ಅಗ್ಗದಲ್ಲಿ ತುಂಬಾನೇ ಸುಲಭವಾಗಿ ದೊರೆಯುವ ಬಡವರ ಬದಾಮಿ ಕಡಲೆ ಕಾಯಿ ಅಥಾವ ಶೇಂಗಾ ಬಗ್ಗೆ ಯಾರಿಗೆ ಗೊತ್ತಿಲ್ಲ ಪಾರ್ಕ್ ನಲ್ಲಿ, ಬಸ್ ಸ್ಟಾಂಡ್ ಗಳಲ್ಲಿ ಟೈಮ್ಪಾಸ್ ಮಾಡಲು ಕೈಯಲ್ಲಿ ಒಂದು ನೆಲಕಡಲೆ ಇದ್ದರೆ ಸಾಕು. ಆಗಾದ ಪೌಷ್ಟಿಕಾಂಶವುಳ್ಳ ಈ ಕಡಲೆ ಕಾಯಿಯನ್ನು ಬಯಸದೆ ಇರುವವರಿಲ್ಲ.
ಕರ್ನಾಟಕದ ಜನರಿಗೆ ಇದು ನೆಲಗಡಲೆ ಶೇಂಗಾ ಅಂತ ಪರಿಚಿತ ಆದರೆ ವಿಸ್ವದಲ್ಲಿ ಪೀನಟ್ಸ್ ಎಂದು ಗುರುತಿಸಿಕೊಂಡಿದೆ.ಸುಲಭವಾಗಿ ಹುರಿದು ಇದನ್ನು ತಿನ್ನಬಹುದು. ಇದರ ಆರೋಗ್ಯ ಪ್ರಯೋಜನಗಳು ಹಲವು ಕೊಬ್ಬೊನಾಂಶವನ್ನು ನಿಯಂತ್ರಿಸುವುದರರಿಂದ ಹೃದಯಕ್ಕೆ ತುಂಬಾನೇ ಒಳ್ಳೆದು. ದೇಹದ ತೂಕವನ್ನು ಇಳಿಸಲು ಮತ್ತು ಸರಿದೂಗಿಸಲು ಸಹಾಯಕ. ದೇಹದಲ್ಲಿನ ಸಕ್ಕರೆ ಅಂಶವನ್ನು ನಿತಂತ್ರಿಸುತ್ತದೆ.
ಇದರಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ, ವಿಟಮಿನ್, ರಂಜಕ, ಪೊಟ್ಯಾಶಿಯಮ್ಮತ್ತು ಮೇಗ್ನೀಸಿಯಮ್ ನಂತಹ ಪೌಷ್ಟಿಕ ಸತ್ವಗಳು ಹೇರಳವಾಗಿದೆ. ಕೆಲವರರು ಇದನ್ನು ನೇರವಾಗಿ ಹುರಿದು ತಿನ್ನಲುಬಹುದು. ಇನ್ನು ಕೆಲವರು ವಿವಿಧ ಅಡುಗೆಗಳಲ್ಲಿ ಇದನ್ನು ಬಳಸುತ್ತಾರೆ.
ಚಿಕ್ಕಿ ಎಲ್ಲರಿಗೂ ತಿಳಿದಿರಲೇ ಬೇಕಾಲ್ವ. ಬೆಲ್ಲದ ಪಾಕದೊಂದಿಗೆ ಕಡಾಲೆಕಾಯಿಯನ್ನು ಜೊತೆಗೂಡಿಸಿ ತಯಾರಿಸಿರುವ ತಿನಿಸು ಆಗಿದೆ. ಆರೋಗ್ಯಕರ ಕೊಬ್ಬನ್ನು ಒಳಗೊಂಡ ಚಿಕ್ಕಿಯು ಹಸಿವನ್ನು ನಿಯಂತ್ರಿಸುತ್ತದೆ. ದೇಹದಲ್ಲಿ ಅನಗತ್ಯ ಕೊಬ್ಬುನ್ನು ಶೇಖರಣೆಯಾಗದಂತೆ ನೋಡಿಕೊಳ್ಳುತ್ತದೆ.
ಕಡಲೆ ಕಾಯಿಯನ್ನು ಪಿತ್ತಕ್ಕೆ ಮಾರಿ ಎನ್ನುತ್ತಾರೆ. ಕೆಲವೊಂದು ಪದರ್ಥಗಳು ಮನಷ್ಯನ ದೇಹದ ಮೇಲೆ ಅಡ್ಡ ಪರಿಣಾಮವನ್ನು ಬೀರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇದನ್ನು ತಿಂದಮೇಲೆ ಆರೋಗ್ಯದಲ್ಲಿ ವ್ಯತ್ಯಾಸವಾದಲ್ಲಿ ಕೂಡಲೇ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.