವಲ 2 ಪಾಯಿಂಟುಗಳು! ಈ ಸೀಸನ್ನ ಆರಂಭದಲ್ಲಿ ರಾಜಸ್ಥಾನ ಹಾಗೂ ಲಕ್ನೋ ಕೊಂಚ ಮುನ್ನಡೆ ಸಾಧಿಸಿದ್ದವು. ಆದರೆ ಕೆಲ ದಿನಗಳ ಬಳಿಕ ಚೆನ್ನೆöÊ ಹಾಗೂ ಗುಜರಾತ್ ಮೊದಲೆರಡು ಸ್ಥಾನಗಳನ್ನು ಆಕ್ರಮಿಸಿಕೊಂಡವು. ಆ ನಾಲ್ಕು ತಂಡಗಳಲ್ಲದೇ, ಮುಂಬೈ, ಪಂಜಾಬ್ ಹಾಗೂ ಬೆಂಗಳೂರು ತಂಡಗಳಿಗೂ ಮೊದಲ ಸ್ಥಾನ ಪಡೆಯುವ ಅವಕಾಶ ಇನ್ನೂ ಜೀವಂತವಾಗಿದೆ.
2020ರ ಋತುವಿನಲ್ಲೂ ಹೀಗೇ ಆಗಿತ್ತು!
ಇಂತಹದ್ದೇ ಜಿದ್ದಾಜಿದ್ದಿ ನಾವು ಕೊನೆಯ ಬಾರಿಗೆ ನೋಡಿದ್ದು 2020ರ ಐಪಿಎಲ್ನಲ್ಲಿ. ಆ ವರ್ಷ ಲೀಗ್ ಸುತ್ತಿನ ಅಂತ್ಯಕ್ಕೆ, ತೃತೀಯ ಹಾಗೂ 8ನೇ ಸ್ಥಾನದಲ್ಲಿರೋ ತಂಡಗಳ ನಡುವಿನ ಅಂಕ ವ್ಯತ್ಯಾಸ ಕೇವಲ 2 ಅಂಕವಾಗಿತ್ತು. ಮುಂಬೈ ಹಾಗೂ ಡೆಲ್ಲಿ ಕ್ರಮವಾಗಿ 18 ಹಾಗೂ 16 ಅಂಕಗಳನ್ನು ಪಡೆದು ಪ್ಲೇ ಆಫ್ ತಲುಪಿದರೆ, ಹೈದರಾಬಾದ್, ಬೆಂಗಳೂರು ಹಾಗೂ ಕೊಲ್ಕತ್ತಾ ತಲಾ 14 ಅಂಕಗಳನ್ನು ಪಡೆದಿತ್ತು ಹಾಗೂ ಉಲ್ಲೇಖಿಸಿದ ಮೊದಲೆರಡು ತಂಡಗಳು ಉತ್ತಮ ರನ್ರೇಟ್ ಆಧಾರದಲ್ಲಿ ಪ್ಲೇ ಆಫ್ ಪ್ರವೇಶಿಸಿತ್ತು. ಯಾವ ತಂಡದ ಪ್ರದರ್ಶನವೂ ಕಳಪೆ ಎನಿಸಿರಲಿಲ್ಲ. ಆ ವರ್ಷ ಮುಂಬೈ ತಂಡ ಚಾಂಪಿಯನ್ ಆಗಿತ್ತು.
ಈ ಬಾರಿಯೂ, ಯಾರೂ ಮೇಲಲ್ಲ, ಯಾರೂ ಕೀಳಲ್ಲ!
