ಪ್ರತಿಯೊಬ್ಬರಿಗೂ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿನ್ನುವುದು ಮತ್ತು ಅದರ ಜ್ಯೂಸ್ ಅನ್ನು ಕುಡಿದು ಅಂದರೆ ತುಂಬಾ ಇಷ್ಟ ಯಾಕೆಂದರೆ ಅದನ್ನು ಸೇವಿಸುವಾಗ ಅದರಲ್ಲಿ ಹೆಚ್ಚು ನೀರಿನಾಂಶವಿದ್ದು, ಶೆಕೆಗೆ ಒಳ್ಳೆಯ ಹಿತ ಅನಿಸುತ್ತದೆ. ವಿಶೇಷವಾಗಿ ಬೇಸಿಗೆಯಲ್ಲಿ ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನವಿದ್ದು ಬಿಸಿಯಾದ ತಾಪಮಾನದಿಂದ ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ.
ಆದರೆ ಕಲ್ಲಂಗಡಿ ಹಣ್ಣು ತಿಂದಾದ ಮೇಲೆ ಬೇರೆಯ ಕೆಲವು ಪದಾರ್ಥಗಳನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ತೊಂದರೆಗಳಾಗುವ ಸಂಭವವಿರುತ್ತದೆ. ಅದಕ್ಕಾಗಿ ಕಲ್ಲಂಗಡಿ ಹಣ್ಣು ತಿಂದಾದ ಮೇಲೆ ನಾವು ಕೆಲವು ಆಹಾರಗಳನ್ನು ತಿನ್ನುವುದು ಒಳ್ಳೆಯದಲ್ಲ ಅದರಿಂದ ಜೀರ್ಣಕ್ರಿಯೆಗೆ ಅಪಾಯವಿದೆ.
ಕಲ್ಲಂಗಡಿಯೊಂದಿಗೆ ಕೆಲವು ರೀತಿಯ ಆಹಾರ ಸಂಯೋಜನೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಕಲ್ಲಂಗಡಿ ತಿಂದ ಮೇಲೆ ಯಾವುದೆಲ್ಲ ಆಹಾರವನ್ನು ತಿನ್ನಬಾರದು ಎಂದು ನೋಡುವುದಾದರೆ, ಕಲ್ಲಂಗಡಿ ತಿಂದ ನಂತರ ಹಾಲು ಕುಡಿಯುವುದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಹಾನಿಕಾರಕವನ್ನುಂಟು ಮಾಡುತ್ತದೆ. ಯಾಕೆಂದರೆ ಕಲ್ಲಂಗಡಿನಲ್ಲಿ ವಿಟಮಿನ್ ಸಿ ಇರುವುದರಿಂದ ಡೈರಿ ಉತ್ಪನ್ನಗಳನ್ನು ಸೇವಿಸಿದಾಗ ಅವು ಪರಸ್ಪರ ಪ್ರತಿಕ್ರಿಯಿಸುತ್ತದೆ ಮತ್ತು ಹೊಟ್ಟೆ ಉಬ್ಬುವಿಕೆಯನ್ನು ಉಂಟು ಮಾಡುತ್ತದೆ ಇದರಿಂದ ಅಜೀರ್ಣ ಉಂಟಾಗುತ್ತದೆ.
ಕಲ್ಲಂಗಡಿ ತಿಂದ ನಂತರ ಪ್ರೋಟಿನ್ ಆಹಾರಗಳನ್ನು ತಿನ್ನಬಾರದು. ಪ್ರೋಟಿನ್ ಭರಿತ ಆಹಾರವನ್ನು ಸೇವಿಸುವುದರಿಂದ ಹಾನಿಯಾಗುತ್ತದೆ ವಾಸ್ತವವಾಗಿ ಕಲ್ಲಂಗಡಿ ಜೀವ ಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ. ಬೇಳೆಕಾಳುಗಳಂತ ಪ್ರೋಟಿನ್ ಭರಿತ ಆಹಾರವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಹಾನಿಯಾಗುತ್ತದೆ.
ಕಲ್ಲಂಗಡಿ ತಿಂದ ನಂತರ ಮೊಟ್ಟೆಯನ್ನು ತಿನ್ನಬಾರದು. ಕಲ್ಲಂಗಡಿ ತಿಂದ ನಂತರ ಮೊಟ್ಟೆ ತಿಂದರೆ ಹೊಟ್ಟೆಗೆ ಹಲವಾರು ಸಮಸ್ಯೆಗಳು ಉಂಟಾಗುತ್ತವೆ..ಪ್ರೋಟೀನ್ ಜೊತೆಗೆ ಮೊಟ್ಟೆಗಳು ಒಮೆಗಾ 3 ನಂತ ಕೊಬ್ಬಿನ ಆಮ್ಲಗಳನ್ನು ಹೊಂದಿರುತ್ತವೆ. ಕಲ್ಲಂಗಡಿ ನೀರು ಭರಿತ ಹಣ್ಣು ಇವೆರಡು ಸೇರಿ ಜೀರ್ಣಕ್ರಿಯೆಗೆಯನ್ನುತಡೆಯುತ್ತವೆ.
ಆದ್ದರಿಂದ ಕಲ್ಲಂಗಡಿ ತಿಂದ ನಂತರ ಇದ್ಯಾವುದೇ ಪದಾರ್ಥಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಇದಲ್ಲದೆ ಕಲ್ಲಂಗಡಿ ತಿಂದಾದ ಮೇಲೆ ಸುಮಾರು 30 ನಿಮಿಷಗಳ ಕಾಲ ಏನನ್ನು ತಿನ್ನದೇ ಖಾಲಿ ಹೊಟ್ಟೆಯನ್ನು ಬಿಡುವುದು ತುಂಬಾ ಒಳ್ಳೆಯದು ಹೀಗೆ ಮಾಡುವುದರಿಂದ ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ.