ಇಡೀ ವಿಶ್ವದಲ್ಲೇ ಒಂದು ವಿಶೇಷ ಪ್ರಾಶಸ್ತ್ಯ ಹೊಂದಿರುವುದು ಜಲಪಾತಕ್ಕೆ. ಹಸಿರು, ನೀರು, ವಿಶಾಲವಾದ ನೀಲಾಕಾಶವನ್ನು ಕಣ್ತುಂಬಿಸಿಕೊಳ್ಳಲು ಜಲಪಾತಕ್ಕೆ ನಾವೆಲ್ಲ ಟ್ರಿಪ್ ಹೋಗ್ತೀವಿ. ಅಂತಹದ್ದೆ ಒಂದು ತಂಪಾಗಿರುವ ಹನುಮನ್ ಗುಂಡಿ ಜಲಪಾತ. ಇದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ..
ಹನುಮನ್ ಗುಂಡಿ ಜಲಪಾತ ಇದನ್ನು ಸುತ್ತನಬ್ಬೆ ಜಲಪಾತ ಎಂತಲೂ ಕರೆಯುತ್ತಾರೆ. ಇದು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಬೆಟ್ಟಗುಡ್ಡಗಳಿಂದ ಹರಿದುಬರುವ ಜಲಧಾರೆ. ಚಿಕ್ಕಮಗಳೂರು ಜಿಲ್ಲೆಗೆ ಸೇರಿರುವ ಪ್ರದೇಶವಾಗಿದೆ.
ಹನುಮನ್ ಗುಂಡಿ ಜಲಪಾತವು ಕಾರ್ಕಳ ಮತ್ತು ಕುದುರೆ ಮುಖ ರಾಷ್ಟ್ರೀಯ ಉದ್ಯಾವನದ ಲಖ್ಯ ಡ್ಯಾಂಮ್ ಮಧ್ಯ ಭಾಗದಲ್ಲಿ ಇದೆ. ಆಲಪಾತವು 22 ಮೀಟರ್ ಎತ್ತರದಿಂದ ಧುಮ್ಮಕ್ಕಿ ಹರಿಯುತ್ತದೆ. ಮಂಗಳೂರಿನಿಂದ 79 ಕಿ.ಮೀ ದೂರದ ದಾರಿ.
ಜಲಪಾತ ನೋಡಲು ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. 300 ಮೆಟ್ಟಿಲುಗಳನ್ನು ಇಳಿದ ಮೇಲೆ ಜಲಪಾತದ ಸೊಬಗು ಕಾಣಸಿಗುವುದು. 300 ಮೆಟ್ಟಿಲು ಇಳಿದ ಸುಸ್ತು ಮಾಯಾವಾಗಿ ತಾಜಾತನದ ಅನುಭವಾಗುತ್ತದೆ.
ಇಲ್ಲಿನ ನೀರು ಕ್ರಿಸ್ಟಲ್ ಕ್ಲೀಯರ್ ಆಗಿ ಹೊಳೆಯುತ್ತದೆ. ಈ ನೀರು ತುಂಬಾನೇ ತಂಪಾಗಿದ್ದು ಆನಂದ ಅನುಭೂತಿಯನ್ನು ನೀಡುತ್ತದೆ. 300 ಮೆಟ್ಟಿಲನ್ನು ಮತ್ತೆ ಹತ್ತುವಾಗ ಕೊಂಚ ಸುಸ್ತಾಗುವುದಂತು ಖಂಡಿತ ಆದರೆ ಒಂದು ಒಳ್ಳೆಯ ಸಮಯವನ್ನು ಕಳೆದ ಮಧುರ ಅನುಭವವು ನಮ್ಮದಾಗಿರುತ್ತದೆ,