2023ರ ಐಪಿಎಲ್ನಲ್ಲೂ ಇನ್ನೂ ಯಾವ ತಂಡವೂ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿಲ್ಲ. ಹೈದರಾಬಾರದ್ ಹಾಗೂ ಡೆಲ್ಲಿ ತಂಡಗಳು ಕೊನೆಯ 2 ಸ್ಥಾನಗಳಲ್ಲಿದ್ದರೂ. ಉತ್ತಮ ಪ್ರದರ್ಶನ ನೀಡಿದರೆ ಪ್ಲೇ ಆಫ್ ಗೆ ಬಂದರೂ ಬರಬಹುದು. ಅದರ ಜೊತೆಗೆ ಉಳಿದ ತಂಡಗಳ ಫಲಿತಾಂಶದ ಮೇಲೂ ಅವಲಂಬನೆ ಆಗಬೇಕಿದೆ.
ಇನ್ನು 8ನೇ ಸ್ಥಾನದಲ್ಲಿರೋ ಕೊಲ್ಕತ್ತಾ ತಂಡಕ್ಕೆ ಸರಿಯಾಗಿ ಅದೃಷ್ಟ ಕೈಹಿಡಿಯುತ್ತಿಲ್ಲ ಅನಿಸುತ್ತೆ! ಉತ್ತಮ ಪ್ರದರ್ಶನ ತೋರಿದರೂ ಗೆಲುವು ಪಡೆಯಲಾಗುತ್ತಿಲ್ಲ. ಆಡಿರೋ 9 ಪಂದ್ಯಗಳಲ್ಲಿ ಕೇವಲ 4 ಗೆಲುವಿನೊಂದಿಗೆ 8 ಅಂಕಗಳನ್ನು ಪಡೆದಿದೆ. ಆ 4 ಗೆಲುವುಗಳ ಪೈಕಿ 2 ಗೆಲುವು ಬಂದದ್ದು ಬೆಂಗಳೂರು ವಿರುದ್ಧವೇ ಆಗಿದೆ ಹಾಗೂ ಇನ್ನೊಂದು ಗೆಲುವು ಬ್ಯಾಟರ್ ರಿಂಕು ಸಿಂಗ್ ಸಾಹಸದಿಂದ ದಕ್ಕಿದ್ದು! (ಗುರಿ ಬೆನ್ನಟ್ಟುವಾಗ 20ನೇ ಓವರ್ನಲ್ಲಿ 5 ಎಸೆತಗಳಲ್ಲಿ 5 ಸಿಕ್ಸರ್ ಚಚ್ಚಿ ವಿರೋಚಿತ ಗೆಲುವಿಗೆ ಕಾರಣರಾಗಿದ್ದರು)
ಇನ್ನು ಪಂಜಾಬ್, ಮುಂಬೈ, ಬೆಂಗಳೂರು ಹಾಗೂ ರಾಜಸ್ಥಾನ ತಂಡಗಳು ತಲಾ 10 ಅಂಕಗಳನ್ನು ಪಡೆದಿವೆ ಹಾಗೂ ರನ್ರೇಟ್ ಪ್ರಕಾರ ಅಂಕಪಟ್ಟಿಯಲ್ಲಿ ಸ್ಥಾನ ಪಡೆದಿವೆ. ರಾಜಸ್ಥಾನ ತಂಡದಲ್ಲಿ ಆರಂಭದಲ್ಲಿ ಉತ್ತಮ ಪ್ರದರ್ಶನ ತೋರಿ, ಬಳಿಕ ಕೆಲ ಪಂದ್ಯಗಳಲ್ಲಿ ಸತತವಾಗಿ ಸೋತು ಈ ಪರಿಸ್ಥಿತಿಯಲ್ಲಿದ್ದರೆ, ಮುಂಬೈ ತಂಡ ಮೊದಲು ಸೋತು, ಆ ಬಳಿಕ ಸತತವಾಗಿ ಗೆದ್ದು, ಇಲ್ಲಿ ಬಂದಿದ್ದಾರೆ. ಇನ್ನು ಪಂಜಾಬ್ ಮತ್ತು ಬೆಂಗಳೂರು ತಂಡಗಳು ಮೊದಲಿನಿಂದಲೂ ಏಳು-ಬೀಳುಗಳನ್ನು ಎದುರಿಸಿಕೊಂಡೇ ಮುನ್ನಡೆಯುತ್ತಿವೆ.
