ನಾವು ನೀವೆಲ್ಲ ಸಾಮಾನ್ಯವಾಗಿ ಬಳಸುವ ಕಾರು ಅಥವಾ ಬೈಕ್ ಗಳ ಬಗ್ಗೆ ಅವುಗಳ ಮೈಲೇಜ್, ಇಂಧನ, ಅವುಗಳ ಸಾಮರ್ಥ್ಯ ಹೀಗೆ ಎಲ್ಲಾ ವಿಚಾರವೂ ನಿಮಗೆ ತಿಳಿದಿರಬಹುದು. ಆದರೆ ಎಂದಾದರೂ ನೀವು ಆಕಾಶದಲ್ಲಿ ಹಾರಾಡುವ ವಿಮಾನ ಎಷ್ಟು ಮೈಲೇಜ್ ಕೊಡುಬಹುದು, ಅದಕ್ಕೆ ಯಾವ ಇಂಧನ ಬಳಸಲಾಗುತ್ತೆ ಇವುಗಳ ಬಗ್ಗೆ ಯೋಚಿಸಿದ್ದೀರಾ.
ವಿಮಾನಕ್ಕೆ ಬಳಸುವ ಇಂಧನ ಯಾವುದು?
ವಾಯು ಮಾರ್ಗದಲ್ಲಿ ಹಾರಾಡುವ ವಿಮಾನ ಅಥವಾ ಹೆಲಿಕಾಪ್ಟರ್ ನಂತಹ ಜೆಟ್ ಗಳಿಗೆ ವಿಶೇಷವಾದ ಜೆಟ್ ಇಂಧನ ಬಳಸಲಾಗುತ್ತದೆ. ಈ ಇಂಧನವನ್ನು ವಾಯುಯಾನ ಸೀಮೆಎಣ್ಣೆ, ಕ್ಯೂಎವಿ ಎಂದೂ ಕೂಡ ಕರೆಯಲಾಗುತ್ತದೆ.
ಪೆಟ್ರೋಲಿಯಂ ನಿಂದ ಬಟ್ಟಿ ಇಳಿಸುವ ಮೂಲಕ ಈ ಜೆಟ್ ಇಂಧನವನ್ನು ತಯಾರಿಸಲಾಗುತ್ತದೆ. ಈ ಇಂಧನವನ್ನು ವಾಣಿಜ್ಯ ವಾಯು ಸಾರಿಗೆಯಲ್ಲಿ ಹೆಚ್ಚು ಬಳಸಲಾಗುತ್ತದೆ.
ಇಂಡಿಯನ್ ಆಯಿಲ್ ವೆಬ್ಸೈಟ್ ಪ್ರಕಾರ, ದೇಶಿಯ ವಿಮಾನಯಾನ ಮತ್ತು ಅಂತರಾಷ್ಟ್ರೀಯ ರನ್ಗಳಿಗೆ ಎಟಿಎಫ್ ಬೆಲೆಯಲ್ಲಿ ವ್ಯತ್ಯಾಸವಿದೆ. ದೆಹಲಿಯಲ್ಲಿ ಎಟಿಎಫ್ ಬೆಲೆ ಒಂದು ಕಿಲೋ ಲೀಟರ್ ಗೆ 1,07,750 ರೂಪಾಯಿ ಇದೆ. ಅಂದರೆ 1 ಲೀಟರ್ ಇಂಧನಕ್ಕೆ 107 ರೂಪಾಯಿ ಆಗುತ್ತದೆ. ಮುಂಬೈನಲ್ಲಿ ಈ ಇಂಧನದ ಬೆಲೆ 1,06,695 ರೂಪಾಯಿ, ಕೊಲ್ಕತ್ತಾದಲ್ಲಿ 1,15,091 ರೂಪಾಯಿ ಇದೆ.
ಇನ್ನು ವಿಮಾನವು ಎಷ್ಟು ಮೈಲೇಜ್ ನೀಡುತ್ತದೆ ಎಂದು ನೋಡುವುದಾದರೆ, ಹಾರಾಟದ ನೆಲದ ವೇಗ ಗಂಟೆಗೆ 900 ಕಿಲೋಮೀಟರ್ ಅಂದರೆ ಒಂದು ಸೆಕೆಂಡಿಗೆ ವಿಮಾನವು 250 ಮೀಟರ್ ವೇಗವಾಗಿ ಸಾಗುತ್ತದೆ. ಜೊತೆಗೆ ಒಂದು ಗಂಟೆಗೆ 2400 ಲೀಟರ್ ಪೆಟ್ರೋಲ್ ಬಳಸಲಾಗುತ್ತದೆ.