ಕಾಂತಾರ ಸಿನಿಮಾ ಎಬ್ಬಿಸಿದ ಹೈಪ್ ಕನ್ನಡ ಚಿತ್ರರಂಗದ ಮಟ್ಟಿಗೆ ದೊಡ್ಡ ಯಶಸ್ಸನ್ನೇ ತಂದುಕೊಟ್ಟಿದ್ದು ಸುಳ್ಳಲ್ಲ. ಕಾಂತಾರ ಸಿನಿಮಾ ಸಾಕಷ್ಟು ವಿಷಯಗಳಿಂದ ವಿಶೇಷ.
ನಟ, ನಿರ್ದೇಶಕ ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಕಾಂತಾರ ಸಿನಿಮಾ ರಿಷಬ್ ಶೆಟ್ಟಿ ಲಕ್ನ್ನೇ ಬದಲಾಯಿಸಿದ ಚಿತ್ರವಾಗಿದೆ. ಈ ಸಿನಿಮಾದಲ್ಲಿ ರಿಷಬ್ ಪತ್ನಿ ಪ್ರಗತಿ ರಿಷಬ್ ಶೆಟ್ಟಿ ಕೂಡ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ಅವರ ಮಕ್ಕಳು ಕೂಡಾ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಶೂಟಿಂಗ್ ದಿನಗಳನ್ನು ಮೆಲುಕು ಹಾಕುತ್ತಾ ರಿಷಬ್ ಶೆಟ್ಟಿ ಅವರ ಹೆಂಡತಿ ಪ್ರಗತಿ ರಿಷಬ್ ಶೆಟ್ಟಿ ಅವರು ಇದೀಗ ಇನ್ಸ್ಟಾಗ್ರಾಮ್ ಪೋಸ್ಟ್ ಹಂಚಿಕೊAಡಿದ್ದಾರೆ.
ನಿಮಗೆಲ್ಲ ಗೊತ್ತಿರುವ ಹಾಗೆ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಕಾಂತಾರ ಸಿನಿಮಾದಲ್ಲಿ ರಾಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ರಾಜನ ಜೊತೆ ನಡೆದು ಬರುವಾಗ ಪ್ರಗತಿ ಶೆಟ್ಟಿಯಲ್ಲಿ ಕೈಯಲ್ಲಿ ತನ್ನ ಪುಟ್ಟ ಮಗವನ್ನು ಕೂಡ ಹಿಡಿದ್ದಾರೆ. ರಾಜ ರಿಷಬ್ ಮಗನನ್ನು ಎತ್ತಿಕೊಂಡಿರುವ ದೃಶ್ಯವನ್ನು ಸಿನಿಮಾದಲ್ಲಿ ಕಾಣಬಹುದಾಗಿದೆ. ಈ ಫೋಟೋಗಳನ್ನು ಇದೀಗ ಪ್ರಗತಿ ಶೆಟ್ಟಿ ಹಂಚಿಕೊ0ಡಿದ್ದಾರೆ.
ಕಾಂತಾರ ಸಿನಿಮಾದೊಂದಿಗಿನ ನನ್ನ ಅನುಭವವು ನಿಜವಾಗಿಯೂ ಅವಿಸ್ಮರಣೀಯ ಕ್ಷಣವಾಗಿದೆ ಎಂದು ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಬರೆದುಕೊಂಡಿದ್ದಾರೆ.
ನಾನು 2ನೇ ಮಗುವಿಗೆ ಗರ್ಭಿಣಿಯಾಗಿದ್ದ ವೇಳೆ ಕಾಂತಾರ ಸಿನಿಮಾ ಆರಂಭವಾಯಿತು. ಬಳಿಕ ನನ್ನ ಇಬ್ಬರು ಮಕ್ಕಳು ಸಿನಿಮಾದ ಕ್ಯಾಮೆರಾ ಮುಂದೆ ಕಾಣಿಸಿಕೊಂಡರು. ಇದು ನನ್ನ ಜೀವನದ ಅದ್ಭುತ ಕ್ಷಣ ಎಂದು ನಟಿ ಹೇಳಿದ್ದಾರೆ.
ಕಾಂತಾರ ಸಿನಿಮಾದಲ್ಲಿ ನಟನೆ ಜೊತೆಗೆ ಕಾಸ್ಟ್ಯೂಮ್ ಡಿಸೈನರ್ ಆಗಿಯೂ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ, ಈ ನೆನಪುಗಳು ಎಂದೆAದಿಗೂ ಮೆರೆಯಲಾಗದ ಸಿಹಿ ನೆನಪುಗಳು ಎಂದು ಪ್ರಗತಿ ಶೆಟ್ಟಿ ಬರೆದುಕೊಂಡಿದ್ದಾರೆ.
ರಿಷಬ್ ಶೆಟ್ಟಿ ಪ್ರತಿ ಹೆಜ್ಜೆಯಲ್ಲೂ ಅವರನ್ನು ಹುರಿದುಂಬಿಸುವ ಪ್ರಗತಿ ಶೆಟ್ಟಿಯ ಬಗ್ಗೆ ರಿಷಬ್ ಮೆಚ್ಚುಗೆಯ ಮಾತುಗಳನ್ನ ಆಡುತ್ತಾರೆ.