ಮೊದಲ ಮೂರು ಸ್ಥಾನಗಳಲ್ಲಿ ಕ್ರಮವಾಗಿ ಗುಜರಾತ್, ಲಕ್ನೋ ಹಾಗೂ ಚೆನ್ನೆöÊ ತಂಡಗಳು ಇವೆ. ಸದ್ಯ ಗುಜರಾತ್ ತಂಡ ಪ್ಲೇ ಆಫ್ ಏರಬಲ್ಲ ಮೊದಲ ತಂಡ ಎಂದೆನಿಸುವ ಸಾಧ್ಯತೆ ಇದೆ. ಅದು ಬಿಟ್ಟರೆ, ಲಕ್ನೋ ಹಾಗೂ ಚೆನ್ನೆöÊ ತಂಡ ಪ್ಲೇ ಆಫ್ ನಿಂದ ಹೊರ ಬಿದ್ದರೂ ಅಚ್ಚರಿಯೆನಿಸಲ್ಲ. ಲಕ್ನೋ ತಂಡಕ್ಕೆ ಉತ್ತಮ ರನ್ರೇಟ್ ವರದಾನವಾಗಿ ಪರಿಣಮಿಸುವ ಸಾಧ್ಯತೆ ಇದೆ.
ಸತತ ನಾಲ್ಕನೇ ಬಾರಿ ಪ್ಲೇ ಆಫ್ಗೆ ಆರ್ಸಿಬಿ?
ಆರ್ಸಿಬಿ ತಂಡ ಇದುವರೆಗೂ ಒಮ್ಮೆಯೂ ಐಪಿಎಲ್ ಟ್ರೋಫಿ ಜಯಿಸದಿದ್ದರೂ, ಅದರ ಫ್ಯಾನ್ಬೇಸ್ ಬಹಳ ದೊಡ್ಡದಾಗಿದೆ. 2020ರ ಐಪಿಎಲ್ ಋತುವಿನಿಂದ ಸತತ ಮೂರು ಬಾರಿ ಪ್ಲೇ ಆಫ್ ಪ್ರವೇಶಿಸಿರುವ ಆರ್ಸಿಬಿ, ಈ ಸಾಧನೆ ಮಾಡಿ ಏಕೈಕ ತಂಡ ಎನಿಸಿಕೊಂಡಿದೆ. ಈ ಬಾರಿಯೂ ಪ್ಲೇ ಆಪ್ ರೇಸ್ನಲ್ಲಿರೋ ಈ ತಂಡ, ಮತ್ತೊಮ್ಮೆ ತೇರ್ಗಡೆಯಾಗುತ್ತಾ ಅನ್ನೋದನ್ನು ಕಾದುನೋಡಬೇಕಾಗಿದೆ.!
ನನ್ನ ಅಂದಾಜಿನಲ್ಲಿ ಗುಜರಾತ್, ಚೆನ್ನೆöÊ, ಮುಂಬೈ ಹಾಗೂ ಆರ್ಸಿಬಿ/ಲಕ್ನೋ ತಂಡಗಳು ಪ್ಲೇ ಆಫ್ ಪ್ರವೇಶಿಸಬಹುದು. ಪಂದ್ಯದಿAದ ಪಂದ್ಯಕ್ಕೆ ಉತ್ತಮ ಪ್ರದರ್ಶನ ನೀಡಿತ್ತಿರುವ ರಾಜಸ್ಥಾನ ಹಾಗೂ ಪಂಜಾಬ್ ಸಹ ಈ ರೇಸ್ನಲ್ಲಿದೆ. ಇನ್ನು 2 ವಾರಗಳಲ್ಲಿ ಇದು ಸ್ಪಷ್ಟವಾಗಿ ಗೊತ್ತಾಗಲಿದೆ!