ಮಂಗಳೂರು: ಆಲ್ ಕಾರ್ಗೋ ಟರ್ಮಿನಲ್ಸ್ ಲಿಮಿಟೆಡ್ ಝುಲೇಖಾ ಯೆನೆಪೋಯ ಇನ್ ಸ್ಟಿಟ್ಯೂಟ್ ಆಫ್ ಅಂಕೋಲೊಜಿ ಮಂಗಳೂರು ವಿಜೇತ ವಿಶೇಷ ಶಾಲೆ ಇವರ ಜಂಟಿ ಸಹಯೋಗದೊಂದಿಗೆ ವಿಜೇತ ವಿಶೇಷ ಶಾಲೆ ಅವರಣ ಅಯ್ಯಪ್ಪ ನಗರದಲ್ಲಿ ಕ್ಯಾನ್ಸರ್ ಸ್ಕ್ರೀನಿಂಗ್ ಹಾಗೂ ದಂತ ಚಿಕಿತ್ಸೆ, ಕಣ್ಣಿನ ಪರೀಕ್ಷೆ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಉಚಿತವಾಗಿ ಆಯೋಜಿಸಿದ್ದು ಶಿಬಿರದಲ್ಲಿ ಸುಮಾರು 212 ಪಲಾನುಭವಿಗಳ ತಪಾಸಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಡಾ ಅಶ್ವಿನಿ ಡೈರೆಕ್ಟರ್ ಯೆನೆಪೋಯ ಯುನಿವರ್ಸಿಟಿ, ಸೀನಿಯರ್ ಎಕ್ಸಿಕ್ಯುಟಿವ್ ಸಿ ಎಸ್ ಆರ್ ಅಲ್ ಕಾರ್ಗೋ ಲಾಜಿಷ್ಟಿಕ್ಸ್ ಲಿಮಿಟೆಡ್ ಸವಿಸ್ತಾರ್ ಆಳ್ವ,ಓ ಬಿ ಜಿ ಡೆಪಾರ್ಟ್ಮೆಂಟ್ ಡಾ. ಅಬ್ರಹಾರ್, ಮೆಡಿಸಿನ್ ಡೆಪಾರ್ಟ್ಮೆಂಟ್ ಡಾ.ಮ್ಯಾನ್ ವಲ್, ಡೆಂಟಲ್ ಸ್ಪೆಸಲಿಸ್ಟ್ ಡಾ.ಲಿಡಿಯಾ, ಫಿಸಿಯೋಥೆರಪಿಸ್ಟ್ ಡಾ.ವೆನ್ಸಿಟಾ ಪ್ರಿಯಾಂಕ ಆರಾನ್ಹಾ, ಕ್ಯಾಂಪ್ ಕೋರ್ಡಿನೇಟರ್ ರಜಾಕ್, ಎ ಪಿ ವಿಜೇತ ವಿಶೇಷ ಶಾಲಾ ಅಧ್ಯಕ್ಷರಾದ ರತ್ನಾಕರ ಅಮೀನ್, ಶ್ರೀ ದುರ್ಗಾ ವಿದ್ಯಾ ಸಂಘದ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ, ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ. ಕಾಂತಿ ಹರೀಶ್, ಮ್ಯಾನೇಜಿಂಗ್ ಟ್ರಸ್ಟಿ ಹರೀಶ್ ಉಪಸ್ಥಿತರಿದ್ದರು.
ವಿಜೇತ ವಿಶೇಷ ಶಾಲಾ ಮಕ್ಕಳು ಹೆತ್ತವರು ಹಾಗೂ ಸಿಬ್ಬಂದಿಯವರು ಸಾರ್ವಜನಿಕರು ಸುಮಾರು 212 ಕ್ಕಿಂತಲೂ ಹೆಚ್ಚು ಮಂದಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.
ವಿಶೇಷ ಶಿಕ್ಷಕಿ ಹರ್ಷಿತಾ ಕಿರಣ್ ಕಾರ್ಯಕ್ರಮ ನಿರೂಪಿಸಿ ಸ್ಥಾಪಕಿ ಡಾ ಕಾಂತಿ ಹರೀಶ್ ಸ್ವಾಗತಿಸಿದರು. ವಿಶೇಷ ಶಿಕ್ಷಕಿ ಶ್ರೀನಿಧಿ ವಂದಿಸಿದರು.