ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದ್ದು, ಅಭ್ಯರ್ಥಿಗಳ ಅಖಾಡಕ್ಕೆ ಇಳಿದು ಭರ್ಜರಿ ಪ್ರಚಾರವನ್ನು ನಡೆಸುತ್ತಿದ್ದಾರೆ. ಚುನಾವಣಾ ಆಯೋಗವು ಭರದ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ.
ಚುನಾವಣೆಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿಯನ್ನು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ನೀಡಿದ್ದು, ಈ ಬಾರಿ ರಾಜ್ಯದಲ್ಲಿ ಒಟ್ಟಾರೆ ೫.೩೧ಕೋಟಿ ಮತದಾರರು ಮತಚಲಾಯಿಸಲು ಆರ್ಹರಾಗಿದ್ದು, ಒಟ್ಟು ಮತದಾರರ ಪೈಕಿಯಲ್ಲಿ ೨.೬೭ ಪುರುಷ ಮತದಾರರ ೨.೬೪ಕೋಟಿ ಮಹಿಳೆಯರು ಹಾಗೂ ೪೯೨೭ ಇತರ ಮತದಾರರು ಇದ್ದಾರೆ ಎಂದು ಹೇಳಿದ್ದಾರೆ.
ಮೊದಲ ಬಾರಿಗೆ ಮತ ಚಲಾಯಿಸಲು ೧೧.೭೧ ಲಕ್ಷ ಮತದಾರರು ನೋಂದಾವಣೆಯನ್ನು ಮಾಡಿಕೊಂಡಿದ್ದು ಅದರಲ್ಲಿ ೬.೪೫ ಲಕ್ಷ ಪುರುಷ ಮತದಾರರು ಹಾಗೂ ೫.೨೬ ಲಕ್ಷ ಮಹಿಳೆಯರು ಮತ್ತು ೧೮೧ ಇತರರು ಇದ್ದಾರೆ ಎಂದು ತಿಳಿಸಿದ್ದಾರೆ.
ಇಲ್ಲಿಯವರೆಗೆ ೩೭.೯೪ಲಕ್ಷ ಮತದಾರರಿಗೆ ಗುರುತಿನ ಚೀಟಿಯನ್ನು ನೀಡಲಾಗಿದ್ದು ಈ ತಿಂಗಳ ಅಂತ್ಯದ ಒಳಗೆ ೩.೫೦ ಮತದಾರ ಚೀಟಿಯನ್ನು ವಿತರಿಸಲಾಗುವುದು ಎಂದು ಹೇಳಿದರು.
ಮೊದಲು ಮತದಾರರ ಸಂಖ್ಯೆಗೆ ಅನುಗುಣವಾಗಿ ೫೮೨೮೨ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು ನಂತರ ಮತದಾರರ ನೋಂದಾವಣಿ ಹೆಚ್ಚಳವಾಗಿರುವುದರಿಂದ ೨೬೩ ಮತಗಟ್ಟೆಗಳನ್ನು ಹೆಚ್ಚಾಳ ಮಾಡಿ ಒಟ್ಟು ೫೮೫೪೫ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತಗಟ್ಟೆಯ ಹೆಚ್ಚಳವು ಸರತಿ ಸಾಲಿನಲ್ಲಿ ಅತಿ ಹೆಚ್ಚು ಹೊತ್ತು ನಿಲ್ಲುವ ಸಮಯವನ್ನು ಕಡಿಮೆ ಮಾಡಲಿದೆ.
ಚುನಾವಣಾ ಕಣದಲ್ಲಿ ೨೬೧೫ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ ೨೪೨೯ ಪುರುಷರು ಮತ್ತು ೧೮೫ ಮಹಿಳಾ ಅಭ್ಯರ್ಥಿಗಳಿದ್ದಾರೆ ಎಂದು ತಿಳಿಸಿದ್ದಾರೆ