ಮೈಗ್ರೇನ್ ಅನ್ನೋದು ಪುರುಷರಿಗಿಂತ ಮಹಿಳೆಯರಲ್ಲೇ ಹೆಚ್ಚು ಅಂತ ಸಂಶೋಧನೆ ಹೇಳುತ್ತೆ. ಪ್ರತಿನಿತ್ಯದ ಒತ್ತಡದ ಕೆಲಸಗಳು, ಪೌಷ್ಠಿಕ ಆಹಾರದ ಕೊರತೆಗಳಿಂದ ಈ ಮೈಗ್ರೇನ್ ತಲೆ ನೋವು ಕಾಡುತ್ತದೆ.
ಹಾಗಿದ್ರೆ ಮೈಗ್ರೇನ್ ಬಂದಾಗ ಏನು ಮಾಡಬೇಕು ಗೊತ್ತಾ?
ಕತ್ತಲೆ ಕೋಣೆಯಲ್ಲಿ ಮಲಗಿ:
ಮೈಗ್ರೇನ್ ಬಂದವರು ಬೆಳಕಿನ ಕಿರಣಗಳು ಅಂದರೆ ಲೈಟ್, ಮೊಬೈಲ್, ಲ್ಯಾಪ್ ಟಾಪ್ ಗಳಿಂದ ದೂರ ಇರಬೇಕು. ಬದಲಿಗೆ ಕತ್ತಲೆ ಕೋಣೆಯಲ್ಲಿ ರೆಸ್ಟ್ ಮಾಡಬೇಕು.
ತಂಪು ಅಥವಾ ಬಿಸಿ ಶಾಖ:
ತಲೆನೋವು ಬಂದಿರುವ ಜಾಗಕ್ಕೆ ತಂಪಾಗಿರುವ ಅಥವಾ ಬಿಸಿಯಾದ ಶಾಖ ಕೊಡುವುದರಿಂದ ಕೆಲವೇ ನಿಮಿಷಗಳಲ್ಲಿ ತಲೆ ನೋವು ಕಡಿಮೆಯಾಗುತ್ತದೆ.
ಮಸಾಜ್:
ಮೈಗ್ರೇನ್ ನಿಂದ ಬಳಲುತ್ತಿರುವವರಿಗೆ ಮಸಾಜ್ ಒಂದು ಅಸ್ತ್ರವಾಗಲಿದೆ. ಮೆದುಳು, ಹಣೆ, ಕಣ್ಣಿನ ಸುತ್ತ ಒಂದೊಳ್ಳೆ ಮಸಾಜ್ ಸಿಕ್ಕರೆ ತಲೆ ನೋವು ಕಡಿಮೆಯಾಗುತ್ತದೆ.
ಧ್ಯಾನ ಮಾಡಿ:
ತಲೆ ನೋವು ಬಂದಾಗ ಕೆಲವು ಸಮಯ ಯಾವುದೇ ಚಿಂತೆ ಇಲ್ಲದೆ ಒಂದೆಡೆ ಕುಳಿತು ಧ್ಯಾನ ಮಾಡಿ. ನಿಮ್ಮ ಉಸಿರಾಟದ ಕಡೆ ಗಮನವಿರಲಿ.
ಲ್ಯಾವೆಂಡರ್ ಪರಿಮಳ:
ಮೈಗ್ರೇನ್ ಇರುವವರು ಲ್ಯಾವೆಂಡರ್ ಹೂವು ಅಥವಾ ಲ್ಯಾವೆಂಡರ್ ತೈಲದ ಪರಿಮಳ ಪಡೆಯುವುದರಿಂದ ತಲೆ ನೋವು ಕಡಿಮೆಯಾಗುತ್ತದೆ.
ಜಾಸ್ತಿ ಶಬ್ದ ಬೇಡ:
ನಿಮ್ಮ ಮೈಗ್ರೇನ್ ಹೆಚ್ಚು ಮಾಡುವುದರಲ್ಲಿ ಅತಿಯಾದ ಶಬ್ದ ಕೂಡ ಒಂದು. ಜೋರಾಗಿ ಕೂಗಾಡೋದು, ಟಿವಿ ಹಾಕೋದು, ಪಾರ್ಟಿ ಮಾಡುವುದರಿಂದ ದೂರವಿರಿ